ಸಿನಿಮಾ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಆದ್ರೀಗ ಭಾರತೀಯ ನಟಿ ನೀನಾ ಗುಪ್ತಾ ತಾನು ವೈದ್ಯರು ಹಾಗೂ ಟೈಲರ್ ಕೈಯಲ್ಲಿ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನೀನಾ ಗುಪ್ತ ತನ್ನ ಆತ್ಮಕಥೆ ‘ಸಚ್ ಕಹುನ್ ತೋ’ ವೈದ್ಯರು ಹಾಗೂ ಟೈಲರ್ ತನ್ನ ದೇಹದ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡುತ್ತಿರುವ ಕುರಿತು ಬಹಿರಂಗ ಪಡಿಸಿದ್ದಾರೆ.
ನಟಿ ನೀನಾ ಗುಪ್ತ ತನ್ನ ಜೀವನದುದ್ದಕ್ಕೂ ಅನುಭವಿಸಿದ್ದ ಯಾತನೆಯನ್ನು ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ತಾನು ಎಷ್ಟೊಂದು ಅಸಹ್ಯವನ್ನು ಎದುರಿಸಿದ್ದೇನೆ ಅನ್ನೋದನ್ನು ಎಳೆ ಎಳೆಯಾಗಿ ಬರೆದುಕೊಂಡಿದ್ದಾರೆ. ಒಮ್ಮೆ ಕಣ್ಣಿನ ಪರೀಕ್ಷೆಗಾಗಿ ವೈದ್ಯರ ಬಳಿಗೆ ತೆರಳಿದ್ದೆ. ವೈದ್ಯರು ತನ್ನ ಕಣ್ಣನ್ನು ಪರೀಕ್ಷಿಸಿದ್ದ ನಂತರದ ಇತರ ಅಂಗಗಳನ್ನೂ ಪರೀಕ್ಷಿಸಿದ್ದಾರೆ. ಈ ವೇಳೆಯಲ್ಲಿ ನಾನು ತುಂಬಾ ಹೆದರಿದ್ದೆ. ಮನಗೆ ಹೋಗುವವರೆಗೂ ವೈದ್ಯರ ಮಾಡಿದ ಘಟನೆ ಅಸಹ್ಯವನ್ನು ಮೂಡಿಸಿತ್ತು.

ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಾನು ಒಬ್ಬಂಟಿಯಾಗಿ ಘಟನೆಯನ್ನು ನೆನೆದು ಕಣ್ಣೀರು ಸುರಿಸುತ್ತಿದೆ. ಆದರೆ ತಾಯಿಯ ಬಳಿಯಲ್ಲಿ ನನ್ನ ಘಟನೆಯನ್ನ ಹೇಳಲು ಭಯ ಪಡುತ್ತಿದ್ದೆ. ಒಂದೊಮ್ಮೆ ಈ ವಿಚಾರವನ್ನು ಹೇಳಿದ್ರೆ ನನ್ನನ್ನು ಪ್ರಶ್ನಿಸುತ್ತಾರೆ ಅನ್ನೋ ಭಯ ನನ್ನನ್ನು ಕಾಡುತ್ತಿತ್ತು. ಕೇವಲ ಓರ್ವ ವೈದ್ಯರು ಮಾತ್ರವಲ್ಲ, ನನಗೆ ವೈದ್ಯರ ಬಳಿ ಅನೇಕ ಬಾರಿ ಇಂತಹ ಘಟನೆ ಸಂಭವಿಸಿದೆ ಎಂದಿದ್ದಾರೆ.

ವೈದ್ಯರು ಮಾತ್ರವಲ್ಲ ಟೈಲರ್‌ಗಳ ಬಳಿಯಲ್ಲಿಯೂ ಇಂತಹ ಕೆಟ್ಟ ಅನುಭವ ನನಗಾಗಿದೆ. ನಾನು ಸುಂದರವಾಗಿ ಇರುವುದನ್ನು ಹಲವು ಬಾರಿ ಟೈಲರ್ ದುರುಪಯೋಗ ಪಡಿಸಿಕೊಂಡಿ ದ್ದಾರೆ. ತನ್ನ ಅಳತೆಯನ್ನು ತೆಗೆದುಕೊಳ್ಳುವ ವೇಳೆಯಲ್ಲಿ ಕಹಿ ಘಟನೆಯನ್ನು ಅನುಭವಿಸಿದ್ದಾರೆ. ಆದರೆ ಈ ವಿಚಾರವನ್ನೂ ಕೂಡ ತಾನು ತಾಯಿಯಿಂದ ಮುಚ್ಚಿಟ್ಟಿದ್ದೆ. ಆದರೆ ನಾನು ಅವರ ಬಳಿಗೆ ಹೋಗುವುದಿಲ್ಲ ಎಂದರೆ ತಾಯಿ ತನ್ನನ್ನು ಪ್ರಶ್ನಿಸುತ್ತಾರೆ. ಈ ವೇಳೆಯಲ್ಲಿ ನಾನು ಈ ವಿಚಾರವನ್ನು ತಾಯಿಯ ಬಳಿಯಲ್ಲಿ ಹೇಳಬೇಕಾಗಿತ್ತು. ಇದೇ ಕಾರಣಕ್ಕೆ ತಾನು ತನ್ನಲ್ಲಿಯೇ ನೋವನ್ನು ಮುಚ್ಚಿಟ್ಟುಕೊಂಡಿದ್ದೇನೆ ಎಂದು ಅವರು ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

ಖ್ಯಾತ ನಟಿ ನೀನಾ ಗುಪ್ತಾ ಅವರ ಆತ್ಮಚರಿತ್ರೆ ‘ಸಚ್ ಕಹುನ್ ತೋ’ ಅನ್ನು ಕರೀನಾ ಕಪೂರ್ ಖಾನ್ ಜೂನ್ 14 ರಂದು ಬಿಡುಗಡೆ ಮಾಡಿದ್ದರು. ಆತ್ಮಕಥೆಯಲ್ಲಿ ತನ್ನ ಸಿನಿಮಾದ ಜೀವನದ ಎಲ್ಲಾ ವಿಚಾರಗಳನ್ನೂ ನೀನಾ ಗುಪ್ತ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್
ಇದನ್ನೂ ಓದಿ : ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್
( I was molested at my young age by doctor and tailor : Famous Indian Actress Neena Gupta)