Ramesh Jarakiholi Statement : ವಿಧಾನಪರಿಷತ್​ ಚುನಾವಣಾ ಫಲಿತಾಂಶದ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ ರಮೇಶ್​ ಜಾರಕಿಹೊಳಿ

ಬೆಂಗಳೂರು : ವಿಧಾನ ಪರಿಷತ್​ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸಿಕ್ಕ ಸೋಲು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಸಿದೆ. ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲೇ ಕೇಸರಿ ಪಾಳಯ ಸೋಲಲು ಮಾಜಿ ಸಚಿವ ರಮೇಶ್​ ಜಾರಕಿಹೊಳಿಯ (Ramesh Jarakiholi Statement) ಪಿತೂರಿ ಕಾರಣವೇ ಎಂಬ ಗುಮಾನಿ ಕೂಡ ಎದ್ದಿದೆ. ಆದರೆ ಈ ಎಲ್ಲಾ ಅಪವಾದಗಳಿಗೆ ಸ್ವತಃ ರಮೇಶ್​ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಅನವಶ್ಯಕವಾಗಿ ನನ್ನ ತಲೆ ಮೇಲೆ ಬಿಜೆಪಿ ಸೋಲಿನ ಹೊರೆಯನ್ನು ಹೇರುತ್ತಿದ್ದಾರೆ. ನನಗೆ ಕಾಂಗ್ರೆಸ್​ನ್ನು ಸೋಲಿಸಬೇಕು ಎಂಬ ಅಭಿಲಾಷೆ ದೊಡ್ಡ ಮಟ್ಟದಲ್ಲಿ ಇತ್ತು. ಆದರೆ ನಾನೆಂದಿಗೂ ಬಿಜೆಪಿಯನ್ನು ಸೋಲಿಸಬೇಕು ಎಂದು ಯೋಚನೆ ಕೂಡ ಮಾಡಿಲ್ಲ. ಆದರೂ ನನ್ನ ಮೇಲೆ ವಿನಾಕಾರಣ ಸೋಲಿನ ಅಪವಾದ ಕಟ್ಟಲಾಗ್ತಿದೆ ಎಂದು ಹೇಳಿದರು.

ಅಲ್ಲದೇ ಇದೇ ವೇಳೆ ಹೊಸ ಬಾಂಬ್​ ಸಿಡಿಸಿದ ಗೋಕಾಕ್​ ಸಾಹುಕಾರ, ವಿಧಾನ ಪರಿಷತ್​ ಚುನಾವಣೆಗೂ ಕೇವಲ ನಾಲ್ಕೇ ದಿನಗಳು ಮುಂಚಿತವಾಗಿ ಇಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಬೆಳವಣಿಗೆ ನಡೆದಿದೆ. ವಿಧಾನಪರಿಷತ್​ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಈ ರಾಜಕೀಯ ವಿದ್ಯಮಾನವೇ ಕಾರಣ. ನಾನು ಪಕ್ಷದ ನಾಯಕರ ಜೊತೆ ಆಂತರಿಕವಾಗಿ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಇದೇ ವೇಳೆ ಆಕ್ರೋಶ ಹೊರಹಾಕಿದ ರಮೇಶ್​ ಜಾರಕಿಹೊಳಿ, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಯಾವುದೇ ಪ್ರಯೋಜನವಿಲ್ಲ. ಅವರೊಬ್ಬ ವೇಸ್ಟ್​ ಬಾಡಿ ಎಂದು ಕುಟುಕಿದರು.

ಪಕ್ಷಕ್ಕೆ ಸೋಲು, ಸಹೋದರನಿಗೆ ಗೆಲುವು : ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡದ್ರಾ ರಮೇಶ್ ಜಾರಕಿಹೊಳಿ (Ramesh Jarakiholi)

ಬೆಳಗಾವಿ : ಬಿಜೆಪಿಯ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಪಕ್ಷೇತರರು ಹಂಚಿಕೊಂಡಿದ್ದಾರೆ. ಆ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದ ವಿರುದ್ಧ ಸೇಡು ತೀರಿಸಿಕೊಂಡು ಸಹೋದರನನ್ನು ಗೆಲ್ಲಿಸಿ ಕೊಂಡಿದ್ದಾರೆ. ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಆದರೆ ಸಹೋದರನ ಗೆಲುವು ರಮೇಶ್ ಪಾಲಿಗೆ ಸಂಕಷ್ಟ ತರೋ ಲಕ್ಷಣ ದಟ್ಟ ವಾಗಿದೆ.

ಬೆಳಗಾವಿ ಯಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಎದುರು ಮಂಡಿಯೂರಿದ್ದು ಮಹಾಂತೇಶ್ ಕವಠಗಿಮಠ ಸೋಲು ಕಂಡಿದ್ದಾರೆ. ಆದರೆ ಈ ಸೋಲಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾರಣ ಎಂಬ ವಿಚಾರ ಈಗ ಮುನ್ನಲೆಗೆ ಬಂದಿದೆ. ಹೀಗಾಗಿ ಮಾಜಿ ಸಚಿವ‌ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಬಿಜೆಪಿಯಿಂದ ಲಖನ್ ಜಾರಕಿಹೊಳಿಗೆ ಟಿಕೇಟ್ ಕೊಡಿಸಲು ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಯತ್ನಿಸಿದ್ದರು.

ಆದರೆ ಬಿಜೆಪಿ ಮಹಾಂತೇಶ್ ಕವಠಗಿಮಠ್ ಗೆ ಟಿಕೆಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದ ಲಖನ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಹೀಗಾಗಿ ಪಕ್ಷೇತರವಾಗಿ ಕಣಕ್ಕಿಳಿದ ಸಹೋದರನನ್ನು ಗೆಲ್ಲಿಸಲು ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಪಕ್ಷದ ಚೌಕಟ್ಟು ಮೀರಿ ಕೆಲಸ‌ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ಚುನಾವಣೆ ಗೂ ಮುನ್ನ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಸೋಲಿಸುವುದು ನನ್ನ ಪರಮಗುರಿ. ಆದರೇ ಮಹಾಂತೇಶ್ ಮತ್ತು ಲಖನ್ ಅವರನ್ನು ಗೆಲ್ಲಿಸುವುದಾಗಿ ರಮೇಶ್ ಜಾರಕಿಹೊಳಿ ಹಲವು ಭಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ ಅಂತರಿಕವಾಗಿ ರಮೇಶ್ ಜಾರಕಿಹೊಳಿ ಕೇವಲ ತಮ್ಮ‌ಸಹೋದರ ಲಖನ್ ಗೆಲುವಿಗಾಗಿ‌ಮಾತ್ರ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಬೆಳಗಾವಿ ಬಿಜೆಪಿ ನಾಯಕರು ಹಾಗೂ ಮಹಾಂತೇಶ್ ಕವಠಗಿಮಠ್ ಹೈಕಮಾಂಡ್ ಗೆ ದೂರು ನೀಡಲು ಸಿದ್ಧವಾಗಿದ್ದಾರೆ. ಬಾಲಚಂದ್ರ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿ ಸೋಲಿಗೆ ಅವರೇ ಕಾರಣವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರಂತೆ. ಮೂಲಗಳ ಮಾಹಿತಿ ಪ್ರಕಾರ ತಮಗೆ ಸಚಿವ ಸ್ಥಾನ ಹಾಗೂ ಸಹೋದರನಿಗೆ ಪರಿಷತ್ ಟಿಕೇಟ್ ಸ್ಥಾನ ನೀಡದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಸಖತ್ ಪ್ಲ್ಯಾನ್ ಮಾಡಿದ್ದಾರೆ.

ಮಹಾಂತೇಶ್ ಪರ ಪ್ರಚಾರ ಮಾಡುವ ನೆಪದಲ್ಲೇ ಸಹೋದರನ ಗೆಲುವಿಗೆ ಸರ್ಕಸ್ ನಡೆಸಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸದ್ಯ ಬಿಜೆಪಿ ಶಿಸ್ತು ಕಮಿಟಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ರಮೇಶ್ ಹಾಗೂ ಬಾಲಚಂದ್ರ ತಲೆದಂಡ ಪಡೆಯೋ ತಾಕತ್ತಿದೆಯಾ ಎಂದು ಕಾಂಗ್ರೆಸ್ ಕೂಡ ಕುಟುಕಿರೋದರಿಂದ ಬಿಜೆಪಿಗೆ ಜಾರಕಿಹೊಳಿ ಬ್ರದರ್ಸ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.

ಇದನ್ನು ಓದಿ : Omicron patient discharge : ಕೊರೋನಾಂತಕದ ನಡುವೆ ಸಮಾಧಾನದ ಸುದ್ದಿ: ಓಮೈಕ್ರಾನ್ ಸೋಂಕಿತ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್

ಇದನ್ನೂ ಓದಿ: Jarkiholi master plan : ಬಿಜೆಪಿಗೆ ಅನಿವಾರ್ಯವಾದ್ರಾ ಲಖನ್ : ರಮೇಶ್ ಜಾರಕಿಹೊಳಿ ಪ್ಲ್ಯಾನ್ ಏನು ಗೊತ್ತಾ?!

ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ

Ramesh Jarakiholi statement on the results of the MLC elections

Comments are closed.