ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್ ಎಂದಾಕ್ಷಣ ಕರ್ನಾಟಕದ ನೆನಪಾಗುತ್ತೆ. ಸದ್ಯ ಈ ಸೋಪಿನ ಹೆಸರು ಕೇಳದವರೇ ಇಲ್ಲ. ಇದೀಗ ಕರ್ನಾಟಕ ಬ್ರ್ಯಾಂಡ್ ಆಗಿರೋ ಮೈಸೂರ್ ಸ್ಯಾಂಡಲ್ ನ್ನು ಕೇರಳ ನಕಲು ಮಾಡಿದೆ. ಕೆಎಸ್ಆರ್ ಟಿಸಿ ತನ್ನ ಹಕ್ಕು ಎಂದಿದ್ದ ಕೇರಳ ಇದೀಗ ಮೈಸೂರ್ ಸ್ಯಾಂಡಲ್ ಸೋಪ್ ಕೂಡ ತನ್ನದೇ ಅನ್ನೋ ಕಾಲ ದೂರವಿಲ್ಲ.

ಹೌದು, ಮೊನ್ನೆ ಮೊನ್ನೆಯಷ್ಟೇ ಕೆಎಸ್ಆರ್ ಟಿಸಿ ಹೆಸರಿನ ವಿಚಾರದಲ್ಲಿ ಕೇರಳ ಕ್ಯಾತೆ ತೆಗೆದಿತ್ತು. KSRTC ಹೆಸರನ್ನು ಕರ್ನಾಟಕ ಬಳಕೆ ಮಾಡಬಾರದು. ಈ ಕುರಿತು ಕರ್ನಾಟಕಕ್ಕೆ ನೋಟೀಸ್ ಜಾರಿ ಮಾಡುವುದಾಗಿಯೂ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಕರ್ನಾಟಕದ ಪ್ರಖ್ಯಾತ ಸೋಪನ್ನೇ ಕಾಪಿ ಮಾಡಿ ಕೇರಳ ಸ್ಯಾಂಡಲ್ ಅಂತಾ ನಾಮಕರಣ ಮಾಡಿದೆ.

1916ರಲ್ಲಿ ಆರಂಭಗೊಂಡ ಮೈಸೂರ ಸ್ಯಾಂಡಲ್ ಸೋಪ್ ಅಂದಿನಿಂದ ಇಂದಿನವರೆಗೂ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಪ್ರಸಿದ್ದ ಸಾಮೂಬುಗಳಿಗೆ ಸಡ್ಡು ಹೊಡೆಯುವ ಮೂಲಕ ತನ್ನ ಸುಮವನ್ನು ಎಲ್ಲೆಡೆ ಪಸರಿಸಿದೆ. ಕೆಲವರಂತೂ ಹಲವು ವರ್ಷ ಗಳಿಂದಲೂ ಮೈಸೂರು ಸ್ಯಾಂಡಲ್ ಸೋಪ್ ಬಳಕೆ ಮಾಡುತ್ತಿದ್ದಾರೆ. ಆದ್ರೆ ಕೇರಳ ಇದೇ ಸೋಪ್ ನ್ನು ಕಾಪಿ ಮಾಡಿದೆ. 2010ರಲ್ಲಿ ಆರಂಭಗೊಂಡ ಕೇರಳ ಸ್ಯಾಂಡಲ್ ಸೋಪ್ ನೋಡಿದ್ರೆ ಮೈಸೂರು ಸ್ಯಾಂಡಲ್ ಸೋಪಿನಂತೆಯೇ ಕಾಣುತ್ತದೆ. ಸೋಪಿನ ಸೈಜ್, ಬಾಕ್ಸ್ ಎಲ್ಲವನ್ನೂ ನಕಲು ಮಾಡಲಾಗಿದೆ.

ಕರ್ನಾಟಕದಂತೆ ಕೇರಳದಲ್ಲಿಯೂ ಕೇರಳ ಸ್ಯಾಂಡಲ್ ಸೋಪ್ ಬಹು ಖ್ಯಾತಿಯನ್ನು ಪಡೆದುಕೊಂಡಿದೆ. ಈಗಾಗಲೇ ಸಾರಿಗೆ ವಿಚಾರದಲ್ಲಿ ಕಿರಿಕ್ ಮಾಡಿರುವ ಕೇರಳ ಮುಂದೊಂದು ದಿನ ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಬಳಸುವಂತಿಲ್ಲ ಅಂತಾ ನೋಟಿಸ್ ನೀಡಿದ್ರೂ ಆಶ್ಚರ್ಯವಿಲ್ಲ.