Bajarangi-2: ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ: ಮತ್ತೊಮ್ಮೆ ಫಿಕ್ಸ್ ಆಯ್ತು ಭಜರಂಗಿ-2 ರಿಲೀಸ್ ಡೇಟ್

ಎಲ್ಲ ಅಂದುಕೊಂಡಂತೆ ಆಗಿದ್ದರೇ ಕರುನಾಡ ಶಿವಣ್ಣ , ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಈ ಸಂಭ್ರಮವನ್ನು ಕಸಿದುಕೊಂಡಿತ್ತು. ಕೊನೆಗೂ ಭಜರಂಗಿ ಸಿನಿಮಾ ಥಿಯೇಟರ್ ಗೆ ಬರಲು ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್ ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ನಡೆಯೋದು ಫಿಕ್ಸ್ ಆಗಿದೆ.

ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನೀರಿಕ್ಷಿತ ಚಿತ್ರ ಭಜರಂಗಿ-2 ರಿಲೀಸ್ ಗೆ ಸಿದ್ಧವಾಗಿದೆ. ಆದರೆ ಥಿಯೇಟರ್ ಗೆ ಬರೋದಿಕ್ಕೆ ಕರೋನಾ ಅಡ್ಡಗಾಲಾಗಿತ್ತು. ಶೇಕಡಾ 50 ರಷ್ಟು ಮಾತ್ರ ಪ್ರವೇಶಾವಕಾಶಗಳನ್ನು ನೀಡಿದ್ದರಿಂದ ಯಾವುದೇ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿರಲಿಲ್ಲ.

ಈಗ ಸರ್ಕಾರ ಸ್ಯಾಂಡಲ್ ವುಡ್ ಗೆ ಸಿಹಿಸುದ್ದಿ ನೀಡಿದ್ದು ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಿಗೆ ಶೇಕಡಾ 100 ಕ್ಕೆ 100 ರಷ್ಟು ಪ್ರವೇಶಾವಕಾಶಕ್ಕೆ ಅನುಮತಿ ನೀಡಿದೆ. ರಾಜ್ಯದ 25 ಜಿಲ್ಲೆಗಳಿಗೆ ಈ ಅನುಮತಿ ಅನ್ವಯವಾಗಲಿದೆ.

ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಚಟುವಟಿಕೆ ಉತ್ಸಾಹ ಗರಿಗೆದರಿದ್ದು ಈಗಾಗಲೇ ಸುದೀಪ್  ನಟನೆಯ ಕೋಟಿಗೊಬ್ಬ-3 ಹಾಗೂ ದುನಿಯಾ ವಿಜಯ್ ರ ಸಲಗ ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ. ಇದರ ಬೆನ್ನಲ್ಲೇ  ಈಗ ಶಿವಣ್ಣನ ಭಜರಂಗಿ-2 ಕೂಡ ಅಕ್ಟೋಬರ್ 29 ಶುಕ್ರವಾರ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.  

ಜಯಣ್ಣ ಭೋಗೇಂದ್ರ ಜಂಟಿಯಾಗಿ ನಿರ್ಮಿಸಿರೋ ಈ ಸಿನಿಮಾಕ್ಕೆ ಹರ್ಷ ನಿರ್ದೇಶನವಿದ್ದು, ಭಾವನಾ ನಾಯಕಿಯಾಗಿದ್ದಾರೆ. ಚಿತ್ರದ ವಿಶೇಷ ಆಕರ್ಷಣೆ ಎಂದರೇ ನಟಿ ಶ್ರುತಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

(Shivarajkumar movie bajarangi -2 release on october 29)

Comments are closed.