ಕೊರೊನಾ ಸೋಂಕಿಗೆ ಪತಿ ಸಾವು : ಮಗಳನ್ನು ನೇಣಿಗೇರಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ !

ಬೆಂಗಳೂರು : ಪತಿ ಕಳೆದ ಕೆಲವು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆದರೆ ಆ ನೋವಿನಿಂದ ಆಕೆಗೆ ಹೊರ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಆಕೆ ತನ್ನ ಮಗಳನ್ನು ನೇಣಿಗೇರಿಸಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ದಿವ್ಯಶ್ರೀ (12 ವರ್ಷ) ಮೃತ ದುರ್ದೈವಿ, ವರಲಕ್ಷ್ಮೀ (38 ವರ್ಷ) ಎಂಬಾಕೆಯೇ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದಾಕೆ. ಬೆಂಗಳೂರು ಹೊರವಲಯದ ರಾಜಾನುಕುಂಟೆ ಬಳಿಯ ದಿಬ್ಬೂರಿನಲ್ಲಿ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇತ್ತೀಚಿಗಷ್ಟೇ ವರಲಕ್ಷ್ಮೀ ಗಂಡ ತಿಮ್ಮರಾಜು ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದ. ವರಲಕ್ಷ್ಮೀ ಅಂಗವಿಕಲೆಯಾಗಿದ್ದ ಕಾರಣಕ್ಕೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು. ಇದೇ ಕಾರಣಕ್ಕೆ ಮಗಳ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ತಾಯಿ ಪ್ಲ್ಯಾನ್‌ ಮಾಡಿದ್ದಾಳೆ. ಅಂತೆಯೇ ಮಗಳನ್ನು ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿದ್ದಾಳೆ. ನಂತರ ಅದೇ ಫ್ಯಾನಿಗೆ ತಾನೂ ಕೂಡ ಕೊರಳೊಡ್ಡಿದ್ದಾಳೆ.

ಆದರೆ ಅಕ್ಕ ನೇಣಿಗೆ ಕೊರಳೊಡ್ಡಿ ನರಳಾಟ ಮಾಡುತ್ತಿರುವುದನ್ನು ನೋಡಿದ ವರಲಕ್ಷ್ಮೀಯ ಎಂಟು ವರ್ಷದ ಮಗು ಕೂಗಿಕೊಂಡು ಹೊರಗೆ ಓಡಿಬಂದಿದೆ. ಸ್ಥಳೀಯರ ಕೂಡಲೇ ಮನೆಯೊಳಗೆ ಧಾವಿಸಿಬಂದು ವರಲಕ್ಷ್ಮೀಯನ್ನು ರಕ್ಷಿಸಿದ್ದಾರೆ. ದುರದೃಷ್ಟವಶಾತ್‌ ಬಾಲಕಿ ಪ್ರಾಣಪಕ್ಷಿ ಹಾರಿ ಹೋಗಿತ್ತು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ವರಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ಕುರಿತು ರಾಜಾನುಗುಂಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೌಟುಂಬಿಕ ಕಲಹಕ್ಕೆ 2 ಬಲಿ : ಪುಟ್ಟ ಕಂದಮ್ಮನನ್ನು ಕೊಂದ ಪಾಪಿ ತಂದೆ

ಇದನ್ನೂ ಓದಿ : ನಿಗೂಢ ಸ್ಪೋಟ : FSL, ಬಾಂಬ್‌ ಸ್ಕ್ವಾಡ್ ಭೇಟಿ

( Husband dies of coronavirus: mother who hanged her daughter and attempted suicide )

Comments are closed.