ಮಾಡೆಲಿಂಗ್ ಕ್ಷೇತ್ರ ಅನ್ನೋದು ಸಮುದ್ರದಂತೆ ಅಲ್ಲಿ ಸದಾ ನದಿಗಳಂತ ಹೊಸ ಪ್ರತಿಭೆಗಳಿಗೆ ಅವಕಾಶವಿರುತ್ತೆ. ಈಗ ಅಂತಹದೊಂದು ಪ್ರತಿಭೆ ಮಾಡೆಲಿಂಗ್ ಲೋಕದಲ್ಲಿ ಕಾಲಿಡುವ ಮೂಲಕ ಸಂಚಲನ ಮೂಡಿಸಿದೆ. ಆ ಪ್ರತಿಭೆ ಮತ್ಯಾರು ಅಲ್ಲ ಕ್ರಿಕೆಟ್ ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ( Sachin Tendulkar) ಪುತ್ರಿ ಸಾರಾ (Sara Tendulkar) ತೆಂಡೂಲ್ಕರ್.

ಹೌದು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಯಾವ ನಟಿಮಣಿಗೂ ಕಡಿಮೆ ಇಲ್ಲದ ಸೌಂದರ್ಯವತಿ. ಈಗಾಗಲೇ ಹಲವು ಭಾರಿ ಸಾರಾ ತೆಂಡೂಲ್ಕರ್ ಬಾಲಿವುಡ್ ಪ್ರವೇಶಿಸುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಅದ್ಯಾವುದು ಸತ್ಯವಾಗಿರಲಿಲ್ಲ. ಈಗ ಸಾರಾ ತೆಂಡೂಲ್ಕರ್ ಅಧಿಕೃತವಾಗಿ ಮಾಡೆಲಿಂಗ್ ಗೆ ಎಂಟ್ರಿಕೊಟ್ಟಿದ್ದು ಸೋಷಿಯಲ್ ಮೀಡಿಯಾ ದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.

ಈ ಹಿಂದೆ ಸಾರಾ ತೆಂಡೂಲ್ಕರ್ ಬಾಲಿವುಡ್ ಗೆ ಎಂಟ್ರಿಕೊಡ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಮಾತ್ರವಲ್ಲ ಸಿನಿಮಾವೊಂದರಲ್ಲಿ ರಣ್ಬೀರ್ ಕಪೂರ್ ಗೆ ಸಚಿನ್ ಪುತ್ರಿ ನಾಯಕಿ ಅನ್ನೋ ಮಾತು ಕೇಳಿಬಂದಿತ್ತು. ಆದರೂ ಸಾರಾ ಮಾತ್ರ ಬಣ್ಣದ ಲೋಕಕ್ಕೆ ಎಂಟ್ರಿಕೊಡುವ ಮನಸ್ಸು ಮಾತ್ರ ಮಾಡಲಿಲ್ಲ. ಈಗ ಮಾಡೆಲಿಂಗ್‌ಮೂಲಕ ಫ್ಯಾಶನ್ ಲೋಕಕ್ಕೆ ಸಾರಾ ಎಂಟ್ರಿಕೊಟ್ಟಿದ್ದಾರೆ.ಇಂಗ್ಲೇಂಡ್ ನಲ್ಲಿ ಪದವಿ ಪಡೆದಿರುವ ಸಾರಾ, ಪ್ರಖ್ಯಾತ ಉಡುಪಿನ ಬ್ರ್ಯಾಂಡ್ ಎಜಿಯೋ ನ ಹೊಸ ವಿನ್ಯಾಸದ ಉಡುಪುಗಳಿಗೆ ರೂಪದರ್ಶಿಯಾಗಿದ್ದಾರೆ.

ಸಾರಾ ತೆಂಡೂಲ್ಕರ್ ಗೆ ನಟಿ ಬನಿತಾ ಸಂಧು ಹಾಗೂ ಟಾನಿಯಾ ಶ್ರಾಫ್ ಕೂಡ ಸಾಥ್ ನೀಡಿದ್ದಾರೆ. ಸಾರಾ ತಮ್ಮಚೊಚ್ಚಲ ಮಾಡೆಲಿಂಗ್ ವಿಡಿಯೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು ಅಪಾರ ಅಭಿಮಾನಿಗಳು ಇದಕ್ಕೆ ಲೈಕ್ಸ್ ಒತ್ತಿದ್ದಾರೆ.

ಜನಪ್ರಿಯ ಬ್ರ್ಯಾಂಡ್ ಜೊತೆ ಕೆರಿಯರ್ ಆರಂಭಿಸಿದ ಸಾರಾಗೆ ಸದ್ಯದಲ್ಲೇ ಮತ್ತಷ್ಟುಮಾಡೆಲಿಂಗ್ ಅವಕಾಶಗಳು ಒದಗಿ ಬಂದರೂ ಅಚ್ಚರಿಯೇನಿಲ್ಲ. ಮಾತ್ರವಲ್ಲ ಹಲವು ನಟಿಯರು ಮಾಡೆಲಿಂಗ್ ನಿಂದಲೇ ತಮ್ಮ ವೃತ್ತಿ ಆರಂಭಿಸಿದ್ದಾರೆ. ಹೀಗಾಗಿ ಸಾರಾ ಕೂಡ ಇನ್ಮೇಲೆ ಬಾಲಿವುಡ್ ಗೆ ಕಾಲಿಟ್ಟರು ಅಚ್ಚರಿ ಪಡುವ ಅಗತ್ಯವಿಲ್ಲ.

ಅಚ್ಚ ಬಿಳುಪಿನ ಮೈಸಿರಿ ಹಾಗೂ ಮುಗ್ಧ ಮುಖದ ಚೆಲುವೆ ಸಾರಾ ತೆಂಡೂಲ್ಕರ್ ಚಿಕ್ಕಂದಿನಿಂದಲೂ ಕ್ಯಾಮರಾಗಳ ಪ್ರಮುಖ ಆಕರ್ಷಣೆಯಾಗಿದ್ದರು. ಈಗಲೂ ಸಚಿನ್ ಪುತ್ರಿಯ ಮಾಡೆಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಸಚಿನ್ ಅಭಿಮಾನಿಗಳು ಕೂಡ ಸಾರಾ ಪ್ರಯತ್ನಕ್ಕೆ ಶುಭಕೋರಿದ್ದಾರೆ.
ಇದನ್ನೂ ಓದಿ : ನಟಿಮಣಿ ಪಾಯಲ್ ರಜಪೂತ್ ಪೋಟೋಶೂಟ್ ಗೆ ಹೆತ್ತಮ್ಮನೇ ಗರಂ
ಇದನ್ನೂ ಓದಿ : ಮತ್ತೆ ಮತ್ತೇರಿಸಿದ ಮಾದಕ ಚೆಲುವೆ : ಶ್ವೇತವಸ್ತ್ರದಲ್ಲಿ ಸನ್ನಿ ಸ್ಟನ್ನಿಂಗ್ ಲುಕ್
ಇದನ್ನೂ ಓದಿ : ಸಂತೂರ್ ಮಮ್ಮಿಯ ಮತ್ತೆರಿಸೋ ಅವತಾರ : ಇಲ್ಲಿದೆ ಆಕಾಂಕ್ಷಾ ಅಂದದ ಅನಾವರಣ
(Sachin Tendulkar Daughter Sara Tendulkar Made Her Modelling Debut video viral)