ಸೋಮವಾರ, ಜೂನ್ 16, 2025
HomeCinemaತೆರೆಗೆ ಬರಲಿದೆ ನಟಿ ಭಾರತಿ ಅಂತರಾಳ…! ನಟ ಅನಿರುದ್ಧ ರಿಲೀಸ್ ಮಾಡಿದ್ರು ಟ್ರೇಲರ್…!!

ತೆರೆಗೆ ಬರಲಿದೆ ನಟಿ ಭಾರತಿ ಅಂತರಾಳ…! ನಟ ಅನಿರುದ್ಧ ರಿಲೀಸ್ ಮಾಡಿದ್ರು ಟ್ರೇಲರ್…!!

- Advertisement -

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಿನಿಪಯಣದ ಏರಿಳಿತಗಳನ್ನು ದಾಖಲಿಸುವ ಸಾಕ್ಷ್ಯಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬದಂದು ಟ್ರೇಲರ್ ರಿಲೀಸ್ ಆಗಿದ್ದು, ಸಾಕ್ಷ್ಯಚಿತ್ರ ಅಗಸ್ಟ್ 24 ರಂದು ತೆರೆಗೆ ಬರಲಿದೆ.ಸಾಕ್ಷ್ಯಚಿತ್ರಕ್ಕೆ ಬಾಳೇ ಬಂಗಾರ ಎಂದು ಹೆಸರಿಡಲಾಗಿದೆ.

Bharathi 1

ನಟ ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್ ಅಳಿಯ  ಅನಿರುದ್ಧ ಭಾರತಿಯವರ ಸಿನಿಪಯಣವನ್ನು ಸಾಕ್ಷ್ಯಚಿತ್ರವಾಗಿ ತೆರೆಗೆ ತರಲು ಸಜ್ಜಾಗಿದ್ದಾರೆ. ಭಾರತಿಯವರ ಸಿನಿಪಯಣ, ಬದುಕು ಎಲ್ಲವನ್ನು ದಾಖಲಿಸುವ ಪ್ರಯತ್ನದಲ್ಲಿ ಅನಿರುದ್ಧ ಯಶಸ್ವಿಯಾಗಿದ್ದಾರೆ. ಸಂಶೋಧನೆ,ಲೇಖನ,ನಿರೂಪಣೆ ಎಲ್ಲವೂ ಅನಿರುದ್ಧ ಅವರದ್ದೇ ಆಗಿದೆ.

Bharathi 2

ಭಾವಪೂರ್ಣ ಹಾಗೂ ಮಾಹಿತಿಪೂರ್ಣ ಸಾಕ್ಷ್ಯಚಿತ್ರದಲ್ಲಿ ಭಾರತೀಯವರ ಸಮಕಾಲಿನ ನಟ ಶಿವರಾಂ, ತೆಲುಗು ನಟ ಮುಮ್ಮುಟ್ಟಿ,ಅನಂತನಾಗ್, ಹೇಮಾಚೌಧರಿ,ಶಿವರಾಜ್ ಕುಮಾರ್ ಸೇರಿದಂತೆ ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Bharathi 3

2 ಗಂಟೆ 31 ನಿಮಿಷದ ಈ ಸಾಕ್ಷ್ಯಚಿತ್ರವನ್ನು ಅಗಸ್ಟ್ 24 ರಂದು ಗರುಡಾ ಮಾಲ್ ನಲ್ಲಿ ರಿಲೀಸ್ಆಗಲಿದ್ದು, ಬಳಿಕ ಓಓಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಚಿತ್ರ ಭಾರತೀಯವರ ಅಪರೂಪದ ಭಾವಚಿತ್ರಗಳು, ವಿಡಿಯೋಗಳನ್ನು ಒಳಗೊಂಡಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಸಿಂಹಾದ್ರಿಯ ಸಿಂಹ ಖ್ಯಾತಿಯ ಚಂದನವನದ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಇದನ್ನೂ ಓದಿ : ಲವ್​ ಮಾಕ್ಟೆಲ್ 2 : ತೆರೆಗೆ ಬರಲು ರೆಡಿಯಾಯ್ತು ಕೃಷ್ಣ ಮಿಲನಾ ಮತ್ತೊಂದು ಸಿನಿಮಾ

RELATED ARTICLES

Most Popular