Woman consumes sanitiser :ಸೋಶಿಯಲ್ ಮೀಡಿಯಾವನ್ನು ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಾವು ಅದನ್ನು ಪೂರಕವೋ ಅಥವಾ ಮಾರಕವೋ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೆ ದೆಹಲಿಯಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ ಸೋಶಿಯಲ್ ಮೀಡಿಯಾ ಸಹಾಯದಿಂದ ಪೊಲೀಸರು ಮಹಿಳೆಯ ಜೀವವನ್ನು ಕಾಪಾಡಿದ್ದಾರೆ.
ಉತ್ತರ ದೆಹಲಿಯ ಭಾಗದಲ್ಲಿ ಪತಿಯ ಜೊತೆ ವಾಸವಿದ್ದ ಮಹಿಳೆಯು ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ ಆಕೆ ಆತ್ಮಹತ್ಯೆಗೂ ಮುನ್ನ ಇನ್ಸ್ಟಾಗ್ರಾಂ ಲೈವ್ ಬಂದಿದ್ದಾಳೆ. ಇನ್ಸ್ಟಾಗ್ರಾಂ ಲೈವ್ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದು ಮಾತ್ರವಲ್ಲದೇ ಸ್ಯಾನಿಟೈಸರ್ ಸೇವನೆ ಮಾಡಿದ್ದಾಳೆ.
ಈ ವಿಚಾರವನ್ನು ಅರಿತ ದೆಹಲಿ ಸೈಬರ್ ಸೆಲ್ ವಿಭಾಗ ಕೂಡಲೇ ಮಾಹಿತಿಯನ್ನು ದೆಹಲಿ ಪೊಲೀಸರಿಗೆ ರವಾನಿಸಿದೆ. ರಾತ್ರಿ 9:55ರ ಸುಮಾರಿಗೆ ಮಹಿಳೆ ಇನ್ಸ್ಟಾಗ್ರಾಂ ಲೈವ್ ಬಂದಿದ್ದರೆ ಪೊಲೀಸರು ಎಂಟು ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಅಂದರೆ 10:55ರ ಒಳಗಾಗಿ ಮಹಿಳೆಯನ್ನು ಟ್ರ್ಯಾಕ್ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದಾರೆ.
ಮಹಿಳೆ ಮೊಬೈಲ್ ಸಂಖ್ಯೆಯನ್ನು ಪಡೆದ ಪೊಲೀಸರು, ಒಂದು ಮೊಬೈಲ್ನಲ್ಲಿ ಜಿಪಿಎಸ್ ಆನ್ ಮಾಡಿಕೊಂಡು ಮತ್ತೊಂದು ಮೊಬೈಲ್ನಲ್ಲಿ ಮಹಿಳೆಗೆ ಕರೆ ಮಾಡಿದ್ದಾರೆ. ಮಹಿಳೆಯು ರಸ್ತೆಯ ಬದಿ ನಿಂತು ಇನ್ಸ್ಟಾಗ್ರಾಂ ಲೈವ್ ಮಾಡುತ್ತಿದ್ದಳು. 8 ನಿಮಿಷಗಳ ಕಾಲ ಮಹಿಳೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಸಾಗರ್ ಸಿಂಗ್ ಕಲ್ಸಿ, ಸೈಬರ್ ಸೆಲ್ನಿಂದ ಈ ವಿಚಾರವಾಗಿ ಮಾಹಿತಿ ಪಡೆಯುತ್ತಿದ್ದಂತೆಯೇ ನಾವು ಕೂಡಲೇ ಅಲರ್ಟ್ ಆದೆವು. ಸೈಬರ್ ಸೆಲ್ ತಂಡವು ನಮಗೆ ಮಹಿಳೆಯಿದ್ದ ಸ್ಥಳ ಹಾಗೂ ಮೊಬೈಲ್ ನಂಬರ್ ನೀಡಿತು.
ಈ ಪ್ರಕರಣದ ವಿಚಾರವಾಗಿ ಮಾತನಾಡಿದ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ನಾವು ಸೈಬರ್ ಸೆಲ್ನಿಂದ ರಾತ್ರಿ 9:55ರ ಸುಮಾರಿಗೆ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿದ್ದೆವು. ಸೈಬರ್ ಸೆಲ್ ತಂಡ ನಮಗೆ ಈ ವಿಡಿಯೋ ಯಾವ ಏರಿಯಾದಿಂದ ಚಿತ್ರೀಕರಿಸಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತ್ತು.
ನಾವು ಕೂಡಲೇ ಸ್ಟೇಷನ್ ಹೌಸ್ ಆಫೀಸರ್ ರಾಜೇಂದ್ರ ಪ್ರಸಾದ್ರನ್ನು ಸಂಪರ್ಕಿಸಿದೆವು. ಹಾಗೂ ಆ ಏರಿಯಾದಲ್ಲಿದ್ದ ಮಹಿಳೆಗಾಗಿ ತಲಾಶ್ ಆರಂಭವಾಯ್ತು. ಆಕೆಯ ಸರಿಯಾದ ವಿಳಾಸವನ್ನು ಪಡೆದುಕೊಳ್ಳಲು ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಲಾಗಿತ್ತು ಎಂದು ಹೇಳಿದರು.
Delhi: Woman consumes sanitiser on Instagram Live, rescued by cops
ಇದನ್ನು ಓದಿ : Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು
ಇದನ್ನೂ ಓದಿ : woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್..!