ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನಕ್ಕೇರುವ ಮುನ್ನವೂ ನಾಡಿನ ಜನರಿಗೆ ಪರಿಚಿತರೇ. ತಂದೆಯ ಕಾಲದಿಂದಲೂ ವಿಧಾನಸೌಧದ ನಂಟು ಹೊಂದಿದ್ದ ಬೊಮ್ಮಾಯಿ, ಡಾ.ರಾಜ್ ಕುಟುಂಬದ ಜೊತೆ ತಮಗಿದ್ದ ವಿಶೇಷ ನಂಟಿನ ಗುಟ್ಟು ರಟ್ಟು ಮಾಡಿದ್ದಾರೆ.

ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಲೋಕಾರ್ಪಣೆ ಸಂದರ್ಭದಲ್ಲಿ ಡಾ.ರಾಜ್ ಕುಟುಂಬದ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡ ಬೊಮ್ಮಾಯಿ , ಪಾರ್ವತಮ್ಮ ರಾಜ್ ಕುಮಾರ್ ನನಗೆ ತಾಯಿ ಸಮಾನ. ಅವರಿಗೆ ನನ್ನ ಮೇಲೆ ವಿಶೇಷ ಅಕ್ಕರೆ ಇತ್ತು. ಒಮ್ಮೆ ನನ್ನ ಬಳಿ ಗ್ಯಾಸ್ ಕನೆಕ್ಷನ್ ಹಾಕಿಸಿಕೊಡುವಂತೆ ಕೇಳಿದ್ದರು.

ಆ ಕಾಲದಲ್ಲಿ ಸಂಸದರಿಗೆ ಗ್ಯಾಸ್ ಕನೆಕ್ಷನ್ ಕೊಡಲಾಗುತ್ತಿತ್ತು. ಹೀಗಾಗಿ ನಾನು ತಂದೆಯವರ ಕೋಟಾದಲ್ಲಿ ಪಾರ್ವತಮ್ಮನವರಿಗೆ ಗ್ಯಾಸ್ ಕನೆಕ್ಷನ್ ಹಾಕಿಸಿಕೊಟ್ಟಿದೆ ಎಂದಿದ್ದಾರೆ. ಅಲ್ಲದೇ ಗ್ಯಾಸ್ ಕನೆಕ್ಷನ್ ಕೊಡಿಸಿದ ಎರಡನೇ ದಿನಕ್ಕೆ ಪೋನ್ ಮಾಡಿ ನೀನು ಕೊಡಿಸಿದ ಗ್ಯಾಸ್ ನಲ್ಲೇ ಅಡುಗೆ ಮಾಡಿದ್ದೀನಿ. ಊಟಕ್ಕೆ ಬಾ ಎಂದು ಕರೆದಿದ್ದರು.
ಇದನ್ನೂ ಓದಿ : ಡಾ.ರಾಜ್ ಮೊಮ್ಮಗಳ ಸಿನಿಜರ್ನಿಗೆ ಮತ್ತೆ ಗ್ರಹಣ:ನಿನ್ನ ಸನಿಹಕೆ ರಿಲೀಸ್ ವಿಳಂಬ!
ಮಾತ್ರವಲ್ಲ ನಮ್ಮ ಹುಬ್ಬಳ್ಳಿ ಕಚೇರಿಯನ್ನು ರಾಘುನೇ ನೋಡ್ಕೋತಾನೆ. ಅವನು ಆಗಾಗ ಅಲ್ಲಿಗೆ ಬರ್ತಾನೆ. ಸ್ವಲ್ಪ ಕಾಳಜಿ ವಹಿಸು ಎಂದು ಹೇಳುತ್ತಿದ್ದರು ಎಂದು ಡಾ.ರಾಜ್ ಕುಟುಂಬ ಹಾಗೂ ಪಾರ್ವತಮ್ಮನವರ ಜೊತೆಗಿನ ಒಡನಾಟದ ಬಗ್ಗೆ ಬೊಮ್ಮಾಯಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಡಾ.ರಾಜ್ ಸರಳತೆಯನ್ನು ಬೊಮ್ಮಾಯಿ ಸ್ಮರಿಸಿದ್ದಾರೆ.
ಇದನ್ನೂ ಓದಿ : ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ದೊಡ್ಮನೆ ಪ್ರಯತ್ನ: ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ರಿಲೀಸ್