ಮೈಸೂರು : ಚಿಕ್ಕ ಮಕ್ಕಳ ಕೈಯಿಂದ ನಾಣ್ಯವನ್ನು ಆದಷ್ಟು ದೂರ ಇಡಬೇಕು. ಇಲ್ಲಾವಾದಲ್ಲಿ ಅದರಿಂದ ಮಕ್ಕಳ ಜೀವಕ್ಕೆ ಅಪಾಯ ಎದುರಾಗಬುಹುದು ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಆಟವಾಡುವಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ನಡೆದಿದೆ.
4 ವರ್ಷದ ಖುಷಿ ಮೃತ ಬಾಲಕಿ. ಹಿರಿಕ್ಯಾತನಹಳ್ಳಿ ಯಲ್ಲಿ ಇರುವ ತನ್ನ ಅಜ್ಜಿಯ ಮನೆಯಲ್ಲಿ ಖುಷಿ ಆಟವಾಡುತ್ತಿದ್ದ ವೇಳೆ 5 ರೂಪಾಯಿ ನಾಣ್ಯವನ್ನು ಬಾಯಿಗೆ ಹಾಕಿಕೊಂಡಿದ್ದಾಳೆ. ಆಕಸ್ಮಿಕವಾಗಿ ನಾಣ್ಯ ನುಂಗಿದ್ದು, ವಿಷಯ ತಿಳಿಯುತ್ತಿದ್ದಂತೆ ಮನೆಯವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಣ್ಯ ಹೊರತೆಗೆಯುವುದು ಸಾಧ್ಯವಾಗಿಲ್ಲ.
ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇನ್ನಾದರೂ ಚಿಕ್ಕ ಮಕ್ಕಳ ಕೈಯಿಂದ ನಾಣ್ಯವನ್ನು ದೂರ ಇರುವಂತೆ ನೋಡಿಕೋಳ್ಳಿ. ಇಲ್ಲಾವಾದಲ್ಲಿ ಮಕ್ಕಳ ಜೀವಕ್ಕೆ ಕುತ್ತು ಬರಬಹುದು.
ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಕಾರು ಚಲಾಯಿಸಿದ್ದೇ ಕೋರಮಂಗಲ ಅಪಘಾತಕ್ಕೆ ಕಾರಣ !
(4-year-old girl dies after swallowing 5 rupee coin)