Sudeep: ಕಿಚ್ಚನ ಹೆಸರಲ್ಲಿ ಬಂತು ಅಂಚೆ ಸ್ಟ್ಯಾಂಪ್: ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಯ ಗಿಫ್ಟ್

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವರ್ಷಗಳನ್ನು ಪೊರೈಸಿರುವ ಸುದೀಪ್, ನಟನೆಯೊಂದಿಗೆ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಅಗತ್ಯ ಉಳ್ಳವರಿಗೆ ನೆರವಾಗುತ್ತಿರುವ ಸುದೀಪ್ ಸಾಮಾಜಿಕ ಕಾರ್ಯ, ನಟನೆ ಎಲ್ಲವನ್ನು ಪರಿಗಣಿಸಿ ಅಭಿಮಾನಿಗಳು ಅಂಚೆ ಸ್ಟ್ಯಾಂಪ್ ಗೌರವ ಸಲ್ಲಿಸಿದ್ದಾರೆ.

ಹೌದು ನಿರ್ದೇಶಕ,ಬರಹಗಾರ, ಕ್ರಿಕೆಟ್ ಆಟಗಾರ,ಗಾಯಕ,ಉದ್ಯಮಿ,ನಿರೂಪಕ,ಕುಕ್ ಹೀಗೆ ಬಹುಮುಖ ಪ್ರತಿಭೆಯಾಗಿ ಬೆಳೆದಿರುವ ಸುದೀಪ್ 50 ನೇ ಹುಟ್ಟುಹಬ್ಬದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಸುದೀಪ್ ಭಾವಚಿತ್ರ ಹೊಂದಿರುವ ಸ್ಟ್ಯಾಂಪ್ ಬಿಡುಗಡೆ ಮಾಡಿದೆ.

ಸುದೀಪ್ ಅಭಿಮಾನಿಯೊಬ್ಬರು ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಮೈ ಸ್ಟ್ಯಾಂಪ್ ಸರ್ವೀಸ್ ಬಳಸಿ ಸ್ಟ್ಯಾಂಪ್ ಮೇಲೆ ಸುದೀಪ್ ಭಾವಚಿತ್ರವನ್ನು ಮುದ್ರಿಸಿ ಅಂಚೆ ಸ್ಟ್ಯಾಂಪ್ ನ್ನು ಅಭಿನಯ ಚಕ್ರವರ್ತಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸುದೀಪ್ ಅಭಿಮಾನಿ ರವಿ ಇಂತಹದೊಂದು ವಿಭಿನ್ನ ಗೌರವವನ್ನು ಸುದೀಪ್ ಅವರಿಗೆ ಸಲ್ಲಿಸಿದ್ದಾರೆ. ಸುದೀಪ್ ಭಾವಚಿತ್ರ ಹೊಂದಿರುವ ಸ್ಟ್ಯಾಂಪ್ ನ್ನು ನೂರರಷ್ಟು ಮುದ್ರಿಸಿ ಸುದೀಪ್ ಗೆ ಉಡುಗೊರೆಯಾಗಿ ನೀಡಿ ರವಿ ಸಂಭ್ರಮಿಸಿದ್ದಾರೆ.ಇತ್ತೀಚಿಗಷ್ಟೇ ಸುದೀಪ್ ಸಾಮಾಜಿಕ ಸೇವೆ ಪರಿಗಣಿಸಿ ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಸುದೀಪ್ ಗೆ ಸೇವಾ ಪುರಸ್ಕಾರ ನೀಡಿ ಗೌರವಿಸಿತ್ತು.

postal stamp tribute to sandalwood actor sudeep  

Comments are closed.