ಬೆಂಗಳೂರು : ಮಾನವ ಕಳ್ಳಸಾಗಣಿಕೆದಾರರು ಆಧಾರ್ ಕಾರ್ಡ್ ( fake Aadhaar cards ) ಮಾಹಿತಿಗಳನ್ನು ತಿರುಚುವ ಮೂಲಕ ಅಪ್ರಾಪ್ತರನ್ನು ಬೆಂಗಳೂರಿಗೆ ಕರೆ ತಂದ ಶಾಕಿಂಗ್ ಪ್ರಕರಣವು ಈ ವರ್ಷದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ರೈಲ್ವೆ ಇಲಾಖೆ ಪೊಲೀಸರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಈ ವರ್ಷ ಇಂತಹ 244 (Children trafficked to Bengaluru) ಪ್ರಕರಣಗಳನ್ನು ಭೇದಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ, ಜಿಆರ್ಪಿ, ಡಿ.ಆರ್ ಸಿರಿ ಗೌರಿ ಈ ವಿಚಾರವಾಗಿ ಮಾತನಾಡಿದ್ದು ಆಧಾರ್ ಕಾರ್ಡ್ಗಳಲ್ಲಿ ಮಕ್ಕಳನ್ನು ವಯಸ್ಕರು ಎಂದು ಅವರ ವಯಸ್ಸನ್ನು ತಿರುಚುವ ಮೂಲಕ ಅಪ್ರಾಪ್ತರನ್ನು ಕರೆದುಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಮೂಲ ಆಧಾರ್ ಕಾರ್ಡ್ಗಳಲ್ಲಿ ಮಕ್ಕಳ ವಯಸ್ಸು ಬೇರೆಯದ್ದೇ ಇರಬಹುದು. ಆದರೆ ಕಳ್ಳಸಾಗಣಿಕೆ ಮಾಡಿ ತರಲಾದ ಮಕ್ಕಳ ವಯಸ್ಸು 18 ವರ್ಷ ಎಂದು ನಮೂದಾಗಿದೆ. ಆದರೆ ಮಕ್ಕಳನ್ನು ಪ್ರತ್ಯೇಕವಾಗಿ ಕರೆಯಿಸಿ ವಿಚಾರಣೆ ನಡೆಸಿದಾದ ಆ ಮಕ್ಕಳು ಬೇರೆಯದ್ದೇ ವಯಸ್ಸನ್ನು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ರು.
ಆಧಾರ್ ಕಾರ್ಡ್ನಲ್ಲಿ ಕೇವಲ ವಯಸ್ಸನ್ನು ಮಾತ್ರ ತಿರುಚಲಾಗಿದೆಯೇ ಅಥವಾ ಮಕ್ಕಳ ಹೆಸರು ಹಾಗೂ ನೆರೆಯ ದೇಶದ ಮಕ್ಕಳನ್ನು ಇಲ್ಲಿಗೆ ಕರೆತರಲು ಆಧಾರ್ ಕಾರ್ಡ್ನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬುದಕ್ಕೆ ಇನ್ನು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು. ಚೈಲ್ಡ್ಲೈನ್ ಇಂಡಿಯಾ ಫೌಂಡೇಶನ್ನ ಬೆಂಗಳೂರು ಘಟಕದ ಕಾರ್ಯಕ್ರಮ ನಿರ್ವಾಹಕಿ ಎಂಪಿ ರಶ್ಮಿ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು ಈ ಆಧಾರ್ ಕಾರ್ಡ್ಗಳನ್ನು ತ್ವರಿತವಾಗಿ ನೋಡಿದ ತಕ್ಷಣವೇ ಅದು ನಕಲಿ ಎಂದು ತಿಳಿಯುವಂತಿದೆ. ಅನೇಕರ ಆಧಾರ್ ಕಾರ್ಡ್ಗಳಲ್ಲಿ ಅವರ ಜನ್ಮ ದಿನಾಂಕ ಹಾಗೂ ಜನ್ಮ ತಿಂಗಳು 1 ಎಂದೇ ನಮೂದಾಗಿದೆ. ಅದು ಹೇಗೆ ಒಂದೇ ಗುಂಪಿನ ಇಷ್ಟೊಂದು ಮಕ್ಕಳು ಒಂದೇ ದಿನ ಹುಟ್ಟಿರಲು ಸಾಧ್ಯ..? ಎಂದು ಪ್ರಶ್ನೆ ಮಾಡಿದ್ರು.
ಕಳ್ಳಸಾಗಣಿಕೆಯಾದ ಮಕ್ಕಳಲ್ಲಿ 70 ಪ್ರತಿಶತ ಬಿಹಾರದವರೇ ಆಗಿದ್ದಾರೆ. ಇದನ್ನು ಹೊರತುಪಡಿಸಿ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇನ್ನುಳಿದಂತೆ ಒಡಿಶಾ, ಜಾರ್ಖಂಡ್ ಹಾಗೂ ಕರ್ನಾಟಕದ ಮಕ್ಕಳೂ ಇದರಲ್ಲಿ ಇದ್ದಾರೆ ಎನ್ನಲಾಗಿದೆ. 14 ರಿಂದ 15 ವರ್ಷ ಪ್ರಾಯದ ಮಕ್ಕಳನ್ನು 20 ವರ್ಷದವರೆಂದು ಆಧಾರ್ ಕಾರ್ಡ್ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: Omicron patient discharge : ಕೊರೋನಾಂತಕದ ನಡುವೆ ಸಮಾಧಾನದ ಸುದ್ದಿ: ಓಮೈಕ್ರಾನ್ ಸೋಂಕಿತ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್
244 children trafficked to Bengaluru had fake Aadhaar cards