ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 18-03-2020

ನಿತ್ಯಭವಿಷ್ಯ : 18-03-2020

- Advertisement -

ಮೇಷರಾಶಿ
ಆರ್ಥಿಕವಾಗಿ ಸಮಸ್ಯೆಗಳು ಪರಿಹಾರ, ಮಹಿಳೆಯರಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಸರಕಾರಿ ಅಧಿಕಾರಿ ವರ್ಗದವರಿಗೆ ವರ್ಗಾವಣೆಯ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ. ಸಾಂಸಾರಿಕವಾಗಿ ಆಗಾಗ ಸಂಚಾರ ಒದಗಿ ಬರಲಿದೆ. ವಿಲಾಸೀ ವಸ್ತುಗಳ ಖರೀದಿ ಇದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳಿಂದ ಬಾಧೆ, ಮಕ್ಕಳ ನಡವಳಿಕೆಯಿಂದ ಬೇಸರ.

ವೃಷಭರಾಶಿ
ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಕೃಷಿ ಕಾರ್ಯಗಳು ಆರ್ಥಿಕವಾಗಿ ಅಭಿವೃದ್ಧಿಯನ್ನು ನೀಡಲಿವೆ. ಮೋಜು ಮಸ್ತಿಗೆ ಹಣವ್ಯಯ, ಶೀತ, ರೋಗ ಬಾಧೆ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ, ನೆರೆಹೊರೆ ಶತ್ರುಗಳಿಂದ ಅಪವಾದ.ಮಕ್ಕಳಿಗೆ ಅಭ್ಯಾಸದಲ್ಲಿ ನಿರುತ್ಸಾಹ ತಂದೀತು. ಗೃಹ ನಿರ್ಮಾಣದಂತಹ ಕಾರ್ಯಗಳಿಗೆ ದುಡುಕದಿರಿ. ಪಾಲು ಬಂಡವಾಳದಲ್ಲಿ ಜಾಗ್ರತೆ ವಹಿಸುವುದು. ಸರ್ಕಾರಿ ಕೆಲಸದಲ್ಲಿ ಜಯ,

ಮಿಥುನರಾಶಿ
ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಸ್ತ್ರೀಯರಿಂದ ಲಾಭ, ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಹಿನ್ನಡೆ ತೋರಿ ಬರುವುದು. ವಿದೇಶ ಸಂಚಾರದಲ್ಲಿ ಲಾಭವನ್ನು ತಂದು ಕೊಡಲಿದೆ. ಸಾಂಸಾರಿಕವಾಗಿ ಹಿತಶತ್ರುಗಳು ನಿಮ್ಮ ಬಗ್ಗೆ ಹಗೆತನವನ್ನು ಸಾಧಿಸಲಿದ್ದಾರೆ. ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧ, ದುಶ್ಚಟಗಳಲ್ಲಿ ಆಸಕ್ತಿ.

ಕಟಕರಾಶಿ
ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ-ವಾಹನ ಯೋಗ, ಅವಿವಾಹಿತರಿಗೆ ಕಂಕಣಬಲ ಪ್ರಯತ್ನ ಅಗತ್ಯ. ಆಹಾರ ಪದಾರ್ಥಗಳು ಕೊಂಚ ಲಾಭ. ವಿದ್ಯಾರ್ಥಿಗಳು ಹಾಳು ವ್ಯಸನಕ್ಕೆ ಮನಸ್ಸು ಮಾಡದಂತೆ ಜಾಗ್ರತೆ ವಹಿಸಿರಿ. ಆತ್ಮ ಗೌರವಕ್ಕೆ ಚ್ಯುತಿ, ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹರಾಶಿ
ಉದ್ಯೋಗ ಬದಲಾವಣೆಯಿಂದ ಅನುಕೂಲ, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಉತ್ತಮ ಕಾಲವಾಗಿದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹವಿದ್ದು ಮುನ್ನಡೆಗೆ ಸಾಧಕವಾಗಲಿದೆ. ಕ್ರೀಡಾಳುಗಳಿಗೆ ಯಶಸ್ಸು ತೋರಿ ಬರುತ್ತದೆ. ನೆರೆಹೊರೆಯವರಿಂದ ಪ್ರಶಂಸೆ, ಉದ್ಯೋಗದಲ್ಲಿ ಉತ್ತಮ ಹೆಸರು, ಸ್ವಯಂಕೃತ ಅಪರಾಧಗಳಿಂದ ಅನಾರೋಗ್ಯ, ಶತ್ರುಗಳು ಅಧಿಕವಾಗುವರು, ಸಾಲ ಬಾಧೆ ಹೆಚ್ಚಾಗುವುದು. ದಿನಾಂತ್ಯ ಶುಭ

ಕನ್ಯಾರಾಶಿ
ಆಕಸ್ಮಿಕ ಧನಾಗಮನ, ಕಾರ್ಯರಂಗದಲ್ಲಿ ಅನಿರೀಕ್ಷಿತ ರೂಪದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವಾಹನ ಅಪಘಾತ, ಉದ್ಯೋಗ ಬಡ್ತಿಯಲ್ಲಿ ಹಿನ್ನಡೆ, ಪ್ರಯಾಣದಿಂದ ತೊಂದರೆ, ಆದಾಯ ಉತ್ತಮವಿದ್ದರೂ ನಾನಾ ರೀತಿಯ ಖರ್ಚುವೆಚ್ಚಗಳು ಕಿರಿಕಿರಿಯೆನಿಸಲಿವೆ. ವಿದ್ಯಾರ್ಥಿಗಳಿಗೆ ಉದಾಸೀನ ಕಾಡಲಿದೆ. ತಂದೆಯ ಬಂಧುಗಳಿಂದ ಸೋಲು, ರೋಗ ಬಾಧೆ, ಮಕ್ಕಳಿಗಾಗಿ ಖರ್ಚು, ಭಾವನೆಗಳಿಗೆ ಧಕ್ಕೆ.

ತುಲಾರಾಶಿ
ಕೋಪತಾಪ ಉಂಟು ಮಾಡಲಿದೆ.ದಾಂಪತ್ಯದಲ್ಲಿ ಸಂಶಯ, ನ್ಯಾಯಾಲಯದ ಕೆಲಸಕಾರ್ಯಗಳಿಗೆ ಹೆಚ್ಚಿನ ಪ್ರಯತ್ನ ಅಗತ್ಯ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರದಲ್ಲಿಯೂ ಉದ್ರೇಕ, ಮನಸ್ಸಿನಲ್ಲಿ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸ, ಲಾಭ ಪ್ರಮಾಣ ಕುಂಠಿತ, ಮಿತ್ರರೇ ಶತ್ರುಗಳಾಗುವರು, ಆತ್ಮೀಯರಿಂದ ನೋವು, ಅತಿಯಾದ ಭಾವನೆಯಿಂದ ಸಮಸ್ಯೆ.

ವೃಶ್ಚಿಕರಾಶಿ
ವೃತ್ತಿರಂಗದಲ್ಲಿ ಮೆಚ್ಚುಗೆ ಪಡೆಯಲಿದ್ದೀರಿ. ಸಂಗಾತಿಯೇ ಶತ್ರುವಾಗುವರು, ರಾಜಕೀಯವಾಗಿ, ರಾಜಕೀಯ ಧುರೀಣರಿಗೆ ಆಗಾಗ ಸಂದಿಗ್ಧದ ಪರಿಸ್ಥಿತಿಯು ಎದುರಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಖರ್ಚುವೆಚ್ಚ ತಂದೀತು. ಆತ್ಮೀಯರಿಂದಲೇ ನೋವು, ಮೋಜು ಮಸ್ತಿಗಾಗಿ ಖರ್ಚು, ಕೆಲಸಗಾರರ ಕೊರತೆ, ಐಷಾರಾಮಿ ಜೀವನದ ಕನಸು, ಉಷ್ಣಬಾಧೆಯಿಂದ ಅನಾರೋಗ್ಯ, ಉದ್ಯೋಗದಲ್ಲಿ ಜಿಗುಪ್ಸೆ, ಮಕ್ಕಳಿಂದ ಅನುಕೂಲ, ಸರ್ಕಾರಿ ಕಾರ್ಯ ನಿಮಿತ್ತ ಪ್ರಯಾಣ.

ಧನಸ್ಸುರಾಶಿ
ಗೃಹಬಳಕೆಯ ಸಾಮಗ್ರಿಗಳಿಗಾಗಿ ಧನವ್ಯಯ ತಂದೀತು. ಕಾರ್ಯರಂಗದಲ್ಲಿ ಇನ್ನೂ ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಮೋಸದ ಪ್ರೀತಿಗೆ ಬಲಿಯಾಗುವಿರಿ, ಹೆಣ್ಣು ಮಕ್ಕಳಿಂದ ಲಾಭ, ಸೊಸೆಯಿಂದ ಅನುಕೂಲ,ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿರಿಯರೊಡನೆ ಮನಸ್ತಾಪ ಬಂದೀತು. ತಂದೆಯಿಂದ ಆರ್ಥಿಕ ಅನುಕೂಲ, ಬಿ.ಪಿ, ಶುಗರ್ ಕಫ ಬಾಧೆ, ಶತ್ರುಗಳಿಂದ ತೊಂದರೆ, ಭಾವನೆಗಳಿಗೆ ಪೆಟ್ಟು, ಕಾನೂನು ಬಾಹಿರ ಚಟುವಟಿಕೆಗೆ ಮನಸ್ಸು.

ಮಕರರಾಶಿ
ಯಾವುದೇ ಕೆಲಸಕಾರ್ಯ ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ಸ್ಥಿರಾಸ್ತಿ – ವಾಹನ ಯೋಗ, ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಮಸ್ಯೆಗಳು ತೋರಿ ಬಂದಾವು.ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಪ್ರಯತ್ನಬಲದ ಅಗತ್ಯವಿದೆ. ಮಾತೃವಿನಿಂದ ಅನುಕೂಲ, ಭಾವನಾತ್ಮಕ ಚಿಂತನೆಗಳಿಂದ ಸೋಲು, ಮಕ್ಕಳಿಗಾಗಿ ಅಧಿಕ ಖರ್ಚು, ಪ್ರವಾಸ ಕೈಗೊಳ್ಳುವ ಮನಸ್ಸು, ಮೃಷ್ಟಾನ್ನ ಬೋಜನದ ಚಿಂತೆ.

ಕುಂಭರಾಶಿ
ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ. ಸ್ಥಿರಾಸ್ತಿ-ವಾಹನದ ವ್ಯವಹಾರದಲ್ಲಿ ಚಿಂತೆ, ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿರದು. ಪ್ರಯಾಣದಲ್ಲಿ ಕಾರ್ಯಾನುಕೂಲವಾದರೂ ಪ್ರಯಾಸವಿದೆ. ಕಾರ್ಯಕ್ಷೇತ್ರದಲ್ಲಿ ಸಾಮರ್ಥ್ಯ ಮೀರಿ ಕೆಲಸ ಮಾಡುವುದರಿಂದ ದೇಹಾಯಾಸಕ್ಕೆ ಕಾರಣವಾಗುತ್ತದೆ. ವ್ಯಾಪಾರ, ನರೆಹೊರೆ ಬಂಧುಗಳಿಂದ ಕಿರಿಕಿರಿ, ಸ್ತ್ರೀಯರಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳೆಯರಿಗೆ ಅದೃಷ್ಟ, ಪ್ರಯಾಣ-ಮಿತ್ರರಿಂದ ಅನುಕೂಲ.

ಮೀನರಾಶಿ
ಆರೋಗ್ಯಕ್ಕಾಗಿ ಅಧಿಕ ಖರ್ಚು, ಸಾಂಸಾರಿಕವಾಗಿ ಸಂಬಂಧಿಕರು ನಿಮ್ಮ ಬಗ್ಗೆ ಕೆಟ್ಟ ಮಾತನ್ನಾಡಲಿದ್ದಾರೆ. ಅನಿರೀಕ್ಷಿತವಾಗಿ ನಾನಾ ರೀತಿಯ ಖರ್ಚುವೆಚ್ಚಗಳಿದ್ದರೂ ಧನಾಗಮನಕ್ಕೆ ಕೊರತೆ ಇರದು. ಅನಿರೀಕ್ಷಿತ ರೂಪದಲ್ಲಿ ಅತಿಥಿಗಳ ಆಗಮನವಿದೆ. ಕುಟುಂಬದಲ್ಲಿ ವಾಗ್ವಾದ, ಅನಿರೀಕ್ಷಿತ ಪೆಟ್ಟು, ಗುಪ್ತ ವಿಚಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ಶತ್ರುಗಳ ಕಾಟ, ಕೆಲಸಗಾರರ ಕೊರತೆ ನಿವಾರಣೆ, ಇಲ್ಲ ಸಲ್ಲದ ಅಪವಾದ, ಅಪಪ್ರಚಾರ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular