ಈಗಂತೂ ಮೊಬೈಲ್ ಒಂದಿದ್ದರೆ ಸಾಕು ಮನೆಯಲ್ಲೇ ಕುಳಿತು ನೀವು ಯಾವ ಸ್ಥಳಕ್ಕೆ ತೆರಳಬೇಕೋ ಅಲ್ಲಿಗೆ ಕ್ಯಾಬ್ ಅಥವಾ ಆಟೋವನ್ನು ಬುಕ್ ಮಾಡಬಹುದು. ಇದಕ್ಕಾಗಿ ಒಂದು ಪ್ರತ್ಯೇಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀವು ಈ ಸೇವೆಯನ್ನು ಪಡೆಯಬಹುದಾಗಿತ್ತು. ಆದರೆ ಇದೀಗ ಊಬರ್ ಟೆಕ್ನಾಲಜಿ (UBER SERVICE ) ಹಾಗೂ ಮೆಟಾ ಪ್ಲಾಟ್ಫಾರಂ ಸಹಭಾಗಿತ್ವದಲ್ಲಿ ಹೊಸದೊಂದು ಸೇವೆಯು ಶೀಘ್ರದಲ್ಲಿಯೇ ಬಳಕೆದಾರರಿಗೆ ಸಿಗಲಿದೆ.
ಸ್ಮಾರ್ಟ್ ಫೋನ್ ಇದೆ ಅಂದರೆ ಸಾಕು ಅವರ ಬಳಿ ವಾಟ್ಸಾಪ್ ಅಪ್ಲಿಕೇಶನ್ ಇದ್ದೇ ಇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ದೇಶದಲ್ಲಿ ಅರ್ಧ ಶತಕೋಟಿಗೂ ಅಧಿಕ ಮಂದಿ ವಾಟ್ಸಾಪ್ ಬಳಕೆ ಮಾಡುತ್ತಾರಂತೆ. ಇವರಲ್ಲಿ ಊಬರ್ ಸೇವೆ ಇರುವ ಊರಿನ ನಿವಾಸಿಗಳು ವಾಟ್ಸಾಪ್ ಸೇವೆಯ ಮೂಲಕವೇ ಊಬರ್ ರೈಡ್ಬುಕ್ ಮಾಡಬಹುದಾಗಿದೆ.
ಹೌದು..! ಇಂತಹದ್ದೊಂದು ಹೊಸ ಸೇವೆಯನ್ನು ಆರಂಭಿಸಲು ಊಬರ್ ಹಾಗೂ ಮೆಟಾ ಕಂಪನಿಗಳು ಒಂದಾಗಿವೆ. ಕೆಲದಿನಗಳ ಹಿಂದಷ್ಟೇ ಜಿಯೋ ಮಾರ್ಟ್ ಹಾಗೂ ವಾಟ್ಸಾಪ್ ಒಟ್ಟಾಗಿ ಸೇವೆ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆಯೇ ಇದೀಗ ವಾಟ್ಸಾಪ್ ಹಾಗೂ ಊಬರ್ ಈ ಸೇವೆಯನ್ನು ನೀಡಲಿವೆ. ಪ್ರಾರಂಭಿಕ ಹಂತದಲ್ಲಿ ಈ ಸೇವೆಯು ಉತ್ತರ ಪ್ರದೇಶದ ಲಕ್ನೋದಲ್ಲಿ ಆರಂಭವಾಗಲಿದೆ. ಬಳಿಕ ದೇಶಾದ್ಯಂತ ಈ ಸೇವೆಯನ್ನು ವಿಸ್ತರಿಸೋದಾಗಿ ಊಬರ್ ಹೇಳಿದೆ.
ಇನ್ನು ಈ ಹೊಸ ಸೇವೆಯ ಸಂಬಂಧ ಮಾತನಾಡಿದ ಊಬರ್ನ ಬ್ಯುಸಿನೆಸ್ ಡೆವಲಪ್ಮೆಂಟ್ ಹಿರಿಯ ನಿರ್ದೇಶಕಿ ನಂದಿನಿ ಮಹೇಶ್ವರಿ, ಭಾರತೀಯರು ಅತ್ಯಂತ ಸರಳವಾಗಿ ಊಬರ್ ಸೇವೆಯ ಲಾಭವನ್ನು ಪಡೆಯಬೇಕು ಎಂಬುದು ನಮ್ಮ ಗುರಿಯಾಗಿದೆ. ಇದೇ ಕಾರಣಕ್ಕಾಗಿ ಜನರಿಗೆ ಅತ್ಯಂತ ಸುಲಭ ಎನಿಸುವ ಅಪ್ಲಿಕೇಶನ್ ಮೂಲಕವೇ ಈ ಸೇವೆ ನೀಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ : Today Petrol Price : ವಾಹನ ಸವಾರರಿಗೆ ಗುಡ್ನ್ಯೂಸ್ : ಪೆಟ್ರೋಲ್ ಬೆಲೆಯಲ್ಲಿ 8 ರೂ. ಇಳಿಕೆ
( Uber Service to allow users to book rides via WhatsApp in India )