ಕರೋನಾ ಭೀತಿಗೆ ಇಡೀ ವಿಶ್ವವೇ ದಂಗಾಗಿದ್ದು, ಒಂದು ವಾರ ಕರ್ನಾಟಕ ಬಂದ್ ಸಹ ಆಗಿದ್ದು, ಮೀನಾ ಬಜಾರ್ ಸಿನಿಮಾ ಸಹ ಮುಂದಕ್ಕೆ ಹೋಗಿದೆ.

ಹೌದು ಚಂದನವನದ ಪೂರ್ತಿ ಕೆಲಸಗಳಿಗೆ 1 ವಾರ ಬ್ರೇಕ್ ಹಾಕಿದ್ದು, ಚಿತ್ರಮಂದಿರಗಳ ಪ್ರದರ್ಶನ ಸಹ ರದ್ದಾಗಿದೆ. ಈ ಸಿನಿಮಾ ಏಪ್ರಿಲ್ ನಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ.

ಸುನಿಲ್ ಕುಮಾರ್ ಸಿಂಗ್ ಆಕ್ಷನ್ ಕಟ್ ಹೇಳಿರೋ ಮೀನಾಬಜಾರ್ ಸಾಕಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದ್ದ ಸಿನಿಮಾ. ವಿಶೇಷ ಹಾಡು ಟ್ರೈಲರ್ ಗಳ ಮೂಲಕ ಪ್ರೇಕ್ಷಕರನ್ನ ತನ್ನತ್ತ ಸೆಳೆದಿದ್ದ ಈ ತಂಡಕ್ಕೆ ಈ ಕರೋನಾ ಭೀತಿಯಿಂದ ಮುಂದಕ್ಕೆ ಹೋಗಿರೋದು ಬೇಸರದ ಸಂಗತಿ. ನಾಗೇಂದ್ರ ಸಿಂಗ್ ಬಂಡವಾಳ ಹೂಡಿರೋ ಈ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಕಾಣಲಿದ್ದು, ದಿನಾಂಕ ನಿರ್ಧಾರ ಆದ್ಮೇಲೆ ಪ್ರಕಟಿಸಲಾಗುವುದು.

ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರೋ ಈ ಸಿನಿಮಾದಲ್ಲಿ ಅರವಿಂದ್, ರಾಜೇಶ್ ನಟರಂಗ್, ಮಧುಸೂದನ್, ಜೀವ, ಭಾಸ್ಕರ್, ಶ್ರೀಜಿತಾ ಘೋಶ್ ಅಭಿನಯಿಸಿದ್ದಾರೆ.

ಸಿನಿಮಾದಲ್ಲಿನ ಡೈರೆಕ್ಟರ್ ಪಾತ್ರವನ್ನು ಸ್ವತಃ ನಿರ್ದೇಶಕರೇ ಬಣ್ಣ ಹಚ್ಚಿದ್ದು ಚಿತ್ರದ ಮತ್ತೊಂದು ಪ್ಲಸ್. ಅಂದುಕೊಂಡಂತೆ ಆದ್ರೆ ಸಿನಿಮಾ ಏಪ್ರಿಲ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ.

ಟ್ರೇಲರ್ ಮೂಲಕ ನಿದ್ದೆಗೆಡಿಸಿ ಮೀನಾ ಬಜಾರ್…