ಬಾಲಿವುಡ್ ನಟಿ, ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಶ್ರಿದೇವಿ ಪುತ್ರಿ ಹಾಗೂ ಕಪೂರ್ ಮನೆತನದ ಕುಡಿ ಜಾಹ್ನವಿ ಕಪೂರ್ ಸಿನಿಮಾಗಿಂತ ಸೋಷಿಯಲ್ ಮೀಡಿಯಾದಲ್ಲೇ ಸದ್ದು ಮಾಡ್ತಾರೆ.

ಸದಾ ಸದಾ ಹಾಟ್ ಪೋಟೋಗಳು, ವೆಕೇಶನ್ ಡೈರಿಸ್ ಹಂಚಿಕೊಳ್ಳೋ ಜಾಹ್ನವಿ ಕಪೂರ್ ಮತ್ತೊಮ್ಮೆ ಮಾಲ್ಡೀವ್ಸ್ ಡೈರಿಯಿಂದ ಹಾಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಬಿಕನಿಯಲ್ಲಿ ತಮ್ಮ ಮೈಮಾಟತೋರುತ್ತಾ, ಸಮುದ್ರದ ಅಲೆಗಳಂತೆ ಮೈಬಳುಕಿಸುತ್ತಾ ಸ್ಲೋ ಮೋಶನ್ ನಲ್ಲಿ ಹೆಜ್ಜೆ ಹಾಕಿದ ಜಾಹ್ನವಿ ಕಪೂರ್ ವಿಡಿಯೋಗೇ ಲಕ್ಷಾಂತರ ಲೈಕ್ಸ್ ಹರಿದು ಬಂದಿದೆ.

ಪ್ರವಾಸ ಹಾಗೂ ಸಮುದ್ರವನ್ನು ಇಷ್ಟ ಪಡುವ ಜಾಹ್ನವಿ ಕಪೂರ್ ತಾವು ಹಂಚಿಕೊಂಡಿರೋ ವಿಡಿಯೋಗೆ ಮಾನಸಿಕವಾಗಿ ಇಲ್ಲಿದ್ದೇನೆ ಎಂಬ ಟ್ಯಾಗ್ ಲೈನ್ ನೀಡಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಜಾಹ್ನವಿಕಪೂರ್ ಸಹೋದರಿ ಹಾಗೂ ಗೆಳತಿಯರ ಜೊತೆ ಮಾಲ್ಡೀವ್ಸ್ ಗೆ ವೆಕೆಶನ್ ಟ್ರಿಪ್ ಮಾಡಿದ್ದರು. ಈ ವೇಳೆ ಸಖತ್ ಪೋಟೋಶೂಟ್ ಗಳಿಗೆ ಜಾಹ್ನವಿ ಪೋಸ್ ನೀಡಿದ್ದರು.
ಕೇವಲ ಪ್ರವಾಸದ ವಿಡಿಯೋ ಮಾತ್ರವಲ್ಲ, ವರ್ಕೌಟ್ ಹಾಗೂ ತಮ್ಮ ಮಾಡೆಲಿಂಗ್ ಪೋಟೋಗಳನ್ನು ಜಾಹ್ನವಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
(actress janhavi kapoor shared hot videos)