ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಕಾಲೇಜುಗಳು ಆರಂಭಗೊಂಡಿತ್ತು. ಆದ್ರೀಗ ಕೊರೊನಾ ಬಿಗ್ ಶಾಕ್ ಕೊಟ್ಟಿದ್ದು, ಹೆಸ್ಕೂರಿನಲ್ಲಿ ಇರುವ ಚೈತನ್ಯ ರೆಸಿಡೆನ್ಶಿ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನ ಹೆಸ್ಕೂರಿನಲ್ಲಿರುವ ಚೈತನ್ಯ ರೆಸಿಡೆನ್ಶಿ ಕಾಲೇಜಿನಲ್ಲಿ ಕೊರೊನಾ ಆರ್ಭಟಿಸಿದೆ. ಕರ್ನಾಟಕ ಹಾಗೂ ತಮಿಳುನಾಡಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಈ ಪೈಕಿ 60 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಆರೋಗ್ಯಾಧಿಕಾರಿಗಳು ಕಾಲೇಜಿಗೆ ಭೇಟಿಯನ್ನು ನೀಡಿದ್ದಾರೆ. ಕಾಲೇಜು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ, ಹೀಗಾಗಿ ಹಾಸ್ಟೆಲ್‌ನಲ್ಲಿರುವ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ.
ಕೊರೊನಾ ಸೋಂಕು ಕಾಣಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು, ಸೋಂಕಿತರ ಸಂಕರ್ಪದಲ್ಲಿದ್ದವರನ್ನು ಕೊರೊನಾ ಟೆಸ್ಟ್‌ಗೆ ಮಾಡುವುದರ ಜೊತೆಗೆ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕೊರೊನಾದಿಂದ ಇಳಿಕೆಯಾಗುತ್ತೆ ಆಯುಷ್ಯ ! ವಿಶ್ವಕ್ಕೇ ಶಾಕ್ ಕೊಟ್ಟ ಆಕ್ಸ್ ಫರ್ಡ್ ವಿವಿ ವರದಿ
ಇದನ್ನೂ ಓದಿ : ಕೊರೊನಾವನ್ನೇ ಮೀರಿಸಿದ ಡೆಂಗ್ಯೂ : ರಾಜ್ಯದಲ್ಲಿ 3,386 ಮಂದಿಗೆ ಡೆಂಗ್ಯೂ ಜ್ವರ !
( Coronavirus infection has been confirmed in 60 students of Chaitanya Residential College in Heskur, Bangalore. The Corona Test is being conducted for 500 students at the college)