ನವದೆಹಲಿ : ಪಿಎಂ ಕೇರ್ಸ್ ಫಂಡ್ ಭಾರತ ಸರ್ಕಾರದ ನಿಧಿಯಲ್ಲ, ಇದರಿಂದ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಈ ಕುರಿತು ದೆಹಲಿ ಹೈಕೋರ್ಟ್ʼಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, ಇದು ಕಾನೂನಿನ ಅಡಿಯಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ಆಗಿದ್ದು, ಈ ಟ್ರಸ್ಟ್ʼನ ಫಂಡ್ ಭಾರತ ಸರ್ಕಾರದ ನಿಧಿಯಲ್ಲ. ಅದರ ಮೊತ್ತವು ಭಾರತದ ಏಕೀಕೃತ ನಿಧಿಗೆ (Consolidated Fund of India) ಹೋಗುವುದಿಲ್ಲ ಎಂದು ಹೇಳಿದೆ.
ಪಿಎಂ ಕೇರ್ ಟ್ರಸ್ಟ್ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದೆ. ಕಂಟ್ರೋಲರ್ ಮತ್ತು ಅಡಿಟರ್ ಜನರಲ್ ಆಫ್ ಇಂಡಿಯಾದ ಪ್ಯಾನಲ್ ನಿಂದ ಬಂದ ಚಾರ್ಟೆಡ್ ಅಕೌಂಟೆಟ್ ಓರ್ವರು ಹಣವನ್ನು ಪರಿಶೀಲನೆಯನ್ನು ನಡೆಸುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.
ಇದನ್ನೂ ಓದಿ: PM Modi to US : ಸೆ.23ಕ್ಕೆ ಮೋದಿ ಅಮೇರಿಕಾ ಭೇಟಿ : ಜೋ ಬೈಡನ್ ಜೊತೆ ಮಹತ್ವದ ಮಾತುಕತೆ
ಪಿಎಂ ಕೇರ್ಸ್ ನಿಧಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ಪಿಎಂ ಕೇರ್ಸ್ ನಿಧಿ ‘ರಾಜ್ಯದು ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರಿದ್ದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ: ಪಂಜಾಬ್ ನಲ್ಲಿ ಮೂವರು ಶಂಕಿತ ಉಗ್ರರು ಅರೆಸ್ಟ್ : ಸ್ಪೋಟಕ, ಶಸ್ತ್ರಾಸ್ತ್ರ ವಶಕ್ಕೆ
ಈ ಕುರಿತು ದೆಹಲಿ ಹೈಕೋರ್ಟ್ʼಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, ಇದು ಕಾನೂನಿನ ಅಡಿಯಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ಆಗಿದ್ದು, ಈ ಟ್ರಸ್ಟ್ʼನ ಫಂಡ್ ಭಾರತ ಸರ್ಕಾರದ ನಿಧಿಯಲ್ಲ. ಅದರ ಮೊತ್ತವು ಭಾರತದ ಏಕೀಕೃತ ನಿಧಿಗೆ (Consolidated Fund of India) ಹೋಗುವುದಿಲ್ಲ ಎಂದು ಹೇಳಿದೆ.
(PM-CARES Fund is not a government fund: Central government informed Delhi High Court)