ಮೇಷರಾಶಿ
(Horoscope) ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡಿಸುವಂತಹ ಕೆಲಸಗಳನ್ನು ಮಾಡಲು ಅದ್ಭುತ ದಿನ. ಇಂದು, ಸಂಬಂಧಿಕರು ನೀಡಬೇಕಾಗಿದ್ದ ಹಣವನ್ನು ಹಿಂದಿರುಗಿಸಲಿದ್ದಾರೆ. ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ, ನೀವು ಕೆಲಸದಲ್ಲಿ ಹೆಚ್ಚು ಉತ್ಸಾಹ ತೋರಿದರೆ ಉದ್ವೇಗ ಹೆಚ್ಚಾಗುತ್ತದೆ , ಯಾವುದೇ ಕಾರ್ಯವನ್ನು ಮಾಡುವ ಮುನ್ನ ಯೋಚಿಸಿ, ಇಂದು ನಿಮ್ಮ ಜೀವನವು ಅದ್ಬುತವಾಗಿರಲಿದೆ.
ವೃಷಭರಾಶಿ
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಕುಟುಂಬ ಸದಸ್ಯರು ಅಸಮಾಧಾನಗೊಳ್ಳಲಿದ್ದಾರೆ, ಬುದ್ದಿವಂತಿಕೆಯಿಂದ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸಿ, ಹೆತ್ತವರ ಬಗ್ಗೆ ಕಾಳಜಿಯನ್ನು ವಹಿಸಿ, ಹಿರಿಯರನ್ನು ನೀವು ಲಘುವಾಗಿ ಪರಿಗಣಿಸಬೇಡಿ, ವೈವಾಹಿಕ ಜೀವನವು ಜಗಳದಿಂದ ಕೂಡಿರಲಿದೆ.
ಮಿಥುನರಾಶಿ
ನಿಮ್ಮ ಆಕರ್ಷಕ ನಡವಳಿಕೆಯು ಗಮನ ಸೆಳೆಯುತ್ತದೆ. ಮನೆಯ ಅವಶ್ಯಕತೆಗೆ ಅನುಗುಣವಾಗಿ, ನೀವು ನಿಮ್ಮ ಸಂಗಾತಿಯೊಂದಿಗೆ ಕೆಲವು ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಹೋಗಬಹುದು, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸ್ವಲ್ಪ ಬಿಗಿಗೊಳಿಸುತ್ತದೆ. ಮಕ್ಕಳು ತಮ್ಮ ಸಾಧನೆಗಳಿಂದ ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತಾರೆ. ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನವಾಗಿದೆ.
ಕರ್ಕಾಟಕರಾಶಿ
ನಿಮ್ಮನ್ನು ಕೆಲವು ಗಂಭೀರತೆಯ ಸಮಸ್ಯೆಗಳಿಗೆ ಸಿಲುಕಿಸಬಹುದು, ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಸಾಲಗಾರರು ನಿಮ್ಮನ್ನು ಭೇಟಿಯಾಗಬಹುದು, ಸಾಲ ಮರುಪಾವತಿಯ ಕಿರಿಕಿರಿ ಹೆಚ್ಚಲಿದೆ, ಆರ್ಥಿಕ ಸಂಕಷ್ಟ ಎದುರಾಗಲಿದೆ, ಸಾಲ ಮಾಡುವುದನ್ನು ತಪ್ಪಿಸಿ, ಹಿರಿಯ ಸಲಹೆಯನ್ನು ಆಲಿಸಿ, ಪ್ರಿಯತಮೆ ಇಂದು ಉಡುಗೊರೆಗಳ ಜೊತೆಗೆ ಸ್ವಲ್ಪ ಸಮಯವನ್ನು ನಿರೀಕ್ಷಿಸಬಹುದು. ಪ್ರಮುಖ ಜನರೊಂದಿಗೆ ಸಂವಹನ ನಡೆಸುವಾಗ ಎಚ್ಚರಿಕೆಯನ್ನು ವಹಿಸಿ.
ಸಿಂಹರಾಶಿ
ವಿದೇಶಗಳಲ್ಲಿ ಹೂಡಿಕೆ ಮಾಡಿದ್ದರೆ ಇಂದು ಅಧಿಕ ಲಾಭವನ್ನು ಪಡೆಯುತ್ತೀರಿ, ಆಸ್ತಿ ವಿಚಾರದಲ್ಲಿ ಅಧಿಕ ಲಾಭ ದೊರೆಯಲಿದೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶ್ರಾಂತಿಯನ್ನು ಪಡೆಯಿರಿ, ಪ್ರೇಮಿ ನಿಮ್ಮ ಅಭ್ಯಾಸವನ್ನು ಕೆಟ್ಟದಾಗಿ ಭಾವಿಸಬಹುದು, ನೀವು ಮಾಡದ ಕೆಲಸವನ್ನು ಇತರರಿಗೆ ಮಾಡುವಂತೆ ಒತ್ತಡ ಹೇರಬೇಡಿ, ಹಳೆಯ ಸಂಬಂಧಗಳು ಪುನರುಜ್ಜೀವನವನ್ನು ಪಡೆಯಲಿದೆ, ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ.
ಇದನ್ನೂ ಓದಿ : ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ಧಿ : ನವೆಂಬರ್ 15 ರಿಂದ 2 ತಿಂಗಳು ತೆರೆಯಲಿದೆ ಶಬರಿಮಲೆ
ಕನ್ಯಾರಾಶಿ
ಸಂಪೂರ್ಣವಾಗಿ ಆನಂದವನ್ನು ಅನುಭವಿಸಲಿದ್ದೀರಿ, ಕುಟುಂಬದ ಸದಸ್ಯರನ್ನು ಸಭೆಗೆ ಕರೆದುಕೊಂಡು ಹೋಗಬಹುದು, ಅಲ್ಲದೇ ಕುಟುಂಬಸ್ಥರಿಗಾಗಿ ಹಣವನ್ನು ವ್ಯಯಿಸಬಹುದು, ಸ್ನೇಹಿತರೊಂದಿಗೆ ಬಾಂಧವ್ಯ ಹೊಂದಲು ಬಯಸುತ್ತೀರಿ, ರೇಮಿಗಳಿಗೆ ಇಷ್ಟವಾಗದ ಬಟ್ಟೆಯನ್ನು ಧರಿಸಬೇಡಿ, ಕೆಲಸದಲ್ಲಿ ಕ್ರಿಯಾತ್ಮಕ ಮತ್ತು ಪ್ರಗತಿಪರ ಬದಲಾವಣೆಗಳನ್ನು ಮಾಡಲು ಸಹೋದ್ಯೋಗಿಗಳು ನಿಮ್ಮನ್ನು ಬೆಂಬಲಿಸಲಿದ್ದಾರೆ. ಹಳೆಯ ನೆನಪುಗಳು ನಿಮ್ಮ ಕಾಡಲಿದೆ.
ತುಲಾರಾಶಿ
ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ, ದೇಹದ ಮೇಲೆ ಒತ್ತಡ ಉಂಟು ಮಾಡುವ ಯಾವುದೇ ದೈಹಿಕ ಪರಿಶ್ರಮವನ್ನು ಮಾಡಬೇಡಿ, ನೀವಿಂದು ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಿ, ದೀರ್ಘಾವಧಿಯಿಂದ ಬಾಕಿ ಉಳಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಸಾಮಾಜಿಕ ಸಭೆ ಸಮಾರಂಭಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ, ವ್ಯವಹಾರದಲ್ಲಿ ಚೇತರಿಕೆ ಕಂಡು ಬರಲಿದೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.
ವೃಶ್ಚಿಕರಾಶಿ
ನಿಮ್ಮ ಆರೋಗ್ಯವನ್ನು ಸುಧಾರಿಸಲು ಪ್ರುತ್ನಿಸಿ, ಹಣದ ಹರಿವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ, ಕುಟುಂಬದ ಸದಸ್ಯರು, ಸ್ನೇಹಿತರನ್ನು ಭೇಟಿಯಾಗುವಿರಿ, ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ, ದುಶ್ಚಟಗಳಿಂದ ದೂರವಿರಿ, ಸಮಯವನ್ನು ವ್ಯರ್ಥ ಮಾಡಬೇಡಿ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ದೂರದ ಊರುಗಳ ಪ್ರಯಾಣ ನಿಮಗೆ ಲಾಭವನ್ನು ತರಲಿದೆ.
ಇದನ್ನೂ ಓದಿ : ಮನೆ ಮೇಲೆ ಕಲ್ಲು ಬೀಳೋದು. ಕೈ ಮೇಲೆ ಬರೆ ಮೂಡೋದು ಭಾನಮತಿ ಕಾಟವಾ?
ಧನಸ್ಸುರಾಶಿ
ದ್ವೇಷದ ಭಾವನೆಯನ್ನು ದೂರ ಮಾಡಿಕೊಳ್ಳಿ, ನಿಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಿ, ದೀರ್ಘಕಾಲ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದವರು ಇಂದು ಹಣಕಾಸಿನ ವಿಚಾರದಲ್ಲಿ ಲಾಭವನ್ನು ಪಡೆಯುವಿರಿ, ಸ್ನೇಹಿತರು, ಸಂಬಂಧಿಕರು ನಿಮಗೆ ಸಹಕಾರವನ್ನು ನೀಡಲಿದ್ದಾರೆ, ಹೊಸ ವಿಚಾರಗಳತ್ತ ನಿಮ್ಮ ಮನಸ್ಸು ವಾಲಲಿದೆ. ಸಹೋದ್ಯೋಗಿಗಳ ಜೊತೆಗೆ ಕಿರಿ ಕಿರಿ ಉಂಟಾಗುವ ಸಾಧ್ಯತೆಯಿದೆ. ಸರಕಾರಿ ಕೆಲಸ ಕಾರ್ಯಗಳು ನಿರ್ವಿಗ್ನವಾಗಿ ನಡೆಯಲಿದೆ.
ಮಕರರಾಶಿ
ಒತ್ತಡ ಜೀವನದಿಂದ ದೂರವಿರಲು ಯತ್ನಿಸಿ, ದುಶ್ಚಟಗಳಿಂದ ದೂರವಿರಿ, ವ್ಯವಹಾರಗಳಿಂದ ಅಸಾಧಾರಣ ಲಾಭವನ್ನು ಪಡೆಯುವಿರಿ, ಮನರಂಜನಾ ಕಾರ್ಯಕ್ರಮಗಳಲ್ಲಿ ನೀವು ಭಾಗಿಯಾಗುವಿರಿ, ಸಂಗಾತಿಯೊಂದಿಗೆ ಹೊಂದಾಣಿಕೆ ಅತೀ ಅಗತ್ಯ, ಮನೆಗೆ ದೂರ ಬಂಧುಗಳು ಭೇಟಿ ನೀಡಲಿದ್ದಾರೆ, ಸಾರ್ವಜನಿಕವಾಗಿ ಮನ್ನಣೆ ದೊರೆಯಲಿದೆ, ವ್ಯವಹಾರಿಕವಾಗಿ ಲಾಭ ದೊರೆಯಲಿದೆ.
ಕುಂಭರಾಶಿ
ನೀವಿಂದು ಪ್ರಮುಖ ವ್ಯಕ್ತಿಯೋರ್ವರನ್ನು ಭೇಟಿ ಮಾಡುವಿರಿ, ಸಂಗಾತಿಯೊಂದಿಗೆ ಮದುವೆಯ ವಿಚಾರದ ಕುರಿತು ಚರ್ಚೆಯನ್ನು ನಡೆಸುವಿರಿ, ನಿಮ್ಮ ಪ್ರೇಮಕಥೆಯು ಹೊಸ ತಿರುವನ್ನು ಪಡೆದುಕೊಳ್ಳಲಿದೆ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ದಿಯನ್ನು ಪಡೆಯುವಿರಿ, ನೀವು ಇಂದು ಉಳಿಸುವ ಹಣವು ಭವಿಷ್ಯದಲ್ಲಿ ನಿಮ್ಮ ಲಾಭವನ್ನು ತಂದುಕೊಡಲಿದೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಯನ್ನು ನೀಡುವಿರಿ.
ಮೀನರಾಶಿ
ತೀವ್ರವಾದ ಕೆಲಸದ ವೇಳಾಪಟ್ಟಿಯು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಲಿದೆ, ಕಠಿಣ ಪರಿಶ್ರಮವು ನಿಮಗೆ ಕೆಲವು ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಮನೆ ನಿರ್ಮಾಣದ ಯೋಜನೆಗೆ ಚಾಲನೆಯನ್ನು ನೀಡುವಿರಿ, ಗೆಳತಿಯೊಂದಿಗೆ ಅಸಭ್ಯವಾಗಿ ವರ್ತಿಸಬೇಡಿ. ಹೊಸ ಯೋಜನೆಗಳು ಮತ್ತು ಉದ್ಯಮಗಳನ್ನು ಕಾರ್ಯಗತಗೊಳಿಸಲು ಉತ್ತಮ ದಿನ. ನಿಮ್ಮ ನ್ಯೂನತೆಗಳ ಮೇಲೆ ನೀವು ಕೆಲಸ ಮಾಡಬೇಕಾಗುತ್ತದೆ, ಇದಕ್ಕಾಗಿ ನೀವು ನಿಮಗಾಗಿ ಸಮಯವನ್ನು ಮೀಸಲಿಡಬೇಕು. ನಿಮ್ಮ ಸಂಗಾತಿಯ ಸುಳ್ಳಿನಿಂದ ನೀವಿಂದು ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ.
(Horoscope today astrological prediction for November 10)