ಕೋವಿಡ್‌ನಿಂದ ಮೃತಪಟ್ಟ ಅನಾಥರಿಗೆ ಮುಕ್ತಿ ದೊರಕಿಸಿದ ಸಚಿವ ಆರ್.‌ ಅಶೋಕ್‌

ಮಂಡ್ಯ: ಕೋವಿಡ್‌ ಮಹಾಮಾರಿಯಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ತಮ್ಮವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇನ್ನೂ ಹಲವು ಮಂದಿ ಅನಾಥರು ಸಾವನ್ನಪ್ಪಿದ್ದರು. ಕೋವಿಡ್‌ ನಿಂದ ಮೃತಪಟ್ಟ ಅನಾಥ ಶವಗಳ ಅಂತ್ಯಕ್ರೀಯೆ ನೆರವೇರಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗೋಸಾಯಿ ಘಾಟ್‌ನಲ್ಲಿ ಕೊರೊನಾ ವೈರಸ್‌ನಿಂದ ಮೃತರಾದವರ ಆತ್ಮಕ್ಕೆ ಶಾಂತಿ ದೊರಕಿಸಲು ಪಿತೃಪಕ್ಷದ ಸಂದರ್ಭದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಮಂಡ್ಯ ಜಿಲ್ಲಾಡಳಿತ ಹಾಗೂ ಜ್ಯೋತಿಷಿ ವೇದಬ್ರಹ್ಮ ಡಾ.ವಿ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ರೂಪರೇಷ ಸಿದ್ಧಪಡಿಸಿಕೊಂಡು ಧಾರ್ಮಿಕ ಕಾರ್ಯ ನಡೆಸಲಾಗಿದೆ. ಸಾಮೂಹಿಕವಾಗಿ ಪ್ರೇತ ಸಂಸ್ಕಾರ, ನಾರಾಯಣ ಬಲಿ, ಎಡೆ ಪೂಜೆಯ ನಂತರದಲ್ಲಿ ತಿಲತರ್ಪಣದೊಂದಿಗೆ ಕಾವೇರಿ ನದಿಯಲ್ಲಿ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ್ದಾರೆ.

ಸಚಿವ ಆರ್.‌ ಅಶೋಕ್‌ ಅವರು ಈ ಹಿಂದೆಯೇ ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟ ವಾರಾಸುದಾರರು ಇಲ್ಲದ ಸುಮಾರು ಸಾವಿರಕ್ಕೂ ಅಧಿಕ ಅಸ್ತಿಯನ್ನು ವಿಸರ್ಜನೆ ಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಉಪ ವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ವಾರ್ತಾಧಿಕಾರಿ ಟಿ.ಕೆ.ಹರೀಶ್, ಶ್ರೀರಂಗಪಟ್ಟಣ ತಹಸಿಲ್ದಾರ್ ಶ್ವೇತಾ ಮುಂತಾದವರು ಪಾಲ್ಗೊಂಡಿದ್ದರು.

R Ashok minister

ಕಾರ್ಯಕ್ರಮದ ನಂತರದಲ್ಲಿ ಮಾತನಾಡಿದ ಸಚಿವ ಆರ್.‌ ಅಶೋಕ್‌ ಅವರು, ಕೋವಿಡ್ ಸಾಂಕ್ರಾಮಿಕದಿಂದ ಮೃತರಾದವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸರ್ಕಾರ ಮುಂದಾಗಿದೆ. ಯಾರು ಅನಾಥರಲ್ಲ, ಬದುಕಿದ್ದಾಗ ಎಲ್ಲರೂ ಸಹ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ. ನಮ್ಮದು ಮಾನವೀಯತೆ ಮೆರೆದಂತಹ ರಾಜ್ಯವಾಗಿದೆ. ಆದ್ದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಮೂಹಿಕ ಅಂತಿಮ ವಿಧಿವಿಧಾನ ನೆರವೇರಿಸಿದೆವು ಎಂದಿದ್ದಾರೆ.

ಇದನ್ನೂ ಓದಿ : ಬಡವರಿಗೆ ಇನ್ಮುಂದೆ ಉಚಿತ ವಿದ್ಯುತ್‌ : ಬೆಳಕನ್ನೇ ಕಾಣದವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಮಕ್ಕಳಿಗೆ ವ್ಯಾಕ್ಸಿನ್‌ : ಶಾಲೆಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ : ಆರೋಗ್ಯ ಸಚಿವ ಸುಧಾಕರ್‌

(Minister R.Ashok confers in the name of Covid Victims in Mandya)

Comments are closed.