ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಖೀರ್. ಸಾಮಾನ್ಯ ವಾದ ಖೀರ್ ತಿಂದು ತಿಂದು ಬೇಜರಾಗಿದ್ಯಾ ? ಹಾಗಾದ್ರೆ ನಿಮಗಿದೋ ಹೊಸ ರೀತಿಯ ಖೀರ್ ಮಾಡುವುದನ್ನು ಹೇಳಿ ಕೊಡ್ತೀವಿ. ಈ ಖೀರ್ ರುಚಿ ಮಾತ್ರ ಸೂಪರ್ ಆಗಿರುತ್ತೆ. ಅದೇ ಸುಲಭವಾಗಿ ಮನೆಯಲ್ಲೇ ಮಾಡಬಹುದಾದಂತ ಕ್ಯಾರೆಟ್ ಖೀರ್.

ರುಚಿ ರುಚಿಯಾದ ಕ್ಯಾರೆಟ್ ಖೀರ್ ಮಾಡಲು ಬೇಕಾಗುವ ಪದಾರ್ಥ : ಕ್ಯಾರೆಟ್ : ಅರ್ಧ ಕೆ.ಜಿ, ಸಕ್ಕರೆ : ರುಚಿಗೆ ತಕ್ಕಷ್ಟು, ಹಾಲು : ಅರ್ಧ ಲೀಟರ್, ತುಪ್ಪ: ಎರಡು ಚಮಚ, ಗೋಡಂಬಿ : ಒಂದು ಕಪ್, ಬಾದಾಮಿ : 10-15, ಏಲಕ್ಕಿ : 2
ಇದನ್ನೂ ಓದಿ: Venilla Cake : ಒಮ್ಮೆ ಟ್ರೈ ಮಾಡಿ ಎಗ್ ಲೆಸ್ ವೆನಿಲ್ಲಾ ಕೇಕ್

ಕ್ಯಾರೆಟ್ ಖೀರ್ ಮಾಡುವ ವಿಧಾನ : ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಬಿಸಿ ಮಾಡಿದ ತುಪ್ಪಕ್ಕೆ ಸಕ್ಕರೆ ಹಾಗೂ ತುರಿದ ಕ್ಯಾರೆಟ್ ಹಾಕಿ. ಇದಾದ್ಮೇಲೆ 2ರಿಂದ 5 ನಿಮಿಷ ಬೇಯಿಸಿ. ನಂತ್ರ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ ಸುಮಾರು 20 ನಿಮಿಷ ಬೇಯಿಸಿ.

ಎಲ್ಲವೂ ಬೆಂದ ಮೇಲೆ ಏಲಕ್ಕಿ ಹುಡಿ ಹಾಕಿ. ತುಪ್ಪದಲ್ಲಿ ಒಣ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದು ಮಿಶ್ರಣಕ್ಕೆ ಹಾಕಿದ್ರೆ ಕ್ಯಾರೆಟ್ ಖೀರ್ ಸಿದ್ಧ. ಇದನ್ನು ನಿಮ್ಮ ಮನೆಯವರೆಲ್ಲಾ ಒಮ್ಮೇ ತಿಂದ್ರೇ ಮತ್ತೆ ಮತ್ತೆ ಇದೇ ಕ್ಯಾರೆಟ್ ಖೀರ್ ಮಾಡಲು ಹೇಳುತ್ತಾರೆ. ಅಲ್ಲದೇ ಇದು ಅರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: ಮನೆಯಲ್ಲೇ ಮಾಡಿ’ಬಾದಾಮ್ ಹಲ್ವಾʼ : ಇಲ್ಲಿದೆ ಮಾಡುವ ಸುಲಭ ವಿಧಾನ
(Tell them to do a new kind of kheer)