GOOD NEWS : ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಇಳಿಕೆಯ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜನತೆ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈ ನಡುವಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಗುಡ್‌ನ್ಯೂಸ್‌ ಕೊಡುವ ಸುಳಿವು ಕೊಟ್ಟಿದ್ದಾರೆ. ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಎಂದಿದ್ದಾರೆ.

ಹಾನಗಲ್‌ ಉಪಚುನಾವಣಾ ಪ್ರಚಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ತೈಲ ಬೆಲೆ ಏರಿಕೆಯಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ಆರ್ಥಿಕತೆಯ ಸುಧಾರಣೆಗೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಒಂದೊಮ್ಮೆ ಆರ್ಥಿಕ ಸುಧಾರಣೆ ಕಂಡು ಬಂದ್ರೆ ಉಪಚುನಾವಣೆಯ ನಂತರದಲ್ಲಿ ತೈಲ ಬೆಲೆಯನ್ನು ಇಳಿಕೆ ಮಾಡಲಾಗುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ನೂರರ ಗಡಿದಾಟಿದೆ. ರಾಯಚೂರಿನಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 109.35 ರೂ. ಇದ್ರೆ, ತುಮಕೂರಿನಲ್ಲಿ 108.08 ರೂ, ಕಲಬುರಗಿಯಲ್ಲಿ ಪೆಟ್ರೋಲ್ 109.26, ಬೀದರ್​ನಲ್ಲಿ 110.42, ಚಿತ್ರದುರ್ಗದಲ್ಲಿ 111.30, ಮಂಡ್ಯದಲ್ಲಿ 109.28, ಯಾದಗಿರಿಯಲ್ಲಿ 109.88, ಚಿಕ್ಕಬಳ್ಳಾಪುರದಲ್ಲಿ 109.59, ಧಾರವಾಡದಲ್ಲಿ 109.26 ರೂ. ಗಡಿದಾಟಿದೆ.

Petrol and diesel prices goes record high in India : Check today rates
ಸಾಂದರ್ಭಿಕ ಚಿತ್ರ

ಅಲ್ಲದೇ ಡಿಸೇಲ್‌ ದರ ಕೂಡ ನೂರರ ಗಡಿದಾಟಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.37 ರೂ. ಆಗಿದ್ದರೆ, ರಾಯಚೂರಿನಲ್ಲಿ100.25 ರೂಪಾಯಿ, ತುಮಕೂರಿನಲ್ಲಿ100.84 ರೂಪಾಯಿ, ಕಲಬುರಗಿಯಲ್ಲಿ 100.16 ರೂಪಾಯಿ, ಬೀದರ್​ನಲ್ಲಿ 101.22 ರೂಪಾಯಿ, ಚಿತ್ರದುರ್ಗದಲ್ಲಿ101.93 ರೂಪಾಯಿ ಇದೆ.

ರಾಜ್ಯದಲ್ಲಿ ದಿನ ಕಳೆಯುತ್ತಿದ್ದಂತೆಯೇ ಪೆಟ್ರೋಲ್‌ ಹಾಗೂ ಡಿಸೇಲ್‌ ದರದಲ್ಲಿ ಭಾರಿ ಏರಿಕೆ ಕಾಣುತ್ತಲೇ ಇದೆ. ಜನಸಾಮಾನ್ಯರು ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇನ್ನೊಂದೆಡೆಯಲ್ಲಿ ದೇಶದಲ್ಲಿ ತೈಲ ಬೆಲೆ ಇನ್ನಷ್ಟು ದಿನಗಳ ಕಾಲ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಕಲ್ಲಿದ್ದಲು ಕೊರತೆ ಎದುರಾಗಿದ್ದು ಏಕೆ? ವಿದ್ಯುತ್​ ಉತ್ಪಾದನೆ ಮೇಲೆ ಏನೆಲ್ಲಾ ಪರಿಣಾಮ? ಆರ್ಥಿಕ ಪರಿಸ್ಥಿತಿ ಏನಾದೀತು?

ಇದನ್ನೂ ಓದಿ : ರಾಜ್ಯದಲ್ಲಿ ನಿಲ್ಲದ ಮಳೆಯ ಅಬ್ಬರ : ಇನ್ನೂ ಎರಡು ದಿನ ಭಾರಿ ಮಳೆ, 16 ಜಿಲ್ಲೆಯಲ್ಲಿ Yellow ಅಲರ್ಟ್

(Karnataka CM Basavaraj Bommai has hinted at lowering the price of petrol and diesel at Hubli )

Comments are closed.