ಕೇವಲ 1 ಕೋವಿಡ್‌ ಕೇಸ್‌ಗೆ ಲಾಕ್‌ಡೌನ್ ಘೋಷಿಸಿದ ನ್ಯೂಜಿಲ್ಯಾಂಡ್

ವೆಲ್ಲಿಂಗ್‌ಟನ್‌ : ಬರೋಬ್ಬರಿ ಏಳು ತಿಂಗಳ ಬಳಿಕ ನ್ಯೂಜಿಲ್ಯಾಂಡ್‌ನಲ್ಲಿ ಕೋವಿಡ್‌ ಪ್ರಕರಣ ದಾಖಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಜಸಿಂಡಾ ಅರ್ಡೆರ್ನ್ ಮೂರು ದಿನಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ.

ಫೆಬ್ರವರಿಯ ನಂತರ ನ್ಯೂಜಿಲ್ಯಾಂಡ್‌ನ ಅತಿದೊಡ್ಡ ನಗರ ಆಕ್ಲೆಂಡ್‌ನಲ್ಲಿ ಮೊದಲ ಕೋವಿಡ್ -19 ಕೋವಿಡ್‌ ಪ್ರಕರಣ ದಾಖಲಾಗಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣನೆ ಮಾಡಿದೆ. ಅಲ್ಲದೇ ಕೊರೊನಾ ಸೋಂಕಿನ ಮೂಲವನ್ನು ಹುಡುಕುವ ಕಾರ್ಯವನ್ನು ಆರೋಗ್ಯಾಧಿಕಾರಿಗಳು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಲಾಕ್‌ಡೌನ್‌ ಆದೇಶ ಜಾರಿಗೆ ಬರುತ್ತಿದೆ.

ಸೋಂಕಿತ ವ್ಯಕ್ತಿಗೆ ಜೀನೋಮ್ ಸೀಕ್ವೆನ್ಸಿಂಗ್ ಇನ್ನೂ ಪೂರ್ಣಗೊಂಡಿಲ್ಲವಾದರೂ, ಈ ಪ್ರಕರಣವು ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರವೇ ಎಂದು ತಿಳಿದುಬಂದಿಲ್ಲ. ಈ ಕುರಿತು ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕೊರೊನಾ ಮೊದಲ ಅಲೆಯಲ್ಲಿಯೂ ನ್ಯೂಜಿಲ್ಯಾಂಡ್‌ನಲ್ಲಿ ಅತ್ಯಂತ ಕಡಿಮೆ ಕೋವಿಡ್‌ ಪ್ರಕರಣ ದಾಖಲಾಗಿತ್ತು. ಇದೀಗ ಒಂದು ವರ್ಷದ ನಂತರದಲ್ಲಿ ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರ ವ್ಯಾಪಿ ಲಾಕ್‌ಡೌನ್‌ ಆದೇಶ ಜಾರಿ ಮಾಡಲಾಗುತ್ತಿದೆ.

ನ್ಯೂಜಿಲ್ಯಾಂಡ್‌ನಲ್ಲಿ ಅಲರ್ಟ್ ಲೆವೆಲ್ 4 ಘೋಷಣೆ ಮಾಡಲಾಗಿದ್ದು, ಎಲ್ಲಾ ಶಾಲೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಹೆಚ್ಚಿನ ವ್ಯವಹಾರಗಳನ್ನು ಮುಚ್ಚಬೇಕು ಮುಚ್ಚಲಾಗಿದ್ದು, ಜನರು ಮನೆಯಿಂದ ಹೊರ ಬರುವ ಮುನ್ನ ಕಡ್ಡಾಯವಾಗಿ ಮಾಸ್ಕ್‌ ಬಳಕೆ ಮಾಡುವಂತೆ ಆದೇಶ ಹೊರಡಿಸಲಾಗಿದೆ. ದಿನಸಿ, ಅಗತ್ಯವಸ್ತುಗಳ ಖರೀದಿ, ಆರೋಗ್ಯ ಉತ್ಪನ್ನಗಳ ಅಂಗಡಿಗಳು ಮಾತ್ರ ತೆರೆದಿರುತ್ತವೆ.

ಅಕ್ಲೇಂಡ್‌ನಲ್ಲಿ 50 ವಯಸ್ಸಿನಲ್ಲಿ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತ ವ್ಯಕ್ತಿ ಕೊರೊನಾ ಲಸಿಕೆ ಹಾಕಿಸಿರಲಿಲ್ಲ ಎಂದು ತಿಳಿದುಬಂದಿದೆ. ಸೋಂಕಿತ ವ್ಯಕ್ತಿಯ ಪತ್ನಿ ಲಸಿಕೆ ಹಾಕಿಸಿದ್ದು, ವಾರಾಂತ್ಯದಲ್ಲಿ ಕೋರಮಂಡಲ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕ್ಲೆಂಡ್ ಮತ್ತು ಕೋರಮಂಡಲ್ ಎರಡನ್ನೂ ಏಳು ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ. ವ್ಯಕ್ತಿಗೆ ಡೆಲ್ಟಾ ಸೋಂಕು ತಗುಲಿರುವ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ ನ್ಯೂಜಿಲ್ಯಾಂಡ್‌ ಅಲರ್ಟ್‌ ಆಗಿದೆ.‌

ಇದನ್ನೂ ಓದಿ : ತಾಲಿಬಾನ್‌ ದಾಳಿಯ ಬೆನ್ನಲ್ಲೇ ಅಪ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ : ಆತಂಕದಲ್ಲಿ ಜನರು

Corona Sucide : ಕೊರೊನಾದಿಂದ ಹದಗೆಟ್ಟ ದೇಹ ಸ್ಥಿತಿ : ಭಯದಿಂದ ಮಂಗಳೂರಲ್ಲಿ ದಂಪತಿ ಆತ್ಮಹತ್ಯೆ

Comments are closed.