ಕುಂದಾಪುರ : ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಉದ್ಯಮಿಯೋರ್ವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಳ್ವಾಡಿಯಲ್ಲಿ ನಡೆದಿದೆ. ಕುಂದಾಪುರದ ಡ್ರೀಮ್ ಫೈನಾನ್ಸ್ ಪಾಲುದಾರ, ಯಡ್ಯಾಡಿ ಮತ್ಯಾಡಿ ಕೊಡಲ್ ನಿವಾಸಿಯಾಗಿರುವ ಅಜೇಂದ್ರ ಶೆಟ್ಟಿ ( 33 ವರ್ಷ) ಎಂಬವರೇ ಕೊಲೆಯಾದವರು.
ಕಳೆದ ಏಳು ವರ್ಷಗಳಿಂದಲೂ ಸಳ್ವಾಡಿಯಲ್ಲಿ ಡ್ರೀಮ್ ಫೈನಾನ್ಸ್ ಹೆಸರಿನಲ್ಲಿ ಪಾಲುದಾರಿಕೆಯಲ್ಲಿ ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ ನಿನ್ನೆ ತಡರಾತ್ರಿಯ ವರೆಗೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಕೊಲೆಯಾಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ : Lockdown : ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ..!!! ಇಂದು ಸಿಎಂ ಮಹತ್ವದ ಸಭೆ
ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆಯಾ ಇಲ್ಲಾ ಬೇರೆ ವಿಚಾರಕ್ಕೆ ಈ ಹತ್ಯೆ ನಡೆದಿದೆಯಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.