Puneeth Rajkumar : ಮತ್ತೊಮ್ಮೆ ತೆರೆಗೆ ಬರಲಿ ಯುವರತ್ನ: ಪವರ್ ಸ್ಟಾರ್ ಅಭಿಮಾನಿಗಳ ಭಾವುಕ ಬೇಡಿಕೆ

ದೊಡ್ಮನೆ ಹುಡುಗ, ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಕಾಲಿಕ ನಿಧನ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದೆ. ಅಪ್ಪು ಕಳೆದುಕೊಂಡಿರುವ ಫ್ಯಾನ್ಸ್ ಪುನೀತ್ ಅಭಿನಯದ ಕೊನೆಯ ಚಿತ್ರ ಯುವರತ್ನ(yuvarathnaa) ಸಿನಿಮಾವನ್ನು ಮತ್ತೊಮ್ಮೆ ರಿಲೀಸ್ ಮಾಡುವಂತೆ ಮನವಿ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿನಯದ ಪ್ರತಿಯೊಂದು ಸಿನಿಮಾದಲ್ಲೂ ಸಮಾಜಕ್ಕೆ ಒಂದು ಸಂದೇಶವಿರುತ್ತಿತ್ತು. ಹೀಗಾಗಿ ಯುವಜನತೆ ಮಾತ್ರವಲ್ಲದೇ ಎಲ್ಲಾ ವರ್ಗದ ಜನರು ಪುನೀತ್ ಸಿನಿಮಾವನ್ನು ಪ್ರೀತಿಯಿಂದ, ಅಭಿಮಾನದಿಂದ ನೋಡುತ್ತಿದ್ದರು. ರಿಲೀಸ್ ಆದ ಪುನೀತ್ ಕೊನೆಯ ಚಿತ್ರ ಯುವರತ್ನದಲ್ಲೂ ಶಿಕ್ಷಣ ಸಂಸ್ಥೆಯನ್ನು ಉಳಿಸಲು ಅಪ್ಪು ಹೋರಾಟ ನಡೆಸುವ ಕಥೆಯಿತ್ತು. ಅದರಲ್ಲಿ ಅಪ್ಪು ಉಪನ್ಯಾಸ ಸೇರಿದಂತೆ ಹಲವು ಸಂಗತಿಗಳಿದ್ದವು. ಆದರೆ ಈ ಸಿನಿಮಾ ರಿಲೀಸ್ ಗೆ ಎರಡನೇ ಹಂತದ ಲಾಕ್ ಡೌನ್ ಅಡ್ಡಿಯಾಗಿತ್ತು.

ಯುವರತ್ನ ರಿಲೀಸ್ ಆಗಿದ್ದ ಒಂದೇ ವಾರಕ್ಕೆ ಕೊರೋನಾ ಉಲ್ಬಣಿಸಿತ್ತು. ಹೀಗಾಗಿ ಸರ್ಕಾರ ಮನೋರಂಜನಾ ಕ್ಷೇತ್ರದ ಮೇಲೆ ನಿರ್ಬಂಧ ಹೇರಿ ಥಿಯೇಟರ್ ಗಳಲ್ಲಿ ಪ್ರವೇಶಾವಕಾಶ ವನ್ನು ಕೇವಲ 50 ರಷ್ಟಕ್ಕೆ ಇಳಿಸಿತ್ತು. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ಸರ್ಕಾರಕ್ಕೆ ಮನವಿ ಮಾಡಿದ ಬಳಿಕ ಒಂದು ವಾರ ವೀಕ್ಷಣೆಗೆ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೂ ಕೊನೆಗೂ ಯುವರತ್ನವನ್ನು ರಾಜ್ಯದಾದ್ಯಂತ ವೀಕ್ಷಿಸಲು ಅಭಿಮಾನಿಗಳಿಗೆ ಕರೋನಾ ಅಡ್ಡಿಯಾಗಿತ್ತು.

ಹೀಗಾಗಿ ಈಗ ಮತ್ತೊಮ್ಮೆ ಸಿನಿಮಾವನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡುವಂತೆ ಪುನೀತ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಯುವರತ್ನ ಬಿಡುಗಡೆ ಆದಾಗ. ಸಾಕಷ್ಟು ತೊಂದರೆ ಆಗಿ ಚಿತ್ರ ಪ್ರದರ್ಶನ ರದ್ದಾಯಿತು. ಹೀಗಾಗಿ ಈಗಲಾದರೂ ಮತ್ತೊಮ್ಮೆ ಸಿನಿಮಾ ರಿಲೀಸ್ ಮಾಡಿ ನೋಡುವ ಭಾಗ್ಯ ಒದಗಿಸಿಕೊಡಿ ಎಂದು ಯುವರತ್ನ ನಿರ್ದೇಶಕ ಅನಂದ್ ರಾಮ್ ಹಾಗೂ ಹೊಂಬಾಳೆ ಫಿಲ್ಸಂಗೆ ಅಭಿಮಾನಿಗಳು‌ ಮನವಿ ಮಾಡಿದ್ದಾರೆ.

ಯುವರತ್ನ ಥಿಯೇಟರ್ ನಲ್ಲಿ ಬಿಡುಗಡೆಯಾದ 9 ನೇ ದಿನಕ್ಕೆ ಅಮೇಜಾನ್ ಪ್ರೈಂನಲ್ಲಿ ಪ್ರದರ್ಶನಗೊಂಡಿತ್ತು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.ಹೊಂಬಾಳೆ ಫಿಲ್ಸಂ ಮತ್ತು ನಿರ್ದೇಶಕ ಆನಂದ್ ರಾಮ್ ಅಭಿಮಾನಿಗಳ ಈ ಬೇಡಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಪುನೀತ್ ಹೊಂಬಾಳೆ ಫಿಲ್ಸ್ಂ ನ ದ್ವಿತ್ವ ಸೇರಿದಂತೆ ಒಟ್ಟು ಐದು ಸಿನಿಮಾದಲ್ಲಿ ನಟಿಸಬೇಕಿತ್ತು. ಅಲ್ಲದೇ ಪುನೀತ್ ನಟನೆಯ ಜೇಮ್ಸ್ ಸಿನಿಮಾ ಡಬ್ಬಿಂಗ್ ಹಂತದಲ್ಲಿದೆ.

ಇದನ್ನೂ ಓದಿ : ನಿಕ್ಕಿ ಮೈಮಾಟಕ್ಕೆ ಮನಸೋತ ಫ್ಯಾನ್ಸ್: ಸೋಷಿಯಲ್ ಮೀಡಿಯಾದಲ್ಲಿ ಕಾಂಚನಾ ಬೆಡಗಿ ಹವಾ

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್ ಪುಣ್ಯಸ್ಮರಣೆ : ಅಭಿಮಾನಿಗಳಿಗೆ ಊಟ ಬಡಿಸಿದ ದೊಡ್ಮನೆ ಕುಟುಂಬ

(Come to the screen again, Yuvarathnaa Power Star Puneeth Raj kumar fans demand)

Comments are closed.