ಸೋಮವಾರ, ಏಪ್ರಿಲ್ 28, 2025
HomeCoastal NewsUdupi : ಪ್ರೀತಿಸಿದಾಕೆಗೆ ಮತ್ತೋರ್ವನ ಜೊತೆ ನಿಶ್ವಿತಾರ್ಥ : ಉಡುಪಿಯಲ್ಲಿ ಪ್ರೇಯಸಿಯ ಕತ್ತು ಕೊಯ್ದ ಪ್ರಿಯಕರ

Udupi : ಪ್ರೀತಿಸಿದಾಕೆಗೆ ಮತ್ತೋರ್ವನ ಜೊತೆ ನಿಶ್ವಿತಾರ್ಥ : ಉಡುಪಿಯಲ್ಲಿ ಪ್ರೇಯಸಿಯ ಕತ್ತು ಕೊಯ್ದ ಪ್ರಿಯಕರ

- Advertisement -

ಉಡುಪಿ : ಅವರಿಬ್ಬರು ಕಳೆದ ಹಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಯುವತಿಗೆ ಇತ್ತೀಚಿಗಷ್ಟೇ ಬೇರೊಬ್ಬರ ಯುವಕನ ಜೊತೆ ವಿವಾಹ ನಿಶ್ಚಯವಾಗಿತ್ತು. ಇಷ್ಟಕ್ಕೆ ಕೋಪಗೊಂಡ ಪ್ರಿಯಕರ ಹೆದ್ದಾರಿಯಲ್ಲೇ ಪ್ರೇಯಸಿಯ ಕತ್ತುಕೊಯ್ದು ಕೊಲೆಗೈದಿದ್ದಾನೆ. ಯುವತಿ, ಸಾವನ್ನಪ್ಪಿದ್ದರೆ, ಪಾಪಿ ಪ್ರಿಯಕರ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಅಂಬಾಗಿಲು ಸಮೀಪದ ಕಕ್ಕುಂಜೆಯ ಸೌಮ್ಯಶ್ರೀ(26 ವರ್ಷ ) ಎಂಬಾಕೆಯೇ ಪ್ರಿಯಕರನಿಂದ ಕೊಲೆಯಾದ ದುರ್ದೈವಿ. ಆರೋಪಿ ಉಡುಪಿಯ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26 ವರ್ಷ) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಡುಪಿಯ ಅಂಬಾಗಿಲು ಸಮೀಪದ ಸಂತೆಕಟ್ಟೆ ಪೆಟ್ರೋಲ್‌ ಬಂಗ್‌ ಬಳಿಯಲ್ಲಿ ಇಬ್ಬರೂ ಬೈಕಿನಲ್ಲಿ ಬಂದಿದ್ದಾರೆ. ಯುವತಿ ಸ್ಕೂಟಿಯಲ್ಲಿ ಬರುತ್ತಿದ್ದಾಗ, ಬೈಕಿನಲ್ಲಿ ಬಂದಿದ್ದ ಯುವಕ ಬೈಕನ್ನು ನಿಲ್ಲಿಸಿ, ಯುವತಿಯ ಮಾತಿಗೆ ಇಳಿದಿದ್ದ.

ಯುವ ಜೋಡಿ ಹೆದ್ದಾರಿಯಲ್ಲಿ ನಿಂತು ಮಾತನಾಡುತ್ತಿದ್ದಾಗಲೇ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪ್ರಿಯಕರ ಪ್ರೇಯಸಿಗೆ ತಾನು ತಂದಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಯುವತಿ ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಿದ್ದಂತೆಯೇ ತಾನೂ ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸೌಮ್ಯಶ್ರೀ ಸಾವನ್ನಪ್ಪಿದ್ದರೆ, ಸಂದೇಶ್‌ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಅಷ್ಟಕ್ಕೂ ಆಗಿದ್ದೇನು ..?
ಸೌಮ್ಯಶ್ರೀ ಸಂತೆಕಟ್ಟೆಯ ರಾಷ್ಟ್ರೀಕೃತ ಬ್ಯಾಂಕಿನ ಆಧಾರ್ ಕಾರ್ಡ್ ಲಿಂಕ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಸಂದೇಶ್ ಉಡುಪಿಯ ಮೆಡಿಕಲ್ ಒಂದರಲ್ಲಿ ಉದ್ಯೋಗಿಯಾಗಿದ್ದಾನೆ. ಸೌಮ್ಯಶ್ರೀ ಮತ್ತು ಸಂದೇಶ ಕಳೆದ ಹಲವು ಪರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಸೌಮ್ಯಶ್ರೀಗೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ಕುಪಿತಗೊಂಡಿದ್ದ ಸಂದೇಶ ಕುಲಾಲ್ ಸೌಮ್ಯಶ್ರೀ ಜೊತೆಗೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ಸೌಮ್ಯಶ್ರೀ ಕೆಲಸ ಮುಗಿಸಿ ಬರುವುದನ್ನೇ ಕಾಯುತ್ತಿದ್ದ ಸಂದೇಶ್‌ ಹೊಂಚು ಹಾಕಿ ಈ ಕೃತ್ಯವನ್ನು ಎಸಗಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್‌ ಲಾಕ್‌ಡೌನ್, ನೈಟ್‌ ಕರ್ಪ್ಯೂ ಜಾರಿ

ಇದನ್ನೂ ಓದಿ : Udupi : ಪ್ರೇಯಸಿಗೆ ಚೂರಿ ಇರಿದು, ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

( The young girl he lover was engaged to a different boy. An angry young man strangled and murdered the young woman. He then committed suicide)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular