ಜಿನೇವಾ : ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾ ಮೂರನೇ ಅಲೆ ಆರಂಭಗೊಂಡಿದೆ. ಮೂರನೇ ಅಲೆ ಯಾವಾಗ ವ್ಯಾಪಕವಾಗಿ ಹರಡಲಿದೆ ಅನ್ನೋದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮೂರನೇ ಅಲೆ ಎರಡನೇ ಅಲೆಯಷ್ಟು ಅಪಾಯಕಾರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಎರಡನೇ ಅಲೆಯಲ್ಲಿ ಕೋವಿಡ್ -19 ಸಂಖ್ಯೆ ದಿನಕ್ಕೆ ಸುಮಾರು 35,000 – 40,000 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಮೂರನೇ ಅಲೆಗೆ ದೇಶದಾದ್ಯಂತ ಸುಮಾರು 40 ಕೋಟಿಗೂ ಅಧಿಕ ಮಂದಿ ತುತ್ತಾಗುತ್ತಾರೆ. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಕೊರೊನಾ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು. ಡೆಲ್ಟಾ ರೂಪಾಂತರವು ಎರಡನೇ ತರಂಗದಲ್ಲಿ ಉಲ್ಬಣಕ್ಕೆ ಕಾರಣವಾಗಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸೆರೋ ಸಮೀಕ್ಷೆಯು ಸುಮಾರು 65 ಪ್ರತಿಶತ ಜನರು ವೈರಸ್ಗೆ ತುತ್ತಾಗಿದ್ದಾರೆ ಎಂದು ತೋರಿಸಿದೆ ಮತ್ತು ಸುಮಾರು 30 ಪ್ರತಿಶತದಷ್ಟು ಜನರು ಲಸಿಕೆಯ ಒಂದು ಡೋಸ್ ಪಡೆದಿದ್ದಾರೆ. ಜನರು ಹೆಚ್ಚು ಹೆಚ್ಚಾಗಿ ಕೊರೊನಾ ಲಸಿಕೆ ಪಡೆಯಬೇಕು ಎಂದಿದ್ದಾರೆ.
ಯುಕೆ, ಇಸ್ರೇಲ್ ಮತ್ತು ಯುಎಸ್ ನಂತಹ ಡಿಸೆಂಬರ್ ಅಥವಾ ಜನವರಿಯಲ್ಲಿ ಲಸಿಕೆ ಹಾಕಲು ಆರಂಭಿಸಿದ ದೇಶಗಳಲ್ಲಿ, ಲಸಿಕೆ ಹಾಕಿದ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಪ್ರಮಾಣ ತುಂಬಾ ಕಡಿಮೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ಸಿಡಿಸಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಮೂರನೇ ಡೋಸ್ ಅನ್ನು ಅನುಮತಿಸಿವೆ, ಏಕೆಂದರೆ ಅಧ್ಯಯನಗಳು ಎರಡು ಡೋಸ್ ನಂತರ ಪ್ರತಿಕಾಯ ಪ್ರತಿಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ತೋರಿಸಿದೆ. “ಈ ಸಂದರ್ಭಗಳಲ್ಲಿ ಮೂರನೇ ಡೋಸ್ ಪ್ರಾಥಮಿಕ ಸರಣಿಯ ಭಾಗವಾಗಿದೆ ಮತ್ತು ಬೂಸ್ಟರ್ ಡೋಸ್ ಅಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ : Corona Sucide : ಕೊರೊನಾದಿಂದ ಹದಗೆಟ್ಟ ದೇಹ ಸ್ಥಿತಿ : ಭಯದಿಂದ ಮಂಗಳೂರಲ್ಲಿ ದಂಪತಿ ಆತ್ಮಹತ್ಯೆ
ಇದನ್ನೂ ಓದಿ : Bengaluru Corona : ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ” ; ಸಿಲಿಕಾನ್ ಸಿಟಿಯಲ್ಲಿ ಹೊಸ ಅಭಿಯಾನಕ್ಕೆ ಚಾಲನೆ