Liquor sale:ಲಾಕ್ ಡೌನ್ ಎಫೆಕ್ಟ್….! ಮದ್ಯ ಮಾರಾಟದಲ್ಲಿ ದಾಖಲೆ ಬರೆದ ಅಬಕಾರಿ ಇಲಾಖೆ….!!

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ನಿಂದ ಜಾರಿಯಾಗುತ್ತಲೇ ಇರುವ ಲಾಕ್ ಡೌನ್ ನಿಯಮಗಳಿಂದ ಜನರು ಕಂಗಾಲಾಗಿದ್ದರೇ ಮದ್ಯ ಪ್ರಿಯರು ಮಾತ್ರ ಹಿಂದೆಂದಿಗಿಂತ ಹೆಚ್ಚು ಎಣ್ಣೆ ಹೊಡೆದು ಖುಷಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಲಾಕ್ ಡೌನ್ ನಲ್ಲಿ ಮಾರಾಟವಾದ ಮದ್ಯದ ಪ್ರಮಾಣ.

ಏಪ್ರಿಲ್ ನಿಂದ ಜೂನ್ ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ಬರೋಬ್ಬರಿ 5,954 ಕೋಟಿ ರೂಪಾಯಿ ಆದಾಯ ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ಸಂದಾಯವಾಗಿದೆ.

ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 3 ಕೋಟಿ 831 ಲಕ್ಷ ರೂಪಾಯಿ ಆದಾಯ ಪಡೆದಿದ್ದ ರಾಜ್ಯ ಸರ್ಕಾರ  ಈ ಭಾರಿ ಹೆಚ್ಚುವರಿ 2,122 ಕೋಟಿ ಆದಾಯ ಸಂಗ್ರಹಿಸಿದೆ.

2020 ರಲ್ಲಿ ಏಪ್ರಿಲ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ಮಾರಾಟವಾದ ಮದ್ಯಕ್ಕಿಂತ ಈ ವರ್ಷ ಇದೇ ಅವಧಿಯಲ್ಲಿ ಶೇಕಡಾ 55.41 ರಷ್ಟು ಎಣ್ಣೆ ಹೆಚ್ಚು ಮಾರಾಟವಾಗಿದೆ. ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ 154.19 ಲಕ್ಷ ಲೀಟರ್ ಲಿಕ್ಕರ್ ಮಾರಾಟವಾಗಿದೆ.

ಕಳೆದ ವರ್ಷ ಕೇವಲ 100,07ಲಕ್ಷ ಲೀಟರ್ ಮದ್ಯ ಮಾರಾಟವಾಗಿತ್ತು. 2021ರ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ 45.38 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೇ, ಕಳೆದ ವರ್ಷ 11 ಲಕ್ಷ ಲೀಟರ್ ನಷ್ಟು ಬಿಯರ್ ಬಿಕರಿಯಾಗಿತ್ತು.

ಒಟ್ಟಾರೆ ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಶೇಕಡಾ 53 ರಷ್ಟು ಲಿಕ್ಕರ್ ಹಾಗೂ ಶೇಕಡಾ 34 ರಷ್ಟು ಬಿಯರ್ ಮಾರಾಟವಾಗಿದೆ.

Comments are closed.