ಸೋಮವಾರ, ಜೂನ್ 16, 2025
HomeCrimeಹೋಟೆಲ್‌ ಮಾಲೀಕನನ್ನು ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್‌

ಹೋಟೆಲ್‌ ಮಾಲೀಕನನ್ನು ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್‌

- Advertisement -

ನೋಯ್ಡಾ : ಆರ್ಡರ್‌ ಡೆಲಿವರಿ ನೀಡುವುದು ತಡವಾಯಿತೆಂದು ಸ್ವಿಗ್ಗಿ ಡೆಲಿವರಿ ಬಾಯ್‌ ರೆಸ್ಟೋರೆಂಟ್‌ ಮಾಲೀಕನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಮಿತ್ರ ರೆಸ್ಟೋರೆಂಟ್‌ ಮಾಲೀಕ ಸುನೀಲ್ ಅಗರ್ವಾಲ್ ಎಂಬವರೇ ಹತ್ಯೆಗೀಡಾದವರು. ಮಂಗಳವಾರ ತಡರಾತ್ರಿ ಸ್ವಿಗ್ಗಿ ಡೆಲಿವರಿ ಬಾತ್‌, ಚಿಕನ್‌ ಬಿರಿಯಾನಿ ಹಾಗೂ ಪೂರ್ವಿ ಸಬ್ಜಿಯ ಆರ್ಡರ್‌ ಬುಕ್‌ ಮಾಡಿದ್ದಾನೆ. ಆದರೆ ಆರ್ಡರ್‌ ನೀಡುವುದಕ್ಕೆ ರೆಸ್ಟೋರೆಂಟ್‌ನವರು ವಿಳಂಭ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಸ್ವಿಗ್ಗಿ ಡೆಲಿವರಿ ಬಾಯ್‌ ರೆಸ್ಟೋರೆಂಟ್‌ ಸಿಬ್ಬಂದಿಯ ಜೊತೆಯಲ್ಲಿ ಜಗಳಕ್ಕೆ ಇಳಿದಿದ್ದಾನೆ. ನಂತರ ರೆಸ್ಟೋರೆಂಟ್‌ ಮಾಲೀಕ ಸುನಿಲ್‌ ಅಗರ್‌ವಾಲ್‌ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ್ದಾನೆ. ಇದರಿಂದ ಕೆರಳಿದ ಸ್ವಿಗ್ಗಿ ಡೆಲಿವರಿ ಬಾಯ್‌ ಸ್ನೇಹಿತನ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿ ರೆಸ್ಟೋರೆಂಟ್‌ ಮಾಲೀಕನನ್ನು ಹತ್ಯೆ ಮಾಡಿದ್ದಾನೆ.

ಕೂಡಲೇ ಸುನಿಲ್‌ ಅಗರ್‌ವಾಲ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : `ಪಾನಿ ಪುರಿ’ ವಿಚಾರಕ್ಕೆ ಪ್ರಾಣವನ್ನೇ ಕಳೆದುಕೊಂಡ ಮಹಿಳೆ !

ಇದನ್ನೂ ಓದಿ : ನಟೋರಿಯಸ್‌ ಡಾನ್‌ , ಸುಫಾರಿ ಕಿಲ್ಲರ್‌ ಬಾಂಬೆ ರವಿ ಸಾವು

(The owner of the restaurant who was late to place the order was killed by Swiggy Delivery boy )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular