Harjinder Singh : ಸೇನಾ ಹೆಲಿಕಾಪ್ಟರ್​ ಪತನ: ಕನ್ನಡತಿಯನ್ನೇ ವರಿಸಿದ್ದರು ಹುತಾತ್ಮ ಲೆ.ಕ.ಹರ್ಜಿಂದರ್​ ಸಿಂಗ್​​

ಸರ್ಜಿಕಲ್​ ಸ್ಟ್ರೈಕ್​, ಬಾಲಾಕೋಟ್​ ದಾಳಿ ಹಿಂದಿನ ಮಾಸ್ಟರ್​ ಮೈಂಡ್​, ಭಾರತೀಯ ಮೂರು ಸೇನೆಗಳ ನಾಯಕ, ವೀರ ಸೇನಾನಿ ಸಿಡಿಎಸ್​ ಜನರಲ್​​ ಬಿಪಿನ್​ ರಾವತ್​​​ ತಮಿಳುನಾಡಿನ ಕುನೂರ್​ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಬರೋಬ್ಬರಿ ನಾಲ್ಕು ದಶಕಗಳಿಂದ ಸೇನೆಗೆ ಸೇವೆ ಸಲ್ಲಿಸಿದ್ದ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್​ ಕೂಡ ಇದೇ ದುರಂತದಲ್ಲಿ ಜೀವ ತೆತ್ತಿದ್ದಾರೆ. ಇನ್ನು ದುರಂತದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ ಲೆಫ್ಟಿನಂಟ್​​ ಕರ್ನಲ್​​ ಹರ್ಜಿಂದರ್​​ ಸಿಂಗ್ (Lt col Harjinder Singh) ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್​ನಲ್ಲಿ ಒಟ್ಟು 14 ಮಂದಿ ಇದ್ದರು ಎನ್ನಲಾಗಿದ್ದು ಇದರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವಾಯುಪಡೆ ಅಧಿಕೃತ ಮಾಹಿತಿ ನೀಡಿದೆ. ಮೃತರನ್ನು ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​, ಸಿಡಿಎಸ್​​ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್​​​ ಲಖ್ಬಿಂದರ್​ ಸಿಂಗ್​ ಲಿಡ್ಡೆರ್​, ಲೆ.ಕ ಹರ್ಜಿಂದರ್​ ಸಿಂಗ್, ವಿಂಗ್​ ಕಮಾಂಡರ್​ ಪಿಎಸ್​ ಚವ್ಹಾಣ್​, ಸ್ಕ್ವಾಡ್ರನ್​ ಲೀಡರ್​ ಕೆ ಸಿಂಗ್​, ಜೆಡಬ್ಲು ಓ ಪ್ರದೀಪ್​, ಜೆಡಬ್ಲುಓ ದಾಸ್​, ನಾಯಕ್​ ಬಿ ಸಾಯಿ ತೇಜ, ಸತ್ಪಾಲ್​, ನಾಯಕ್​ ವಿವೇಕ ಕುಮಾರ್, ನಾಯಕ್​ ಗುರುಸೇವಕ್​ ಸಿಂಗ್​ ಎಂದು ಗುರುತಿಸಲಾಗಿದೆ.

ಕುನೂರ್​ನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಲೆಫ್ಟಿನಂಟ್​​ ಕರ್ನಲ್​​ ಹರ್ಜಿಂದರ್​​ ಸಿಂಗ್​​ ಕಾರ್ಕಳದ ಸಾಲ್ಮರ ಎಂಬಲ್ಲಿನ ನಿವಾಸಿ ಪ್ರಫುಲ್ಲ ಎಂಬವರನ್ನು ವಿವಾಹ ವಾಗಿದ್ದರು. ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಫುಲ್ಲಾ ಹಾಗೂ ಹರ್ಜಿಂದರ್​ ಸಿಂಗ್​ ಪರಸ್ಪರ ಒಬ್ಬರೊನ್ನಬ್ಬರು ಪ್ರೀತಿಸಿ ಬಳಿಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು ಎನ್ನಲಾಗಿದೆ.

ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್​​ನಲ್ಲಿ ಹರ್ಜಿಂದರ್​ ಸಿಂಗ್​​ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಕಾರ್ಕಳದ ಮಿನೇಜಸ್​ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ. ಮೃತ ಹರ್ಜಿಂದರ್​ ಸಿಂಗ್​​ರನ್ನು ನೆನೆದು ಪ್ರಫುಲ್ಲಾ ತಾಯಿ ಮೇರಿ, ಅಕ್ಕ – ಬಾವ ಸೇರಿದಂತೆ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​​ ವೆಲ್ಲಿಂಗ್ಟನ್​​ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿಗೆ ಕಾಲೇಜಿಗೆ ನಿಗದಿತ ಭೇಟಿಗೆ ತೆರಳುತ್ತಿದ್ದರು. ವಾಯುಪಡೆಯ ಎಂಐ 17 ವಿ5 ಹೆಲಿಕಾಪ್ಟರ್​ ನಿನ್ನೆ ಬೆಳಗ್ಗೆ 11.48ರ ಸುಮಾರಿಗೆ ಸೂಲೂರು ಏರ್​ಬೇಸ್​ನಿಂದ ಟೇಕಾಫ್​ ಆಗಿತ್ತು. ಮಧ್ಯಾಗ್ನ 12:15ರ ಸುಮಾರಿಗೆ ವೆಲ್ಲಿಂಗ್ಟನ್​ನಲ್ಲಿ ಲ್ಯಾಂಡ್​ ಆಗಬೇಕಿತ್ತು. ಆದರೆ ಸುಮಾರು 12:08ರ ಸುಮಾರಿಗೆ ಸುಲೂರು ವಾಯುನೆಲೆಯಲ್ಲಿದ್ದ ಹೆಲಿಕಾಪ್ಟರ್​​​ ಏರ್​ ಟ್ರಾಫಿಕ್​ ಕಂಟ್ರೋಲ್​ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಕುನೂರ್​ ಎಂಬಲ್ಲಿ ಹೆಲಿಕಾಪ್ಟರ್​ ಪತನಗೊಂಡಿತ್ತು. ಕಾಡಿನಲ್ಲಿ ಬೆಂಕಿಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಅಲ್ಲಿ ಮಿಲಿಟರಿ ಹೆಲಿಕಾಪ್ಟರ್​ನ ಅವಶೇಷಗಳನ್ನು ಗಮನಿಸಿದ್ದಾರೆ. ಕೂಡಲೇ ಹೆಲಿಕಾಪ್ಟರ್​ನಲ್ಲಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭವಾಗಿತ್ತು. ಬದುಕುಳಿದವರನ್ನು ಕೂಡಲೇ ಆಸ್ಪತ್ರೆಗೂ ದಾಖಲಿಸಲಾಗಿತ್ತು

ದುರಂತದಲ್ಲಿ ಗಾಯಗೊಂಡಿದ್ದವರನ್ನು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಲಿಕಾಪ್ಟರ್​ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ. ಮೃತರನ್ನು ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​, ಸಿಡಿಎಸ್​​ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್​​​ ಲಖ್ಬಿಂದರ್​ ಸಿಂಗ್​ ಲಿಡ್ಡೆರ್​, ಲೆ.ಕ ಹರ್ಜಿಂದರ್​ ಸಿಂಗ್, ವಿಂಗ್​ ಕಮಾಂಡರ್​ ಪಿಎಸ್​ ಚವ್ಹಾಣ್​, ಸ್ಕ್ವಾಡ್ರನ್​ ಲೀಡರ್​ ಕೆ ಸಿಂಗ್​, ಜೆಡಬ್ಲು ಓ ಪ್ರದೀಪ್​, ಜೆಡಬ್ಲುಓ ದಾಸ್​, ನಾಯಕ್​ ಬಿ ಸಾಯಿ ತೇಜ, ಸತ್ಪಾಲ್​, ನಾಯಕ್​ ವಿವೇಕ ಕುಮಾರ್, ನಾಯಕ್​ ಗುರುಸೇವಕ್​ ಸಿಂಗ್​ ಎಂದು ಗುರುತಿಸಲಾಗಿದೆ

ಇದನ್ನು ಓದಿ : Rajnath Singh : ಜೀವನ್ಮರಣ ಹೋರಾಟದಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​: ಸಂಸತ್ತಿಗೆ ರಾಜನಾಥ್​ ಸಿಂಗ್​ ಮಾಹಿತಿ

ಇದನ್ನೂ ಓದಿ :Black box : ತಮಿಳುನಾಡಿನಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್​ನ ಬ್ಲ್ಯಾಕ್​ ಬಾಕ್ಸ್​ ಪತ್ತೆ

Martyr Lieutenant Colonel Harjinder Singh was married to the woman of Udupi

Comments are closed.