ಮಂಗಳೂರು : ಮದ್ಯಪಾನಕ್ಕೆ ಹಣ ನಿರಾಕರಿಸಿದ್ದಕ್ಕೆ ಸ್ನೇಹಿತನ ಹತ್ಯೆ : 7 ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಮಂಗಳೂರು : ಮದ್ಯಪಾನ ಮಾಡಲು ಹಣ ನಿರಾಕರಿಸಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯೋರ್ವನನ್ನು ಸುಮಾರು 7 ತಿಂಗಳ ಬಳಿಕ ಮಂಗಳೂರು ರೈಲ್ವೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಒರಿಸ್ಸಾ ಮೂಲದ ಪ್ರದೀಪ್‌ ಲಕಾರ್‌ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಫೆ.18ರಂದು ಮಂಗಳೂರು ಬಂದರು ಗೂಡ್ ಶೆಡ್ ಯಾರ್ಡಿನಲ್ಲಿ ಅಸ್ಸಾಂ ಮೂಲದ ಮೈನುಲ್ ಹಕ್ ಬರ್ಬಯಾ (42 ವರ್ಷ) ಎಂಬಾತನ ಕೊಲೆ ನಡೆದಿತ್ತು. ನಂತರದಲ್ಲಿ ಆತನ ಸ್ನೇಹಿತನಾಗಿದ್ದ ಪ್ರದೀಪ್‌ ಲಕಾರ್‌ ನಾಪತ್ತೆಯಾಗಿದ್ದ. ಹೀಗಾಗಿ ಪೊಲೀಸರೇ ಆತನೇ ಕೊಲೆ ಮಾಡಿದ್ದಾನೆ ಅನ್ನೋ ಅನುಮಾನ ಮೂಡಿತ್ತು.

ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮೈನುಲ್‌ ಹಕ್‌ ಬರ್ಬಯಾ ಹಾಗೂ ಪ್ರದೀಪ್‌ ಲಕಾರ್‌ ಸ್ನೇಹಿತರಾಗಿದ್ದರು. ಮದ್ಯಪಾನ ಮಾಡಲು ಹಣ ನೀಡದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಇದೇ ವೇಳೆಯಲ್ಲಿ ಪ್ರದೀಪ್‌ ಮೈನುಲ್‌ ಹಕ್‌ ಬರ್ಬಯಾ ಎಂಬಾತನನ್ನು ಕೊಲೆಗೈದು ಕನ್ಯಾಕುಮಾರಿಯಲ್ಲಿ ತಲೆ ಮರೆಯಿಸಿಕೊಂಡಿದ್ದ. ಆದರೆ ಆರೋಪಿ ರೈಲಿನ ಮೂಲಕ ಮಂಗಳೂರಿಗೆ ಬರುತ್ತಿದ್ದಂತೆಯೇ ರೈಲ್ವೆ ಪೊಲೀಸರು ಪ್ರದೀಪ್‌ ಲಕಾರನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

ಇದನ್ನೂ ಓದಿ : ದೇವರ ಪ್ರಸಾದದ ಹೆಸರಲ್ಲಿ ವಿದೇಶಕ್ಕೆ ಡ್ರಗ್ಸ್‌ ಸಾಗಾಟ : ಮೂವರ ಬಂಧನ

( Mangalore: Murder of a friend for refusing to pay for liquor: Arrest )

Comments are closed.