CDS Bipin Rawat chopper crash :‘ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಸಿಡಿಎಸ್​ ಜನರಲ್​​ ಬಿಪಿನ್​ ರಾವತ್(CDS Bipin Rawat chopper crash)​​ ಸೇರಿದಂತೆ 13 ಜನರನ್ನು ಹೊತ್ತು ಸಾಗುತ್ತಿದ್ದ ಸೇನಾ ಹೆಲಿಕಾಪ್ಟರ್​​ ತಮಿಳುನಾಡಿನ ಕಟ್ಟೇರಿ ಪಾರ್ಕ್​ ಬಳಿಕ ನಂಜಪ್ಪಂಚತಿರಂ ಬಳಿ ದುರಂತಕ್ಕೀಡಾಗಿದೆ. ಈ ದುರಂತದಲ್ಲಿ ಬಿಪಿನ್​ ರಾವತ್​​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ದುರಂತ ನಡೆದ ಕ್ಷಣವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಹೆಲಿಕಾಪ್ಟರ್​ ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಜೋರಾದ ಸದ್ದೊಂದು ಕೇಳಿದೆ. ಹೆಲಿಕಾಪ್ಟರ್​ ಹೊತ್ತು ಉರಿದಿದ್ದು ಹೆಲಿಕಾಪ್ಟರ್​ನಲ್ಲಿದ್ದ ಮೂರ್ನಾಲ್ಕು ಜನರು ಹೊರಗೆ ಬಿದ್ದಿದ್ದಾರೆ ಎಂದು ವಿವರಿಸಿದ್ದಾರೆ.

ಹೆಲಿಕಾಪ್ಟರ್​ ಒಂದು ಆಕಾಶದಿಂದ ಭೂಮಿಯತ್ತ ಬರುತ್ತಲೇ ಇತ್ತು. ಕಿವಿಗಡಕ್ಕಿಚ್ಚುವಂತ ಸದ್ದು ಕೇಳಿತ್ತು. ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿದ್ದು ಕೂಡಲೇ ಹೊತ್ತಿ ಉರಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು. ಹೆಲಿಕಾಪ್ಟರ್​ ನೆಲಕ್ಕೆ ಬೀಳುವ ಮುನ್ನ ದೈತ್ಯ ಮರಕ್ಕೆ ಡಿಕ್ಕಿ ಹೊಡೆದಿತ್ತು ಎಂದು ಅವರು ವಿವರಿಸಿದ್ದಾರೆ.

ಪ್ರತ್ಯಕ್ಷದರ್ಶಿ ಕೃಷ್ಣಮೂರ್ತಿ ಘಟನೆಯ ಸಂಪೂರ್ಣ ದೃಶ್ಯವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಕೃಷ್ಣಮೂರ್ತಿ ಮನೆಯು ದುರಂತ ನಡೆದ ಸ್ಥಳದಿಂದ ಕೇವಲ 100 ಮೀಟರ್​ ದೂರದಲ್ಲಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಎಂಐ ಸರಣಿಯ ಸೇನಾ ವಿಮಾನವು ಮೊದಲು ಮರಕ್ಕೆ ಅಪ್ಪಳಿಸಿ ಬಳಿಕ ನೆಲಕ್ಕೆ ಬಿದ್ದಿದೆ. ಮೆಟ್ಟುಪಾಳಯಂ ಹಾಗೂ ಕೂಕನೂರ್​ ನಡುವಿನ ಘಾಟ್​ ರಸ್ತೆಯಲ್ಲಿ ಈ ದುರಂತ ಸಂಭವಿಸಿತ್ತು. ಹೊಗೆ ಜೋರಾಗಿ ಆವರಿಸುತ್ತಿದ್ದಂತೆಯೇ ನಾನು ಸ್ಥಳದಿಂದ ಓಡಲು ಆರಂಭಿಸಿದೆ. ಕೆಲವೇ ನಿಮಿಷಗಳಲ್ಲಿ ನನ್ನ ಮನೆಗಿಂತಲೂ ಎತ್ತರದಲ್ಲಿ ಬೆಂಕಿ ಹೊತ್ತಿ ಉರಿದಿತ್ತು ಎಂದು ಕೃಷ್ಣಸ್ವಾಮಿ ವಿವರಿಸಿದ್ರು.

ಇದೇ ಪ್ರದೇಶದಲ್ಲಿ ವಾಸಿಸುವ ಬಾಲಕ ಕುಮಾರ್, ಕೂಡಲೇ ಪೊಲೀಸ್​​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಹೆಲಿಕಾಪ್ಟರ್​ನ್ನು ನೋಡುತ್ತಿದ್ದಂತೆಯೇ ಆತ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಕರೆ ಮಾಡಿದ್ದನು. ಇದಾದ ಕೂಡಲೇ ಬೆಂಕಿಯಿಂದ ಆವೃತವಾದ ಅನೇಕರು ಹೆಲಿಕಾಪ್ಟರ್​ನಿಂದ ಹೊರಬಿದ್ದಿದ್ದಾರೆ. ಇದನ್ನೆಲ್ಲ ನೋಡಿ ನನಗೆ ಭಯವಾಗಿತ್ತು. ಹೀಗಾಗಿ ನಾನು ಘಟನಾ ಸ್ಥಳದಿಂದ ದೂರಕ್ಕೆ ಓಡಿ ಬಂದೆ ಎಂದು ಕೃಷ್ಣ ಮೂರ್ತಿ ಹೇಳಿದ್ದಾರೆ.

ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ಐವರು ಸೂಳೂರಿನವರು ಹುತಾತ್ಮರಾಗಿದ್ದಾರೆ.

ಇದನ್ನು ಓದಿ: IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Bipin Rawat Biography: ಭಾರತದ ಹೆಮ್ಮೆಯ ಬಿಪಿನ್ ರಾವತ್ ಕಾಂಗೋ ಗಣರಾಜ್ಯ ಸೈನ್ಯದ ನಾಯಕತ್ವವನ್ನೂ ವಹಿಸಿದ್ದರು!

ಇದನ್ನೂ ಓದಿ :Bipin Rawat : ಸೇನಾ ಹೆಲಿಕಾಫ್ಟರ್‌ ದುರಂತ : ಬಿಪಿನ್‌ ರಾವತ್‌, ಮಧುಲಿಕಾ ರಾವತ್‌ ಸೇರಿ 13 ಮಂದಿ ದುರ್ಮರಣ

ಇದನ್ನೂ ಓದಿ : Farmer Complaint Against Cow : ಹಾಲು ಕೊಡದೇ ಸತಾಯಿಸುವ ಹಸುವನ್ನು ಠಾಣೆಗೆ ಕರೆಸಿ: ಪೊಲೀಸರ ಮೊರೆ ಹೋದ ಶಿವಮೊಗ್ಗದ ರೈತ

‘I saw people burning and falling’: Resident who saw CDS Bipin Rawat chopper crash

Comments are closed.