Bhopal gas tragedy : 2022 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಯಶ್ ರಾಜ್ ಫಿಲ್ಮ್ಸ್ ನ ಮೊದಲ ಒಟಿಟಿ ಚಿತ್ರ ” ದಿ ರೈಲ್ವೆ ಮೆನ್”

ಯಶ್ ರಾಜ್ ಫಿಲ್ಮ್ಸ್ ( ವೈಆರ್‌ಎಫ್) ತಮ್ಮ ಮೊದಲ ಒಟಿಟಿ ಚಿತ್ರ ನಿರ್ಮಿಸಹೊರಟಿದ್ದು, ‘ದಿ ರೈಲ್ವೇ ಮೆನ್’ ಅನ್ನು ಘೋಷಿಸಿದೆ. ಆರ್ ಮಾಧವನ್, ದಿವ್ಯೇಂದು ಮತ್ತು ಬಾಬಿಲ್ ಖಾನ್ ಲೀಡ್ ನಲ್ಲಿ ನಟಿಸಿದ್ದಾರೆ. ಈ ಸರಣಿಯು 1984 ರ ಭೋಪಾಲ್ ಅನಿಲ ದುರಂತವನ್ನು (Bhopal gas tragedy) ಆಧರಿಸಿದೆ.

“ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಕೈಗಾರಿಕಾ ದುರಂತವಾದ 1984 ರ ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದ ಭೋಪಾಲ್ ನಿಲ್ದಾಣದ ರೈಲ್ವೆ ಕಾರ್ಮಿಕರಿಗೆ ಈ ಒಟಿಟಿ ಚಿತ್ರವು (OTT Bhopal) ನಾವು ಸಲ್ಲಿಸುವ ಗೌರವವಾಗಿದೆ’ ಎಂದು ವೈಆರ್‌ಎಫ್ ಟ್ವೀಟ್ ಮೂಲಕ ತಿಳಿಸಿದೆ.

ಚಿತ್ರ ನಿರ್ಮಾಪಕ ರಾಹುಲ್ ರಾವೈಲ್ (ಲವ್ ಸ್ಟೋರಿ, ಔರ್ ಪ್ಯಾರ್ ಹೋ ಗಯಾ) ಅವರ ಪುತ್ರ ಶಿವ ರಾವೈಲ್ ಚೊಚ್ಚಲ ಚಿತ್ರ ಇದಾಗಿದ್ದು, ಡಿಸೆಂಬರ್ 2, 2022 ರಿಂದ ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ. 1984 ಡಿಸೆಂಬರ್2 ರ ಭೋಪಾಲ್ ಅನಿಲ ದುರಂತ ಹಾಗೂ ಅಲ್ಲಿ ಮರಣ ಹೊಂದಿದ ಲಕ್ಷಾಂತರ ಜನ ರ ಕಥೆಯನ್ನು ಆಧರಿಸಿದೆ ಈ ಚಿತ್ರ.


ಚಿತ್ರದ ಕುರಿತು ಯಶ್ ರಾಜ್ ಫಿಲ್ಮ್ಸ್‌ನ ಅಕ್ಷಯ್ ವಿಧಾನಿ ಮಾತನಾಡಿ, “ಭೋಪಾಲ್ ಅನಿಲ ದುರಂತವು ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತವಾಗಿದೆ, ಇದು 37 ವರ್ಷಗಳ ಹಿಂದೆ ನಗರದಲ್ಲಿ ಸಂಭವಿಸಿದ ದುರಂತದ ನಂತರ ಹಲವಾರು ಜನರ ಮೇಲೆ ಪರಿಣಾಮ ಬೀರಿದೆ. ವೈಆರ್‌ಎಫ್ ನಲ್ಲಿ, ನಾವು ಪ್ರೇಕ್ಷಕರಿಗೆ ಅತ್ಯುತ್ತಮವಾದ ಮತ್ತು ಗಟ್ಟಿ ಕಥಾ ಹಂದರವುಳ್ಳ ಕಥೆಗಳನ್ನುತೆರೆಯ ಮೇಲೆ ಪ್ರದರ್ಶಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಈ ಚಿತ್ರ ಮೂಲಕ ಅಲ್ಲಿ ಮಡಿದ ಜನರಿಗ ನಾವು ಗೌರವ ಸಲ್ಲಿಸಲು ಬಯಸುತ್ತೇವೆ. ರೈಲ್ವೇ ಕಾರ್ಮಿಕರು ಆ ದಿನದಂದು ಸಾವಿರಾರು ಜೀವಗಳನ್ನು ಉಳಿಸಿದರೂ, ಯಾರಿಂದಲೂ ಈವರೆಗೆ ಅವರಿಗೆ ಗೌರವ ಸಲ್ಲಿಸಿಲ್ಲ. ಪ್ರಪಂಚದಾದ್ಯಂತದ ಜನರಿಗೆ ಇನ್ನೂ ಇದರ ಕುರಿತು ತಿಳಿದಿಲ್ಲ. ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actress Amulya: ಶುಭಸುದ್ದಿ ನೀಡಿದ ನಟಿ ಅಮೂಲ್ಯ

(YRF series The Railway Men based on Bhopal gas tragedy R Madhavan Kay Kay Menon Divyendu Babil Khan acts)

Comments are closed.