ಸೋಮವಾರ, ಏಪ್ರಿಲ್ 28, 2025
HomeBreakingPoison: ಹೆಂಡತಿ ಮೇಲಿನ ಕೋಪಕ್ಕೆ ಐಸ್ ಕ್ರೀಂಗೆ ಇಲಿಪಾಷಾಣ ಬೆರೆಸಿ ಮಕ್ಕಳಿಗೆ ನೀಡಿದ ತಂದೆ…!!

Poison: ಹೆಂಡತಿ ಮೇಲಿನ ಕೋಪಕ್ಕೆ ಐಸ್ ಕ್ರೀಂಗೆ ಇಲಿಪಾಷಾಣ ಬೆರೆಸಿ ಮಕ್ಕಳಿಗೆ ನೀಡಿದ ತಂದೆ…!!

- Advertisement -

ಗಂಡ-ಹೆಂಡಿರ ಜಗಳದಲ್ಲಿ ಮೂವರು ಮಕ್ಕಳು ಸಾವಿನ ಮನೆ ಕದ ತಟ್ಟಿದ್ದು ಒಂದು ಮಗು ಸಾವನ್ನಪ್ಪಿದ ದುರ್ಘಟನೆ ಮುಂಬೈನಲ್ಲಿ ನಡೆದಿದೆ. ಪತ್ನಿ ಮೇಲಿನ ಸಿಟ್ಟಿಗೆ ಪತಿ ಮಕ್ಕಳಿಗೆ ವಿಷಯುಕ್ತ ಐಸ್ ಕ್ರೀಂ ತಿನ್ನಿಸಿದ್ದಾನೆ.

ಜೂನ್ 25 ರಂದು ನೌಶಾದ್ ಅಲಿ ಎಂಬಾತ ತನ್ನ ಪತ್ನಿ ಜೊತೆ ಜಗಳವಾಡಿಕೊಂಡಿದ್ದ. ಪತ್ನಿ ಮೇಲಿನ ಸಿಟ್ಟು ತೀರಿಸಿಕೊಳ್ಳಲು ಮೂವರು ಮಕ್ಕಳಿಗೆ ನೌಶಾದ್ ವಿಷ ಬೆರೆಸಿದ ಐಸ್ ಕ್ರೀಂ ತಿನ್ನಿಸಿ ಕೌರ್ಯ ಮೆರೆದಿದ್ದಾನೆ.

Dessert is Poison., concept Toxic in the form of ice cream.

ಮನ್ ಖುರ್ದ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಅಲಿಷನ್ ಅಲಿ, ಆಲಿನ್,ಅರ್ಮಾನ್  ಗೆ ಇಲಿ ಪಾಷಾಣ ಬೆರೆಸಿದ  ಐಸ್ ಕ್ರೀಂ ತಿಂದ ಮಕ್ಕಳು. ಈ ಪೈಕಿ 5 ವರ್ಷದ ಅಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಮಕ್ಕಳು ತಂದೆಯನ್ನು ನಂಬಿ ಐಸ್ ಕ್ರೀಂ ತಿಂದು ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪಾಪಿ ತಂದೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

RELATED ARTICLES

Most Popular