ಮುಂಬೈ : ಬಾಲಿವುಡ್ ಬಾದ್‌ಶಾ, ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಆದ್ರೀಗ ಮಾಡಿದ ತಪ್ಪಿದ ಅರಿವಾಗಿರುವ ಆರ್ಯನ್ ಖಾನ್ ಇನ್ಮುಂದೆ ತಪ್ಪು ಕೆಲಸವನ್ನು ತ್ಯೆಜಿಸಿ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಆರ್ಯನ್ ಖಾನ್ ಹೇಳಿದ್ದಾನೆ. ಎನ್‌ಸಿಬಿ (NCB) ಅಧಿಕಾರಿಗಳ ವಿಚಾರಣೆಯ ವೇಳೆಯಲ್ಲಿ ತನ್ನಿಂದಾಗಿರುವ ತಪ್ಪನ್ನು ಒಪ್ಪಿಕೊಂಡಿದರುವ ಆರ್ಯನ್ ಖಾನ್ ಮುಂದೆಂದೂ ಇಂತಹ ಕಾರ್ಯವನ್ನು ಮಾಡುವುದಿಲ್ಲ ಎಂದಿದ್ದಾರೆ.
ಅಕ್ಟೋಬರ್ 2 ರಂದು ಮುಂಬೈಯ ಅರಬ್ಬಿ ಸಮುದ್ರದಲ್ಲಿ ಕ್ರೂಸ್ ನಡೆದಿದ್ದ ಡ್ರಗ್ಸ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪ ಆರ್ಯನ್ ಖಾನ್ ಮೇಲಿದೆ, ಅಲ್ಲದೇ ಪಾರ್ಟಿ ನಡೆಯುತ್ತಿದ್ದ ಹಡಗಿನಿಂದ ಮಾದಕ ವಸ್ತು ವಶಪಡಿಸಿಕೊಂಡ ನಾರ್ಕೋಟಿಕ್ಸ್ ನಿಯಂತ್ರಣ ಬ್ಯೂರೋ (Narcotics Control Bureau ) ಆರ್ಯನ್ ಖಾನ್‌ನನ್ನು ಬಂಧಿಸಿತ್ತು. ಎನ್‌ಸಿಬಿ ಅಧಿಕಾರಿಗಳ ವಿಚಾರಣೆಯ ಬೆನ್ನಲ್ಲೇ ಆರ್ಯನ್ ಖಾನ್ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರೂ ಕೂಡ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲೀಗ ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ.
ಎನ್ ಸಿಬಿಯ ವಲಯ ನಿರ್ದೇಶಕ (zonal director) ಸಮೀರ್ ವಾಂಖೆಡೆ ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅಧಿಕಾರಿಗಳು ಆರ್ಯನ್ ಖಾನ್ ಜೊತೆಯಲ್ಲಿ ಸಮಾಲೋಚನೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ಆರ್ಯನ್ ಖಾನ್ ತಾನು ಇನ್ಮುಂದೆ ‘ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ’ಕೆಲಸ ಮಾಡುತ್ತೇವೆ. ತಪ್ಪು ಕಾರಣಗಳಿಗಾಗಿ ಪ್ರಚಾರವಾಗುವ ಯಾವುದೇ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ತಿಳಿಸಿರುವ ಕುರಿತು ಎನ್‌ಸಿಬಿ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.
‘ನನ್ನ ಬಗ್ಗೆ ನಿಮಗೆ ಹೆಮ್ಮೆ ಪಡುವಂಥ ಕೆಲಸವನ್ನು ನಾನು ಮಾಡುತ್ತೇನೆ. ಬಂಧನದ ನಂತರ, ಎನ್ ಸಿಬಿಯಿಂದ ಬಂಧಿಸಲ್ಪಟ್ಟ ಇಬ್ಬರು ಮಹಿಳೆಯರು ಸೇರಿದಂತೆ ಇತರ ಏಳು ಆರೋಪಿಗಳೊಂದಿಗೆ ಆರ್ಯನ್ ಸಮಾಲೋಚನೆ ಗೆ ಒಳಗಾದರು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರಾಪಿಕ್ ಸಬ್ ಸ್ಟೆನ್ಸಸ್ (NDPS) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯವು ಅಕ್ಟೋಬರ್ 20 ರಂದು ಆರ್ಯನ್ ಅವರ ಜಾಮೀನು ಅರ್ಜಿಯ ಮೇಲೆ ಆದೇಶ ಹೊರಡಿಸಲಿದೆ.
(Aryan Khan says he will work for the poor and take the wrong path.)