Pooja Hegde : ಮಾಲ್ಡೀವ್ಸ್ ಗೆ ಸೆಲೆಬ್ರೇಟಿಸ್ ದಂಡು: ಮತ್ತೇರಿಸೋ ಪೋಸ್ ನಲ್ಲಿ ಪೂಜಾ ಹೆಗ್ಡೆ

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಹಳೆ ನಟಿಯರಿಂದ ಯುವ ಪ್ರತಿಭೆಗಳ ತನಕ ಎಲ್ಲರ ವೆಕೇಶನ್ ಹಾಟ್ ಸ್ಪಾಟ್. ತಿಳಿನೀಲ ಆಕಾಶದಂತಹ ಸಮುದ್ರ ತೀರದಲ್ಲಿ ಚಿಲ್‌ಮಾಡೋ ಅವಕಾಶಕ್ಕಾಗಿ ಸೆಲೆಬ್ರೇಟಿಗಳು ಸದಾ ಮಾಲ್ಡೀವ್ಸ್ ಗೆ ದಂಡೆತ್ತಿ ಹೋದಂತೆ ಹೋಗುತ್ತಲೇ ಇರುತ್ತಾರೆ.

ಮೊನ್ನೆ ಮೊನ್ನೆ ಸಾರಾ ಅಲಿಖಾನ್ ಮಾಲ್ಡೀವ್ಸ್ ನಲ್ಲಿ ಮೈಮರೆತು ಎಂಜಾಯ್ ಮಾಡೋ ಪೋಟೋ ಶೇರ್ ಮಾಡಿದ್ದರು. ಅದರ ಬೆನ್ನಲ್ಲೇ ನಟಿ ಜಾಹ್ನವಿ‌ಕಪೂರ್ ತಂಗಿ ಖುಷಿ ಕಪೂರ್ ಜೊತೆ ಮಾಲ್ಡೀವ್ಸ್ ನ ಮರಳಿನಲ್ಲಿ ಮೈಚೆಲ್ಲಿ ಸಖತ್ ಪೋಸ್ ನೀಡಿದ್ದರು.

ಈಗ ಬಾಲಿವುಡ್ ನ ಗ್ರ್ಯಾಂಡ್ ನಟಿ ಖ್ಯಾತಿಯ ಪೂಜಾ ಹೆಗ್ಡೆ ಹಾಟ್ ಪೋಸ್ ನೀಡಿ ಮಾಲ್ಡೀವ್ಸ್ ನಲ್ಲಿ ವೆಕೇಶನ್ ಮೂಡ್ ನಲ್ಲಿದ್ದಾರೆ. ಆರೆಂಜ್ ಬಿಕನಿಯಲ್ಲಿ ತಮ್ಮ ಡ್ರಿಂಕ್ಸ್ ಜೊತೆ ಪೂಜಾ ಸಖತ್ ಪೋಸ್ ನಲ್ಲಿ ಪೋಟೋಶೂಟ್ ಗೂ ಜೈ ಎಂದಿದ್ದಾರೆ. ಲಾಕ್ ಡೌನ್ ಹಾಗೂ ಶೂಟ್ ಗಳಿಂದ ಬೇಸತ್ತಿದ್ದ ಪೂಜಾ ರಿಲ್ಯಾಕ್ಸ್ ಗಾಗಿ ಮಾಲ್ಡೀವ್ಸ್ ಗೆ ಹಾರಿದ್ದು ತಮ್ಮ ಎಂಜಾಯ್ ಮೆಂಟ್ ಪೋಟೋಗಳನ್ನು ಫ್ಯಾನ್ಸ್ ಗಾಗಿ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡ್ತಿದ್ದಾರೆ.

ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಡು ಬಿಟ್ಟಿರುವ ಪೂಜಾ ಹೆಗ್ಡೆ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಪೋಟೋ ವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಸಮಾನ್ಯ ಅನುಭವಕ್ಕಾಗಿ ಕಾಯುತ್ತಿರುವ ಸಾಮಾನ್ಯ ಹುಡುಗಿ ಎಂಬ ಟ್ಯಾಗ್ ಲೈನ್ ಜೊತೆ ಪೂಜಾ ಶೇರ್ ಮಾಡಿರೋ ಪೋಟೋಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು ಲಕ್ಷಾಂತರ ಲೈಕ್ಸ್ ಬಂದಿವೆ.

ಮೂಲತಃ ಕರ್ನಾಟಕದ ಉಡುಪಿ ಮೂಲದ ಬೆಡಗಿ ಪೂಜಾ ಹೆಗ್ಡೆ ಮಾಡೆಲಿಂಗ್ ನಲ್ಲೂ ಜನಪ್ರಿಯತೆ ಗಳಿಸಿದ್ದು ಬಳಿಕ 2012 ರಲ್ಲಿ ಬಾಲಿವುಡ್ ಪ್ರವೇಶಿಸಿದ್ದರು. ಸದ್ಯ ಹಿಂದಿ,ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಪೂಜಾ ಹೆಗ್ಡೆ ಮಿಂಚುತಿದ್ದಾರೆ. ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಪೂಜಾ ಹೆಗ್ಡೆ ಅಭಿಮಾನಿಗಳಿಗಾಗಿ ಹೊಸ ಹೊಸ ಪೋಟೋ,ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇನ್ ಸ್ಟಾಗ್ರಾಂನಲ್ಲಿ ಪೂಜಾ 15.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದು ಸದಾ ಹಾಟ್ ಹಾಟ್ ಪೋಟೋಗಳ ಮೂಲಕ ಪಡ್ಡೆಹೈಕಳ‌ ನಿದ್ದೆ ಕದಿಯುತ್ತಿದ್ದಾರೆ.

( Pooja Hegde at Hot pose in Maldives )

Comments are closed.