ಶಾಲಾ ಮಕ್ಕಳಿಗೆ ದಸರಾ, ಬೇಸಿಗೆ ರಜೆ ಘೋಷಣೆ : ಸರಕಾರದ ಆದೇಶ

ಬೆಂಗಳೂರು :‌ ರಾಜ್ಯದಲ್ಲಿ ಬಹುತೇಕ ಶಾಲೆ, ಕಾಲೇಜುಗಳು ಆರಂಭಗೊಂಡಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳು ನಡೆಯುತ್ತೇ ಅನ್ನೋ ಖಚಿತತೆ ಇಲ್ಲ. ಈ ನಡುವಲ್ಲೇ ಶಿಕ್ಷಣ ಇಲಾಖೆ ರಾಜ್ಯದ ಸರಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳ ಮಕ್ಕಳಿಗೆ ದಸರಾ ಹಾಗೂ ಬೇಸಿಗೆ ರಜೆಯನ್ನು ಘೋಷಣೆ ಮಾಡಿದೆ.

ಆಕ್ಟೋಬರ್ 10 ರಿಂದ ಈ ಬಾರಿ ದಸರಾ ರಜೆ ಆರಂಭವಾಗಲಿದ್ದು, ಅಕ್ಟೋಬರ್‌ 20ರಂದು ಮತ್ತೆ ಶಾಲಾರಂಭಗೊಳ್ಳಲಿದೆ. ಈ ಬಾರಿ ಬೇಸಿಗೆ ರಜೆಯ ಅವಧಿಯಲ್ಲಿ ಕಡಿತ ಮಾಡಿದೆ. ಇಷ್ಟು ವರ್ಷ ಎಪ್ರೀಲ್‌ ತಿಂಗಳಿನಿಂದಲೇ ಬೇಸಿಗೆ ರಜೆ ಆರಂಭವಾಗುತ್ತಿದ್ರೆ, ಈ ಬಾರಿ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ 304 ದಿನಗಳ ಪೈಕಿ 66ದಿನಗಳ ಕಾಲ ವಿದ್ಯಾರ್ಥಿಗಳು ರಜೆಯನ್ನು ಪಡೆಯಲಿದ್ದಾರೆ. ಉಳಿದಂತೆ 223 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ. ಈಗಾಗಲೇ6-12 ನೇ ತರಗತಿ ವರೆಗಿನ ಶಾಲೆಗಳು ಆರಂಭವಾಗಿದ್ದು, ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭವಾಗಿಲ್ಲ. ರಾಜ್ಯ ಈಗಾಗಲೇ ಕೊರೊನಾ ಮೂರನೇ ಅಲೆಯ ಆತಂಕವನ್ನು ಎದುರಿಸುತ್ತಿದೆ. ಹೀಗಾಗಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ ಅನ್ನೋ ಖಚಿತತೆ ಇನ್ನೂ ಸಿಕ್ಕಿಲ್ಲ.

ಇದನ್ನೂ ಓದಿ : 1 – 5 Class ಕರ್ನಾಟಕದಲ್ಲಿ ಸದ್ಯಕ್ಕೆ ಆರಂಭವಿಲ್ಲ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : CET Result : ಸಪ್ಟೆಂಬರ್‌ 20 ಸಿಇಟಿ ಫಲಿತಾಂಶ : ಸಚಿವ ಅಶ್ವತ್ಥ್‌ ನಾರಾಯಣ

(Dussehra, summer vacation declared for school children: Karnataka Government order )

Comments are closed.