ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರಪ್ರದೇಶ ಸರಕಾರದ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ. ಪರೀಕ್ಷೆಯಿಂದ ಒಂದೇ ಒಂದು ಸಾವು ಸಂಭವಿಸಿದ್ರೂ ಸರ್ಕಾರವೇ ಹೊಣೆ ಎಂದಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್ ಇ ಹಾಗೂ ಐಸಿಎಸ್ಇ ಬೋರ್ಡ್ ಗಳು ಈಗಾಗಲೇ 10 ಹಾಗೂ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿವೆ. 21 ರಾಜ್ಯಗಳು ಪರೀಕ್ಷೆಯನ್ನು ರದ್ದು ಗೊಳಿಸಿವೆ. ಈ ನಡುವಲ್ಲೇ ಆಂಧ್ರಪ್ರದೇಶ ಸರಕಾರ ಪರೀಕ್ಷೆ ನಡೆಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಪರೀಕ್ಷೆಯನ್ನು ನಡೆಸುವ ಸರಕಾರದ ಕ್ರಮದ ವಿರುದ್ದ ಸಲ್ಲಿಕೆ ಯಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಇಡಲು ಸಾಧ್ಯವಾಗದು. 2 ದಿನದಲ್ಲಿ ಸರಕಾರ ತನ್ನ ನಿರ್ಧಾರವನ್ನು ತಿಳಿಸಬೇಕು. ಪರೀಕ್ಷೆಯಿಂದ ಸಾವು ಸಂಭವಿಸಿದ್ರೆ ಸರಕಾರವನ್ನೇ ಹೊಣೆ ಎಂದಿದೆ. ಆಂಧ್ರಪ್ರದೇಶ ಸರಕಾರದ ಪರ ವಾದ ಮಂಡಿಸಿದ ವಕೀಲರಾದ ಮಹಪೂಜ್ ನಾಕ್ಷಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಕಾರಣ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ 2 ದಿನಗಳ ಕಾಲಾವಕಾಶ ನೀಡಿದ್ದು ಎರಡು ದಿನಗಳ ಒಳಗಾಗಿ ಸರಕಾರ ತನ್ನ ನಿಲುವನ್ನು ಪ್ರಕಟಿಸಬೇಕಾಗಿದೆ. ಸರಕಾರ ಪರೀಕ್ಷೆಯನ್ನು ರದ್ದು ಮಾಡುತ್ತಾ, ಇಲ್ಲ ನಡೆಸುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ಆಂಧ್ರ ಸರಕಾರದ ನಿರ್ಧಾರ ಇತರ ರಾಜ್ಯಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.