ಕೋವ್ಯಾಕ್ಸಿನ್ ಲಸಿಕೆ ಬಳಕೆ ಬಗ್ಗೆ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ತನ್ನ ಕೋವ್ಯಾಕ್ಸಿನ್ ಲಸಿಕೆ ಕೊರೋನಾ ವಿರುದ್ಧ ಶೇಕಡಾ 77.8 ರಷ್ಟು ಪರಿಣಾಮಕಾರಿ ಎಂದು ಬಯೋಟೆಕ್ ಹೇಳಿಕೊಂಡಿದ್ದು, ಟೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿದೆ ಲಸಿಕೆ ಎಂಬ ವಿವರಣೆ ನೀಡಿದೆ.

ತೀವ್ರ ತರಹದ ರೋಗ ಲಕ್ಷಣಗಳಿದ್ದ ರೋಗಿಗಳಿಗೆ ಶೇಕಡಾ 93.4 ರಷ್ಟು ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್ ಲಸಿಕೆ, ಒಟ್ಟಾರೆ ಕೋವಿಡ್ ವಿರುದ್ಧ 77,8 ರಷ್ಟು ಪರಿಣಾಮಕಾರಿಯಾಗಿದೆ ಎಂದು ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಬಳಿಕ ಕೋವ್ಯಾಕ್ಸಿನ್ ಬಗ್ಗೆ ಬಯೋಟೆಕ್ ಮಾಹಿತಿ ನೀಡಿದೆ.

ಕೊರೋನಾ ರೂಪಾಂತರಿ ವೈರಸ್ ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್, ಶೇಕಡಾ 65.2 ರಷ್ಟು ರಕ್ಷಣೆ ನೀಡಬಲ್ಲದು. ಆದರೆ ಕೊರೋನಾ ಲಕ್ಷಣಗಳು ತೀವ್ರವಾಗಿದ್ದರೇ, ಕೋವ್ಯಾಕ್ಸಿನ್ 93.4 ರಷ್ಟು ಹೆಚ್ಚು ಎಫೆಕ್ಟ್ ಮಾಡಬಲ್ಲದಾಗಿದ್ದು, ರೋಗಲಕ್ಷಣಗಳಿಲ್ಲದ ರೋಗಿಗಳಿಗೆ ಕೋವ್ಯಾಕ್ಸಿನ್ 63.3 ರಷ್ಟು ರಕ್ಷಣೆ ನೀಡುತ್ತದೆ ಎಂದು ಬಯೋಟೆಕ್ ಹೇಳಿದೆ.

ಬಯೋಟೆಕ್, ತನ್ನ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆಯನ್ನು ದೇಶದ ವಿವಿಧ ಭಾಗದ 25 ಆಸ್ಪತ್ರೆಗಳಲ್ಲಿ 18 ರಿಂದ 98 ವಯಸ್ಸಿನ ಒಟ್ಟು 25,800 ಸ್ವಯಂಸೇವಕರ ಮೇಲೆ ಪ್ರಯೋಗ ನಡೆದಿತ್ತು.

ಕೋವ್ಯಾಕ್ಸಿನ್ ಎರಡು ಡೋಸ್ ಲಸಿಕೆ ಪಡೆದ ಎರಡು ವಾರಗಳ ನಂತರದ ವ್ಯಕ್ತಿ ಹಾಗೂ ತೀವ್ರತರವಾದ ಕೊರೋನಾ ಗುಣಲಕ್ಷಣವಿರುವ ಒಟ್ಟು 130 ರೋಗಿಗಳ ಮೇಲೆ ನಡೆದ ಪ್ರಯೋಗವನ್ನು ಬಯೋಟೆಕ್ ವಿಶ್ಲೇಷಿಸಿದೆ.

ಜನವರಿಯಲ್ಲಿ ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಯುವ ಮುನ್ನವೇ ಬಳಕೆಗೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.