ಸಿಡಿಎಸ್ ಜನರಲ್ ಬಿಪಿನ್ ರಾವತ್ ( CDS Gen Bipin Rawat ) ಹಾಗೂ ಅವರ ಪತ್ನಿ ಮತ್ತು ಅವರ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ( IAF chopper ) ಪತನಗೊಂಡ ಬಳಿಕ ಬ್ಲಾಕ್ ಬ್ಯಾಕ್ಸ್ (Black box) ಪತ್ತೆ ಹಚ್ಚುವಲ್ಲಿ ಕೊನೆಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಬ್ಲ್ಯಾಕ್ ಬಾಕ್ಸ್ನ್ನು ಹೆಚ್ಚಿನ ತನಿಖೆಗೆ ಬಳಕೆ ಮಾಡಿಕೊಳ್ಳಲಾಗುತ್ತೆ.
ದುರಂತ ನಡೆದ ಸ್ಥಳದಿಂದ 300 ಮೀಟರ್ನಿಂದ 1 ಕಿಲೋಮೀಟರ್ ದೂರದವರೆಗೆ ಬ್ಲ್ಯಾಕ್ ಬಾಕ್ಸ್ಗಾಗಿ ಅಧಿಕಾರಿಗಳು ನಿನ್ನೆಯಿಂದಲೇ ಶೋಧ ಕಾರ್ಯ ನಡೆಸಿದ್ದರು. ಕೊನೆಗೂ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಇದರಲ್ಲಿ ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಬಹುದು ಎಂದು ನಿರೀಕ್ಷಿಸಲಾಗಿದೆ.
ಬ್ಲ್ಯಾಕ್ ಬಾಕ್ಸ್ ಎಂಬುದು ಹೆಲಿಕಾಪ್ಟರ್ ಹಾಗೂ ವಿಮಾನಗಳಲ್ಲಿ ಅಳವಡಿಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಈ ಬ್ಲ್ಯಾಕ್ ಬಾಕ್ಸ್ನ ಸಹಾಯದಿಂದ ಯಾವ ಕಾರಣದಿಂದ ಹೆಲಿಕಾಪ್ಟರ್ ಅಥವಾ ವಿಮಾನ ಪತನಗೊಂಡಿದೆ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಪತನಕ್ಕೆ ಕಾರಣ ತಿಳಿದುಕೊಳ್ಳಬೇಕೆಂದೇ ಬ್ಲ್ಯಾಕ್ ಬಾಕ್ಸ್ನ್ನು ಅಳವಡಿಸಲಾಗುತ್ತದೆ.
ತಮಿಳುನಾಡಿನ ಕುನೂರ್ ಬಳಿಯ ನೀಲಗಿರಿ ಅರಣ್ಯದಲ್ಲಿ ನಿನ್ನೆ ಸೇನಾ ಹೆಲಿಕಾಪ್ಟರ್ ಪತನವಾಗಿತ್ತು. ಈ ಹೆಲಿಕಾಪ್ಟರ್ನಲ್ಲಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಸೇನೆಯಲ್ಲಿದ್ದ 13 ಅಧಿಕಾರಿಗಳು ನಿನ್ನೆ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು ವೆಲ್ಲಿಂಗ್ಟನ್ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರುಣ್ ಸಿಂಗ್ ದೇಹ 80 ಪ್ರತಿಶತ ಸುಟ್ಟು ಹೋಗಿದೆ ಎನ್ನಲಾಗಿದ್ದು ಅವರನ್ನು ಲೈಫ್ ಸಪೋರ್ಟ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕ್ಯಾಪ್ಟನ್ ವರುಣ್ ಸಿಂಗ್ ಜೀವನ್ಮರಣ ಹೋರಾಟ : ಸಂಸತ್ತಿಗೆ ರಾಜನಾಥ್ ಸಿಂಗ್ ಮಾಹಿತಿ
ತಮಿಳುನಾಡಿನ ಕುನೂರ್ ಬಳಿಯ ನೀಲಗಿರಿ ಅರಣ್ಯದಲ್ಲಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ವಿಸ್ತೃತ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ನೀಡಿದ್ದಾರೆ. ಅತಿಯಾದ ದುಃಖ ಹಾಗೂ ಭಾರವಾದ ಹೃದಯದಿಂದ 2021ರ ಡಿಸೆಂಬರ್ 8ರಂದು ಮಧ್ಯಾಹ್ನದ ವೇಳೆಗೆ ಮಿಲಿಟರಿ ಹೆಲಿಕಾಪ್ಟರ್ ಪತನವಾದ ಬಗ್ಗೆ ದುರದೃದಷ್ಟಕರ ವರದಿಯನ್ನು ನೀಡಲು ನಾನಿಲ್ಲಿ ನಂತಿದ್ದೇನೆ. ಈ ಹೆಲಿಕಾಪ್ಟರ್ನಲ್ಲಿ ದೇಶದ ಮೊದಲ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಇದ್ದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್ ವೆಲ್ಲಿಂಗ್ಟನ್ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿಗೆ ಕಾಲೇಜಿಗೆ ನಿಗದಿತ ಭೇಟಿಗೆ ತೆರಳುತ್ತಿದ್ದರು. ವಾಯುಪಡೆಯ ಎಂಐ 17 ವಿ5 ಹೆಲಿಕಾಪ್ಟರ್ ನಿನ್ನೆ ಬೆಳಗ್ಗೆ 11.48ರ ಸುಮಾರಿಗೆ ಸೂಲೂರು ಏರ್ಬೇಸ್ನಿಂದ ಟೇಕಾಫ್ ಆಗಿತ್ತು. ಮಧ್ಯಾಗ್ನ 12:15ರ ಸುಮಾರಿಗೆ ವೆಲ್ಲಿಂಗ್ಟನ್ನಲ್ಲಿ ಲ್ಯಾಂಡ್ ಆಗಬೇಕಿತ್ತು.
ಆದರೆ ಸುಮಾರು 12:08ರ ಸುಮಾರಿಗೆ ಸುಲೂರು ವಾಯುನೆಲೆಯಲ್ಲಿದ್ದ ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟ್ರೋಲ್ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಕುನೂರ್ ಎಂಬಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಕಾಡಿನಲ್ಲಿ ಬೆಂಕಿಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಅಲ್ಲಿ ಮಿಲಿಟರಿ ಹೆಲಿಕಾಪ್ಟರ್ನ ಅವಶೇಷಗಳನ್ನು ಗಮನಿಸಿದ್ದಾರೆ. ಕೂಡಲೇ ಹೆಲಿಕಾಪ್ಟರ್ನಲ್ಲಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭವಾಗಿತ್ತು. ಬದುಕುಳಿದವರನ್ನು ಕೂಡಲೇ ಆಸ್ಪತ್ರೆಗೂ ದಾಖಲಿಸಲಾಗಿತ್ತು
ದುರಂತದಲ್ಲಿ ಗಾಯಗೊಂಡಿದ್ದವರನ್ನು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಪ್ರಸ್ತುತ ಮಾಹಿತಿಯ ಪ್ರಕಾರ ಹೆಲಿಕಾಪ್ಟರ್ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಸಿಡಿಎಸ್ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡೆರ್, ಲೆ.ಕ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚವ್ಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೆಡಬ್ಲು ಓ ಪ್ರದೀಪ್, ಜೆಡಬ್ಲುಓ ದಾಸ್, ನಾಯಕ್ ಬಿ ಸಾಯಿ ತೇಜ, ಸತ್ಪಾಲ್, ನಾಯಕ್ ವಿವೇಕ ಕುಮಾರ್, ನಾಯಕ್ ಗುರುಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ
ಈ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ರನ್ನು ಲೈಫ್ ಸಪೋರ್ಟ್ನಲ್ಲಿ ಇಡಲಾಗಿದೆ. ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು ಸಿಂಗ್ರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :Rajnath Singh : ಜೀವನ್ಮರಣ ಹೋರಾಟದಲ್ಲಿ ಕ್ಯಾಪ್ಟನ್ ವರುಣ್ ಸಿಂಗ್: ಸಂಸತ್ತಿಗೆ ರಾಜನಾಥ್ ಸಿಂಗ್ ಮಾಹಿತಿ
Black box of IAF chopper that crashed with CDS Gen Bipin Rawat on board recovered