ಗಣೇಶೋತ್ಸವಕ್ಕೆ ಸಿಕ್ಕಿಲ್ಲ ಗ್ರೀನ್‌ ಸಿಗ್ನಲ್‌ : ಸೆಪ್ಟೆಂಬರ್ 5ಕ್ಕೆ ಅಂತಿಮ ತೀರ್ಮಾನ : ಆರ್ ಅಶೋಕ್

ಬೆಂಗಳೂರು : ಗಣೇಶ ಹಬ್ಬ ಸಮೀಪಿಸುತ್ತಿದೆ. ಬೀದಿ ಬೀದಿಯಲ್ಲಿಯೂ ಗಣೇಶನ ಮೂರ್ತಿಯನ್ನೂ ಕೂರಿಸಿ ಸಂಭ್ರಮಿಸಲು ಜನರು ಕಾಯುತ್ತಿದ್ದಾರೆ. ಆದರೆ ಕೊರೊನಾ ಹೆಮ್ಮಾರಿ ಯ ಆರ್ಭಟದಿಂದಾಗಿ ಸರಕಾರ ಇನ್ನೂ ಗಣೇಶೋತ್ಸವ ಆಚರಣೆಗೆ ಇನ್ನೂ ಅನುಮತಿಯನ್ನು ನೀಡಿಲ್ಲ. ಅಲ್ಲದೇ ಈ ಬಾರಿ ಸರಳ ಆಚರಣೆಯೋ, ಅದ್ದೂರಿಯೋ ಅನ್ನೋ ಬಗ್ಗೆ ಸಪ್ಟೆಂಬರ್‌ 5 ಅಂತಿಮ ತೀರ್ಮಾನ ಹೊರಬೀಳಿದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೇ ಇಲ್ಲಾ ಬೇಡವೇ ಅನ್ನೋ ಕುರಿತು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ನೆರೆಯ ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕಿನ ಆರ್ಭಟ ಹೆಚ್ಚಾಗಿದ್ದು, ಮೂರನೇ ಅಲೆಯ ಭೀತಿಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.

3ನೇ ಅಲೆ ಭೀತಿ ನಡುವಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಗಣೇಶೋತ್ಸವ ಆಚರಣೆ ಇರುತ್ತೆ. ಹೀಗಾಗಿ ಈಗಾಗಲೇ ಡಿಸಿ, ಎಸ್​ಪಿಗಳ ಜತೆ ಮಾತುಕತೆ ನಡೆಸಿದ್ದೇವೆ. ಗಣೇಶೋತ್ಸವ ಆಚರಣೆ ಸಂಬಂಧ ಆಯೋಜಕರ ಜತೆ ಚರ್ಚೆ ಮಾಡಬೇಕಿದೆ. ಹಿಂದಿನ ವರ್ಷಗಳಲ್ಲಿ ಅದ್ಧೂರಿಯಾಗಿ ಆಚರಿಸಿದ್ದವರ ಜತೆ ಸಭೆ ಮಾಡುತ್ತೇವೆ. ಡಿಸಿ, ಎಸ್​ಪಿಗಳು ಕರೆದು ಚರ್ಚೆ ನಡೆಸಿ ವರದಿ ನೀಡುತ್ತಾರೆ. ಆ ಬಳಿಕ, ಸೆಪ್ಟೆಂಬರ್ 5 ರಂದು ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ. ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ. ಗಣೇಶೋತ್ಸವ ಆಚರಣೆಗೆ ಅನುಮತಿ ಸಿಗುವ ಎಲ್ಲಾ ಸಾಧ್ಯತೆ ಇದೆ. ನಮ್ಮ ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 5 ರ ಭಾನುವಾರ ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಗಣೇಶೋತ್ಸವ ಆಚರಣೆಯ ಕುರಿತು ಮಾರ್ಗಸೂಚಿ ಪ್ರಕಟವಾಗಲಿದೆ. ಈಗಾಗಲೇ ಕೋವಿಡ್‌ ತಾಂತ್ರಿಕ ಸಮಿತಿಯ ಸಲಹೆಯನ್ನು ಕೇಳಲಾಗಿದೆ. ಕೇರಳದಲ್ಲಿ ಓಣಂ ಆಚರಣೆಯ ಬೆನ್ನಲ್ಲೇ ಸೋಂಕು ಹೆಚ್ಚಳವಾಗಿತ್ತು. ಇದೇ ಕಾರಣಕ್ಕೆ ರಾಜ್ಯ ಸರಕಾರ ಕೂಡ ಅದ್ದೂರಿ ಆಚರಣೆಗೆ ಬ್ರೇಕ್‌ ಹಾಕಲು ಮುಂದಾಗಿದೆ.

ಆದರೆ ರಾಜ್ಯ ಸರಕಾರದ ಕ್ರಮದ ವಿರುದ್ದ ಇದೀಗ ಹಿಂದೂ ಪರ ಸಂಘಟನೆಗಳ ಮುಖಂಡರು, ಗಣೇಶೋತ್ಸವ ಆಚರಣೆ ಸಮಿತಿಗಳು ಆಕ್ರೋಶ ವ್ಯಕ್ತಪಡಿಸಿವೆ. ಹಬ್ಬದ ಆಚರಣೆಗೆ ಕೇವಲ ಐದು ದಿನಗಳಿರುವಾಗ ಸರಕಾರದ ನಿರ್ಧಾರ ಪ್ರಕಟಿಸುವುದು ಎಷ್ಟು ಸರಿ ಎಂದು ಕೂಡ ಪ್ರಶ್ನಿಸಿದ್ದಾರೆ. ಆದರೆ ಸಚಿವ ಆರ್.‌ ಅಶೋಕ್‌ ಈ ಬಾರಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಈ ಬಾರಿ ಅದ್ದೂರಿ ಗಣೇಶೋತ್ಸವ, ಸಡಿಲವಾಗುತ್ತಾ ಕೋವಿಡ್‌ ನಿಯಮ : ಸಚಿವ ಸುನಿಲ್‌ ಕುಮಾರ್‌ ಕೊಟ್ರು ಸುಳಿವು

ಇದನ್ನೂ ಓದಿ : Weekend Lockdown : ದ.ಕ, ಕೊಡಗು ಜಿಲ್ಲೆಯಲ್ಲಿ ಟಫ್‌ ರೂಲ್ಸ್‌ : ವೀಕೆಂಡ್‌ ಕರ್ಪ್ಯೂ ಮುಂದುವರಿಕೆ

(Ganesh Chaturthi Celebration Karnataka September 5th Final Guidelines Release )

Comments are closed.