Biggboss: ನಾಮಿನೇಷನ್ ಬೆಂಕಿಯೊಂದಿಗೆ ದೊಡ್ಮನೆ ಆಟ….! ಇಂದು ಬಿಗ್ ಬಾಸ್ ಮಹಾಸಂಚಿಕೆ ಪ್ರಸಾರ….!!

ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಇಂದಿನಿಂದ ಮತ್ತೆ ಪ್ರಸಾರವಾಗಲಿದ್ದು, ಮೊದಲ ದಿನದ ಮಹಾ ಸಂಚಿಕೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಅದರಲ್ಲೂ ಕಲರ್ಸ್ ಕನ್ನಡವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿನ ನಾಮಿನೇಶನ್, ಬೆಂಕಿ ಪರಸ್ಪರ ಆರೋಪ-ಪ್ರತ್ಯಾರೋಪ ಸಂಚಿಕೆಯ ಕುತೂಹಲ ಹೆಚ್ಚಿಸಿದೆ.

ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಿ ರಾಜ್ಯದಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿತ್ತು. ಹೀಗಾಗಿ ಮನೋರಂಜನಾ ಕ್ಷೇತ್ರ ತನ್ನ ಕಾರ್ಯಚಟುವಟಿಕೆ ನಿಲ್ಲಿಸಿದ್ದರಿಂದ ಅನಿವಾರ್ಯವಾಗಿ ಬಿಗ್ ಬಾಸ್ ಶೋ ಅಂತ್ಯಗೊಳಿಸಲಾಗಿತ್ತು.

ಆದರೆ 12 ಸ್ಪರ್ಧಿಗಳಿದ್ದಾಗ ಸ್ಥಗಿತಗೊಂಡಿದ್ದ ಶೋವನ್ನು ಮತ್ತೆ 12 ಸ್ಪರ್ಧಿಗಳೊಂದಿಗೆ ನಿಂತಲ್ಲಿಂದನೇ ಆರಂಭಿಸಿ ದಡಮುಟ್ಟಿಸುವ ಪ್ರಯತ್ನಕ್ಕೆ ಕೈಹಾಕಿದೆ ಕಲರ್ಸ್ ಕನ್ನಡ ವಾಹಿನಿ. ಹೀಗಾಗಿ ಈಗಾಗಲೇ ಶೋ ಆರಂಭಕ್ಕೆ ಸಜ್ಜಾಗಿದ್ದು, ಇಂದು ಮಹಾಸಂಚಿಕೆ ಪ್ರಸಾರವಾಗಿದೆ.

ಶೋಗಾಗಿ ಅಭ್ಯರ್ಥಿಗಳಿಗೆ ಲಸಿಕೆ ಕೊಡಿಸಿ ಕ್ವಾರಂಟೈನ್ ಕೂಡ ಮಾಡಲಾಗಿದ್ದು, ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಜೊತೆ ಶೋ ಶೂಟಿಂಗ್ ಆರಂಭವಾಗಿದೆ.

ಈ ಮಧ್ಯೆ ಇಂದು ಪ್ರಸಾರವಾಗಲಿರುವ ಶೋದ ಮಹಾಸಂಚಿಕೆಯಲ್ಲಿ ಅಭ್ಯರ್ಥಿಗಳಿಗೆ ಇದುವರೆಗಿನ ಶೋ ತೋರಿಸಿ ನಾಮಿನೇಶನ್ ನಡೆಸಲು ಅವಕಾಶ ನೀಡಲಾಗಿದೆ.

https://www.instagram.com/p/CQc_lebLsSB/?utm_medium=copy_link

ಕ್ಯಾಮರಾ ಎದುರು ಮತ್ತು ಹಿಂದಿನ ಮುಖವಾಡವನ್ನು ತೋರಿಸಲಾಗಿದ್ದು, ಹೀಗಾಗಿ ಯಾವ ಸ್ಪರ್ಧಿಯನ್ನು ನಾಮಿನೇಟ್ ಮಾಡುತ್ತಾರೋ ಅವರ ಪೋಟೋವನ್ನು ಬೆಂಕಿಗೆ ಹಾಕುವ ಅವಕಾಶ ನೀಡಲಾಗಿದೆ.

ದೃಶ್ಯಗಳಲ್ಲಿ ಪ್ರಶಾಂತ್ ಸಂಬರಗಿ ಸೇರಿದಂತೆ ಹಲವರ ಮೇಲೆ ದೋಷಾರೋಪಣೆಗಳ ಪಟ್ಟಿಯೇ ಕೇಳಿಬಂದಿದ್ದು, ಸ್ಪರ್ಧಿಗಳು ಪರಸ್ಪರ ಕೆಸರು ಎರೆಚಾಟದಲ್ಲಿ ತೊಡಗಿರುವ ಪ್ರೋಮೋ ಮಹಾಸಂಚಿಕೆಯ ಕುತೂಹಲ ಹೆಚ್ಚಿಸಿದೆ.

Comments are closed.