ಸೋಮವಾರ, ಜೂನ್ 16, 2025
HomeSpecial Storyಚರ್ಚ್‌ಗೆ ಭೇಟಿ ನೀಡಿದ ವಿಘ್ನವಿನಾಶಕ ಗಣಪತಿ ! ಸ್ಪೇನ್ ನಲ್ಲಿ ನಡೆಯಿತು ಅಪರೂಪದ ಘಟನೆ

ಚರ್ಚ್‌ಗೆ ಭೇಟಿ ನೀಡಿದ ವಿಘ್ನವಿನಾಶಕ ಗಣಪತಿ ! ಸ್ಪೇನ್ ನಲ್ಲಿ ನಡೆಯಿತು ಅಪರೂಪದ ಘಟನೆ

- Advertisement -

ಸ್ಪೇನ್ : ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ. ವಿಘ್ನ ವಿನಾಶಕನ ಪೂಜಾ ಕೈಂಕರ್ಯಗಳು ನೆರವೇರುತ್ತಿದೆ. ಆದ್ರಿಲ್ಲಿ ಗಣಪತಿ ಚರ್ಚ್ ಗೆ ಹೋಗಿದ್ದಾನೆ. ಜೀಸಸ್ ಕುಶಲೋಪಹರಿ ವಿಚಾರಿಸಿದ ಘಟನೆ ಸ್ಪೇನ್‌ ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಣಪತಿ ಚರ್ಚ್ ಗೆ ಹೋಗುವುದು ಅಂದ್ರೆ ಏನು ? ಅರೇ ನೀವು ಏನ್‌ ಹೇಳ್ತಿದ್ದೀರಿ ? ಅಂತ ಕನ್ ಪ್ಯೂಸ್ ಆಗ್ಬೇಡಿ. ಇದು ಕಟ್ಟು ಕಥೆಯಲ್ಲ, ವಾಸ್ತವ. ಧಾರ್ಮಿಕ ಸೌಹಾರ್ದತೆಯ ಬಗ್ಗರ ನಿತ್ಯವೂ ಸಾರ್ವಜನಿಕವಾಗಿ, ಸ್ನೇಹಿತರೊಂದಿಗೆ, ಮನೆಗಳಲ್ಲಿ ಮಾತನಾಡುತ್ತೇವೆ. ಆದರೆ, ಅದಕ್ಕೆ ಪೂರಕವಾದ ಅಥವಾ ಕೋಮು ಸೌಹಾರ್ದತೆ ಉತ್ತೇಜಿಸುವಂತಹ ಘಟನೆ ಮನುಷ್ಯನ ವಿಶಾಲ ಚಿಂತನೆಯಿಂದ ಆಗುವುದು ಬಹಳ ವಿರಳ. ಅಂಥದ್ದೊಂದು ವಿರಳಾತಿ ವಿರಳ ಘಟನೆ ಸ್ಪೇನ್‌ನಲ್ಲಿ ಜರುಗಿದೆ.

ಇದನ್ನೂ ಓದಿ: ಗೌರಿಕುಂಡದಲ್ಲಿರುವ ಬಿಸಿನೀರಿಗೂ, ಗೌರಿ ಹಬ್ಬಕ್ಕೂ ಇರುವ ನಂಟು ನಿಮಗೆ ಗೊತ್ತಾ ?

ಇಲ್ಲಿನ ಗಣಪತಿ ಸೀದಾ ಚರ್ಚ್‌ಗೆ ಹೋಗಿ ಜೀಸಸ್‌ ರನ್ನು ಕಂಡು ಕುಶಲೋಪರಿ ವಿಚಾರಿಸಿ ಬಂದಿದ್ದಾರೆ. ಇಂಥ ಅಪರೂಪದ ದೇವರುಗಳ ಭೇಟಿಯ ಕ್ಷಣದ ವಿಡಿಯೊವನ್ನು ಟ್ವಿಟರ್‌ನಲ್ಲಿ ಖ್ಯಾತ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಹಂಚಿಕೊಂಡಿದ್ದಾರೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ ಹಿಂದೂ ಸಮುದಾಯದವರು ಗಣೇಶ ಚತುರ್ಥಿ ಆಚರಿಸಲು ನಿರ್ಧರಿಸಿ ಗಣಪತಿಯ ಸುಂದರ ಮಣ್ಣಿನ ಮೂರ್ತಿ ಯನ್ನು ತಂದು ಪೆಂಡಾಲ್‌ ಮಾಡಿ ತರಲು ಯೋಜಿಸಿದ್ದರು.

ಚರ್ಚ್‌ ಮುಂದೆ ಮೆರವಣಿಗೆ ಹಾದು ಬರಬೇಕಿತ್ತು. ಅದೇ ವೇಳೆಗೆ ಚರ್ಚ್‌ ಕಡೆಯಿಂದ ಗಣಪತಿಯನ್ನು ಒಳಗೆ ಕರೆತಂದು ಸ್ವಲ್ಪ ಹೊತ್ತು ಕೂರಿಸುವ ಬೇಡಿಕೆ ಆಯೋಜಕರಿಗೆ ಬಂದಿದೆ. ಸ್ವಲ್ಪ ಹೊತ್ತು ಯೋಚಿಸಿದ ಆಯೋಜಕರು, ದೇವರುಗಳೇ ಭೇಟಿಗೆ ಮಾಡಿಕೊಂಡ ಅವಕಾಶ ಇರಬೇಕು ಎಂದು ಚಿಂತಿಸಿ, ಒಪ್ಪಿದ್ದಾರೆ.

ಇದನ್ನೂ ಓದಿ: ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

ನಮ್ಮ ನೆಚ್ಚಿನ ಗಣೇಶ ಮೂರ್ತಿ, ಸೀದಾ ಚರ್ಚ್‌ನ ಒಳಗೆ ಭಜನೆ- ಸಂಗೀತದ ಜತೆಯಲ್ಲಿ ಪ್ರವೇಶಿಸಿದೆ. ಮೂರ್ತಿ ಇರಿಸಿದಾಗ, ನೆರೆದಿದ್ದ ಹಲವರು ಸಂಭ್ರಮ ದಿಂದ ಕಣ್ಣಾಲಿಗಳನ್ನು ಒದ್ದೆಯಾಗಿಸಿ ಕೊಂಡಿದ್ದಾರೆ. ಧರ್ಮ-ದೇವರು ಎಂದು ಜನರು ಬಡಿದಾಡುವಾಗ, ದೇವರುಗಳೇ ಗೆಳೆಯನ ಮನೆಗೆ ಧಾವಿಸಿದಂತಹ ಪರಿಸ್ಥಿತಿ ಇದಾಗಿದೆ ಎಂದು ಹಿರಿಯರೊಬ್ಬರು ಆನಂದಬಾಷ್ಪ ಸುರಿಸಿದ್ದಾರೆ.

(Ganpati Visits Church A rare event that took place in Spain)
RELATED ARTICLES

Most Popular