ಸ್ಯಾಂಡಲ್ವುಡ್, ಬಾಲಿವುಡ್,ಟಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚು ಮುನ್ನುಗ್ಗುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಜೊತೆಗೆ ಜಾಹೀರಾತಿನಲ್ಲೂ ಬ್ಯುಸಿಯಾಗಿದ್ದಾರೆ. ಆದರೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋ ರಶ್ಮಿಕಾ ಮಂದಣ್ಣ ಮಾತ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ನಟಿ ರಶ್ಮಿಕಾ ಮಂದಣ್ಣ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಆಕ್ಟ್ ಮಾಡಿದ್ದಾರೆ. ಇದರಲ್ಲಿ ರಶ್ಮಿಕಾ ಯೋಗ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೇ, ವಿಕ್ಕಿ ಕೌಶಲ್ ಯೋಗ ಕಲಿಯುವ ವಿದ್ಯಾರ್ಥಿಯಾಗಿ ನಟಿಸಿದ್ದಾರೆ.
ಯೋಗ ಮಾಡುವಾಗ ರಶ್ಮಿಕಾ ಕೈ ಎತ್ತಲು ಸೂಚಿಸುತ್ತಾರೆ. ಈ ವೇಳೆ ಚೂರೇ ಚೂರು ಕಾಣಿಸುವ ಅವರ ಒಳ ಉಡುಪಿನ ಪಟ್ಟಿ ಕಂಡು ಮೈಮರೆತು ನಿಲ್ಲುತ್ತಾರೆ. ಅಮುಲ್ ಮ್ಯಾಚೋ ಎಂಬ ಒಳ ಉಡುಪು ಬ್ರ್ಯಾಂಡ್ ನ ಜಾಹೀರಾತಿನಲ್ಲಿ ರಶ್ಮಿಕಾ ಹೀಗೆ ಕಾಣಿಸಿಕೊಂಡಿದ್ದಾರೆ. ಇನ್ನೊಮ್ಮೆ ರಶ್ಮಿಕಾ ತರಗತಿಗೆ ಮೊದಲೇ ಬಂದಿರುತ್ತಾರೆ. ಈ ವೇಳೆ ವಿಕ್ಕಿ ಕೌಶಲ್ ಅವರ ಯೋಗ ಮ್ಯಾಟ್ ನ್ನು ರಶ್ಮಿಕಾ ಉದ್ದೇಶ ಪೂರ್ವಕವಾಗಿ ಮೇಲಕ್ಕೆ ಇಡುತ್ತಾರೆ.
ಅದನ್ನು ತೆಗೆಯಲು ವಿಕ್ಕಿ ಕೌಶಲ್ ಕೈಎತ್ತಿದಾಗ ಮತ್ತೆ ಕಾಣಿಸುವ ಅವರ ಒಳ ಉಡುಪು ಕಂಡು ಮುಗುಳುನಗುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಜಾಹೀರಾತಿನ ಕಾನ್ಸೆಪ್ಟ್ ಈಗ ವಿವಾದಕ್ಕೆ ಕಾರಣವಾಗಿದೆ.
ಯಾವುದಾದರೂ ನಟರು ಹೀಗೆ ಮಹಿಳೆಯರ ಒಳ ಉಡುಪನ್ನು ನೋಡಿ ಮೈಮರೆತಂತೆ ಅಥವಾ ಆರ್ಕಷಿತರಾದಂತೆ ಚಿತ್ರಿಸಿದ್ದರೇ ಆತನನ್ನು ಕಾಮುಕನ ಪಟ್ಟಿಗೆ ಸೇರಿಸಲಾಗುತ್ತಿರಲಿಲ್ಲವೇ? ಅಂದ ಮೇಲೆ ಮಹಿಳೆಯೊರ್ವಳು ಪುರುಷರ ಒಳ ಉಡುಪಿಗೆ ಆಕರ್ಷಿತರಾಗುವಂತೆ ತೋರಿಸಿದ್ದು ಸೃಜನಾತ್ಮಕ ಚಿತ್ರೀಕರಣ ಎನ್ನಿಸಿಕೊಳ್ಳಲು ಹೇಗೆ ಸಾಧ್ಯ?
ಹಲವು ಚಿತ್ರರಂಗಗಳಲ್ಲಿ ನಟಿಸಿ ಅನುಭವ ಹೊಂದಿರುವ ನಟಿ ರಶ್ಮಿಕಾಗೆ ಜಾಹೀರಾತಿನ ಕಾನ್ಸೆಪ್ಟ್ ನೋಡಿದ ಬಳಿಕವೂ ನಟಿಸಬೇಕೆ ಬೇಡವೇ ಎಂಬ ವಿವೇಚನೆ ಇರಬೇಕಲ್ಲವೇ? ದುಡ್ಡಿಗಾಗಿ ತಮ್ಮ ಘನತೆಯನ್ನು ಲಕ್ಷಿಸದೇ ಇಂತಹ ಜಾಹೀರಾತಲ್ಲಿ ನಟಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
(Vicky Kaushal and Rashmika Mandanna in Macho Sporto ad)