ಮಂಗಳವಾರ, ಜೂನ್ 17, 2025
HomeCinemakangana ranaut : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!

kangana ranaut : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!

- Advertisement -

ಸಿನಿಮಾ ಹಾಗೂ ವಿವಾದ ಎರಡಲ್ಲೂ ಬ್ಯುಸಿಯಾಗಿರೋ ನಟಿಮಣಿ ಹಾಗೂ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೇರಿಸುವ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದಾರೆ.

Kanagana 1 2

ಸದ್ಯ ಧಾಕಡ್  ಶೂಟಿಂಗ ಮುಗಿಸಿರೋ ಕಂಗನಾ ರನಾವುತ್  ಜಾವೇದ್ ಅಖ್ತರ್ ಕೇಸ್ ನಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾದ ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಶೂಟಿಂಗ್,ಪಾರ್ಟಿ ಅಂತ ಸಖತ್ ಎಂಜಾಯ್ ಮಾಡ್ತಿರೋ ನಟಿ ಹಾಟ್ ಪೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

Kanagana 1 1

ಧಾಕಡ್ ಸಿನಿಮಾ ಶೂಟಿಂಗ್ ಗಾಗಿ ಯುರೋಪ್ ಗೆ ತೆರಳಿದ್ದ ಕಂಗನಾ ಶೂಟಿಂಗ್ ಮುಗಿದ ಖುಷಿಯಲ್ಲಿ ಪಾರ್ಟಿಯಲ್ಲಿ ಭಾಗವಹಿಸಿ ಕುಣಿದು ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ಪಾರ್ಟಿಯ ಸಖತ್ ಹಾಟ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ, ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಚ್ಚಬಿಳುಪಿನ ಓಫನ್ ಚೆಸ್ಟ್ ಡ್ರೆಸ್ ಹಾಗೂ ಅಚ್ಚ ಹಸಿರಿನ ಗೌನ್ ನಲ್ಲಿ ಕಂಗನಾ ಮಾದಕ ಸೌಂದರ್ಯ ಪಡ್ಡೆಗಳ ಮತ್ತೇರಿಸುವಂತಿದ್ದು, ಬೋಲ್ಡ್ ಪೋಟೋಗಳನ್ನು ಹಂಚಿಕೊಂಡ ಕಂಗನಾ ಇನ್ ಸ್ಟಾಗ್ರಾಂನಲ್ಲಿ ಲೈಕ್ಸ್ ಗಳ ಸುರಿಮಳೆಯೇ ಬಿದ್ದಿದೆ.

ರಂಜನೀಯ್ ಘಾಯ್ ನಿರ್ದೇಶನದ ದಾಕಡ್ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಕಂಗನಾ ರನಾವುತ್ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ತಮಿಳಿನ ತಲೈವಿ ಚಿತ್ರ ಬಿಡುಗಡೆಗೆ ಬಾಕಿ ಇದ್ದು, ಇಂದಿರಾಗಾಂಧಿ ಜೀವನಾಧಾರಿತ ಸಿನಿಮಾವನ್ನು ಕಂಗನಾ ನಿರ್ದೇಶಿಸಲಿದ್ದು, ಇದಕ್ಕಾಗಿ ಸ್ಕ್ರಿಪ್ಟ್ ತಯಾರಿಯಲ್ಲಿದ್ದಾರೆ. ಚಿತ್ರಕ್ಕೆ ಕಂಗನಾ ಎಮರ್ಜೆನ್ಸಿ ಎಂದು ಹೆಸರಿಟ್ಟಿದ್ದಾರೆ.

RELATED ARTICLES

Most Popular