ಡ್ರಗ್ಸ್ ಕೇಸ್‌ನಲ್ಲಿ ಇದೀಗ ಬಾಲಿವುಡ್ ದಿಗ್ಗಜರ ಹೆಸರುಗಳೇ ಕೇಳಿಬರುತ್ತಿದೆ. ಅದರಲ್ಲೂ ಡ್ರಗ್ಸ್ ಪಾರ್ಟಿಯ ವೇಳೆ ಸಿಕ್ಕಿಬಿದ್ದ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಶಾರುಖ್ ಪುತ್ರನ ಬಂಧನ ಇದೀಗ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಆರ್ಯನ್ ಖಾನ್ ಬಂಧನದ ಬಳಿಕ ಬಾಲಿವುಡ್ ಸ್ಟಾರ್ ಮಕ್ಕಳು ಏನ್ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಈ ಹೊತ್ತಲ್ಲೇ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ತನ್ನ ಮಗನ ಬಗ್ಗೆ ಮಾಡಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಪುತ್ರ ಎಲ್ಲಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು. ಜನರು ಪ್ರಶ್ನೆ ಮಾಡುವುದಕ್ಕಿಂತ ಮುನ್ನವೇ ಟ್ವಿಂಕಲ್ ಖನ್ನಾ ಈ ಕುರಿತು ಮಾಹಿತಿ ನೀಡಿದ್ದಾರೆ.
ಮಗನ ಫೋಟೋವನ್ನು ಹಂಚಿಕೊಂಡಿರುವ ಅವರು ಪುತ್ರ ಆರ್ಯನ್ ಖಾನ್ ಪಾರ್ಟಿ ವೇಳೆ ತನ್ನ ಪುತ್ರ ಭಾರತದಲ್ಲಿ ಇರಲಿಲ್ಲ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಟ್ವಿಂಕಲ್ ಖನ್ನಾ ಅವರ ಬುದ್ಧಿವಂತಿಕೆಗೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ. ಅಕ್ಷಯ್ ಕುಮಾರ್ ಪುತ್ರ ಆರವ್ ಕುಮಾರ್ ಸದ್ಯ ಲಂಡನ್ ನಲ್ಲಿ ಇದ್ದಾರೆ. ಆ ಕುರಿತು ಟ್ವಿಂಕಲ್ ಖನ್ನಾ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ.
“ಭಾನುವಾರ ಬೆಳಗ್ಗೆ ತುಂಬಾ ಸ್ಪೆಷಲ್ ಆಗಿತ್ತು. ಅವನ ಪ್ರೀತಿಯ ಕ್ಯಾಂಪಸ್ ನಲ್ಲಿ ಅವನನ್ನು ಭೇಟಿ ಮಾಡಲು ಸಾಧ್ಯವಾಯ್ತು. ಇಬ್ಬರೂ ಜೊತೆಯಾಗಿ ತಿಂಡಿ ತಿಂದೆವು” ಎಂದು ಟ್ವಿಂಕಲ್ ಖನ್ನಾ ಕ್ಯಾಪ್ಷನ್ ನೀಡಿದ್ದಾರೆ. ಅಕ್ಷಯ್ ಕುಮಾರ್ ಪುತ್ರ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 19 ವರ್ಷದ ಅಕ್ಷಯ್ ಪುತ್ರ ಸದ್ಯ ಲಂಡನ್‌ನಲ್ಲಿ ಓದುತ್ತಿದ್ದಾರೆ.
ಭಾನುವಾರ ಬೆಳಗ್ಗೆ ಶಾರುಖ್ ಪುತ್ರ ಆರೆಸ್ಟ್ ಆಗುವುದಕ್ಕೂ, ಇತ್ತ ತಮ್ಮ ಪುತ್ರನ ಫೋಟೋವನ್ನು ಟ್ವಿಂಕಲ್ ಖನ್ನಾ ಪೋಸ್ಟ್ ಮಾಡುವುದಕ್ಕೂ ಏನಾದರೂ ಲಿಂಕ್ ಇದೆಯೇ? ಅತವಾ ತನ್ನ ಮಗ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎನ್ನುವುದನ್ನು ಸಾಬೀತು ಮಾಡಲು ಟ್ವಿಂಕಲ್ ಖನ್ನಾ ಪರೋಕ್ಷವಾಗಿ ಹೀಗೆ ಹೇಳಿದ್ದಾರಾ? ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ ಇಂಥ ಸೂಕ್ತ ಸಂದರ್ಭದಲ್ಲಿ ಮಗನ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
(Akshay Kumar’s wife Twinkle Khanna posted post viral)