ಸೋಮವಾರ, ಏಪ್ರಿಲ್ 28, 2025
HomeCinemaPuneeth Rajkumar : ಸಾವಿನಲ್ಲೂ ಪುನೀತ್ ಅಜರಾಮರ : ಇದಕ್ಕೆ ಸಾಕ್ಷಿ ಬೊಂಬೆ ಹೇಳುತೈತೆ ಸಾಂಗ್

Puneeth Rajkumar : ಸಾವಿನಲ್ಲೂ ಪುನೀತ್ ಅಜರಾಮರ : ಇದಕ್ಕೆ ಸಾಕ್ಷಿ ಬೊಂಬೆ ಹೇಳುತೈತೆ ಸಾಂಗ್

- Advertisement -

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ (Puneeth Rajkumar) ನಿಧನರಾಗಿ ತಿಂಗಳು ಸಮೀಪಿಸುತ್ತಿದ್ದರೂ ದುಃಖ ಕಡಿಮೆಯಾಗುತ್ತಿಲ್ಲ. ಈ ಮಧ್ಯೆ ರಾಜ್ ಕುಮಾರನಾಗಿ ( RAAJAKUMARA ) ಮೆರೆದಿದ್ದ ಪುನೀತ್ ಅಭಿನಯದ ಬೊಂಬೆ ಹೇಳುತೈತೆ ಸಾಂಗ್ ( BOMBE HELUTAITHE ) ಹೊಸ ದಾಖಲೆ ಬರೆಯುವ ಮೂಲಕ ಅಪ್ಪು ನೆನಪನ್ನು ಮತ್ತಷ್ಟು ಹಸಿರಾಗಿಸಿದೆ.

ಒಂದಿಷ್ಟು ಸಾಮಾಜಿಕ ಸೇವೆ, ಸಿನಿಮಾ, ಪ್ರೊಡಕ್ಷನ್ ಹೌಸ್ ಎಂದೆಲ್ಲ ಬ್ಯುಸಿಯಾಗಿದ್ದ ಪುನೀತ್ ರಾಜ್ ಕುಮಾರ್ ದಿಢೀರ್ ನಮ್ಮ ನಡುವಿನಿಂದ ಎದ್ದು ಹೋಗಿದ್ದಾರೆ. ಅವರ ನಿರ್ಗಮನ ಸೃಷ್ಟಿಸಿದ ಖಾಲಿತನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಜನರು ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರಾ ಎಂದು ನಮನ ಸಲ್ಲಿಸುತ್ತಿದ್ದಾರೆ.

ಹೀಗಾಗಿ ಪುನೀತ್ 42 ನೇ ಹುಟ್ಟುಹಬ್ಬದ ವೇಳೆ ರಿಲೀಸ್ ಆಗಿದ್ದ ಸಿನಿಮಾ ರಾಜಕುಮಾರದ ಈ ಹಾಡು ಹೊಸ ದಾಖಲೆ‌ ಬರೆದಿದೆ. ಜನಮೆಚ್ಚುಗೆ ಗಳಿಸಿರುವ ಈ ಹಾಡು ಈಗಾಗಲೇ 100 ಮಿಲಿಯನ್ ವೀಕ್ಷಣೆ ಪಡೆದಿದೆ. ಭಾರತದಲ್ಲಿ ಇಷ್ಟು ವೀಕ್ಷಣೆ ಪಡೆದ ಮೊದಲ ಹಾಡು ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ. 2017 ಮಾರ್ಚ್ 24 ರಂದು ರಿಲೀಸ್ ಆಗಿದ್ದ ಈ ಸಿನಿಮಾದಲ್ಲಿ ಸಿನಿಮಾ ಕತೆಗಿಂತ ಬೊಂಬೆ ಹೇಳುತೈತೆ ಹಾಡು ಹೆಚ್ಚು ಸದ್ಸು ಮಾಡಿತ್ತು.

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದ ಈ ಹಾಡನ್ನು ಜೀವತುಂಬಿ ಹಾಡಿದ್ದು ಸಿಂಗರ್ ವಿಜಯ್ ಪ್ರಕಾಶ್. ಬಾಕ್ಸಾಫಿಸ್ ಎಲ್ಲ ದಾಖಲೆ ಮುರಿದಿದ್ದ ರಾಜ್ ಕುಮಾರ್ ಸಿನಿಮಾ ಅಂದಾಜು 75 ಕೋಟಿಗೂ ಅಧಿಕ ಮೊತ್ತ ಗಳಿಸಿತ್ತು. ಸಿನಿಮಾ ಗೂ ಮುನ್ನ ರಿಲೀಸ್ ಆಗಿದ್ದ ಈ ಹಾಡಿನ ಮೇಕಿಂಗ್ ವಿಡಿಯೋಗು ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಪುನೀತ್ ನಿಧನದ ಬಳಿಕ ಈ ಹಾಡಿನ ವೀಕ್ಷಣೆ ನಾಗಾಲೋಟದಲ್ಲಿ ಸಾಗಿದ್ದು ಯೂಟ್ಯೂಬ್ ನಲ್ಲಿ ಸಿನಿಮಾ ಸಾಂಗ್ 100 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಪುನೀತ್ ನಮನದಂತಹ ಕಾರ್ಯಕ್ರಮ ಸೇರಿದಂತೆ ಎಲ್ಲೆಡೆ ಪುನೀತ್ ಸ್ಮರಿಸಲು ಇದೆ ಹಾಡನ್ನು ಬಳಸಲಾಗುತ್ತಿದೆ. ದೊಡ್ಮನೆಯ ಅಸಲಿ ರಾಜ್ ಕುಮಾರ್ ನಂತೆ ಬಾಳಿ ಬದುಕಿದ ಪುನೀತ್ ಅಗಲಿ ಹೋಗಿದ್ದರೂ ಕನ್ನಡಿಗರ ಹಾಗೂ ದೊಡ್ಮನೆ ಅಭಿಮಾನಿಗಳಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಹೀಗಾಗಿ ಬೊಂಬೆ ಹೇಳುತೈತೇ ( BOMBE HELUTAITHE ) ಸಾಂಗ್ ಮತ್ತಷ್ಟು ಜನಪ್ರಿಯವಾಗಲಿದೆ.

ಇದನ್ನೂ ಓದಿ :‌ Rashmika : ಶರ್ಟ್ ಬಿಚ್ಚೋದ್ಯಾಕೆ ಹುಡುಗರು ? ರಶ್ಮಿಕಾ ಪ್ರಶ್ನೆಗೆ ಬೆಚ್ಚಿದ ಪಡ್ಡೆ ಹೈಕಳು

ಇದನ್ನೂ ಓದಿ : Puneeth Eye : ಸಾವಿನಲ್ಲೂ ಸಾರ್ಥಕತೆ : 10 ಅಂಧರ ಬಾಳಿಗೆ ಬೆಳಕಾಗಲಿದೆ ಅಪ್ಪು ಕಣ್ಣು

( Puneeth Rajkumar Movie RAAJAKUMARA Cinema BOMBE HELUTAITHE Song, a hundred million views )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular