ಮಂಗಳವಾರ, ಏಪ್ರಿಲ್ 29, 2025
HomeCinemaActor Sathyajith : ಖ್ಯಾತ ನಟನ ಆರೋಗ್ಯ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲಾದ ಹಿರಿಯ...

Actor Sathyajith : ಖ್ಯಾತ ನಟನ ಆರೋಗ್ಯ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಸತ್ಯಜಿತ್‌

- Advertisement -

ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಸತ್ಯಜಿತ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

ಕಳೆದ ಹಲವು ದಿನಗಳಿಂದಲೂ ಸತ್ಯಜಿತ್‌ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಡಲಾಗಿದೆ. ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಅವರ ಒಂದು ಕಾಲನ್ನು ಕತ್ತರಿಸಲಾಗಿತ್ತು. ನಂತರದಲ್ಲಿ ಮಧುಮೇಹದ ಜೊತೆಗೆ ಇತರ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು.

ಇದನ್ನೂ ಓದಿ: Aryan Khan NCB Arrest : ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ಆರೋಪ : ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಬಂಧಿಸಿದ ಎನ್‌ಸಿಬಿ

ಕನ್ನಡ ಚಿತ್ರರಂಗದ ಖ್ಯಾತ ನಟ ಸತ್ಯಜಿತ್‌ ಅವರು ಸುಮಾರು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡ ನಂತರದಲ್ಲಿ ಸಿನಿಮಾದಲ್ಲಿನ ಬೇಡಿಕೆ ಕಡಿಮೆಯಾಗಿತ್ತು. ಇದರಿಂದಾಗಿ ಸತ್ಯಜಿತ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ಸತ್ಯಜಿತ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Samantha Akkineni and Naga Chaitanya : ದಾಂಪತ್ಯ ಜೀವನಕ್ಕೆ ಮಂಗಳ ಹಾಡಿದ ಸಮಂತಾ, ನಾಗ ಚೈತನ್ಯ ದಂಪತಿ

(Famous actor’s health condition worsened: Senior actor Satyajit hospitalized)

RELATED ARTICLES

Most Popular