Virat Kohli RCB Captain : ಐಪಿಎಲ್ 2022 ರಲ್ಲಿ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕ

ಮುಂದಿನ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2022 ( IPL 2022 )ರ ಮೆಗಾ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Virat Kohli RCB Captain) ಹೊಸ ನಾಯಕನ ಹುಡುಕಾಟದಲ್ಲಿದೆ. ವಿರಾಟ್‌ ಕೊಯ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅವರನ್ನು ಆರ್‌ಸಿಬಿ ತಂಡದಲ್ಲಿ ಉಳಸಿಕೊಂಡಿದ್ದು, ಹೊಸ ನಾಯಕನ ಹುಡುಕಾಟವನ್ನು ನಡೆಸುತ್ತಿದೆ. ಆದ್ರೀಗ ವಿರಾಟ್‌ ಕೊಯ್ಲಿ ಆರ್‌ಸಿಬಿ ನಾಯಕನಾಗಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ನಾಯಕ ವಿರಾಟ್ ಕೊಹ್ಲಿ ಜನವರಿಯಲ್ಲಿ ನಡೆಯಲಿರುವ IPL 2022 ರ ಮೆಗಾ ಹರಾಜಿಗೆ ಮುಂಚಿತವಾಗಿ RCB ವಿರಾಟ್ ಕೊಹ್ಲಿ (INR 15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (INR 11 ಕೋಟಿ), ಮತ್ತು ಮೊಹಮ್ಮದ್ ಸಿರಾಜ್ (INR 6 ಕೋಟಿ) ಅವರನ್ನು ಉಳಿಸಿಕೊಂಡಿದೆ. ಉಳಿದಂತೆ 57 ಕೋಟಿಯ ಹಣದೊಂದಿಗೆ ಉಳಿದ ಆಟಗಾರರನ್ನು ಖರೀದ ಮಾಡಬೇಕಾಗಿದೆ. ಇದುವರೆಗೆ ಆರ್‌ಬಿಸಿ ತಂಡ ಒಂದು ಬಾರಿ ರನ್ನರ್‌ ಅಪ್‌ ಆಗಿತ್ತು. ಆದರೆ ಇದುವರೆಗೂ ಐಪಿಎಲ್‌ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮೊದಲ ಬಾರಿಗೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್‌ ಕೊಯ್ಲಿ ಅಂದಿನ ಪಂದ್ಯದಲ್ಲಿ ನಿರಾಸೆಯನ್ನು ಅನುಭವಿಸಿದ್ದರು. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ವಿರುದ್ದ ನಡೆದ ಪಂದ್ಯದಲ್ಲಿ ಕೊಯ್ಲಿ ಕೇವಲ ಒಂದು ರನ್‌ ಗಳಿಸಿ ನಿರಾಸೆ ಮೂಡಿಸಿದ್ದರು. ಭಾರತ ತಂಡಕ್ಕೆ ಅಂಡರ್‌ 19 ವಿಶ್ವಕಪ್‌ ಗೆಲ್ಲಿಸಿ ಕೊಟ್ಟಿದ್ದ ವಿರಾಟ್‌ ಕೊಯ್ಲಿ ನಂತರದ ಪಂದ್ಯಗಳಲ್ಲಿ ಅದ್ಬುತ ಬ್ಯಾಟಿಂಗ್‌ ಮೂಲಕ ಗಮನ ಸೆಳೆದ್ರು.

2021ರ ಐಪಿಎಲ್‌ ಪಂದ್ಯಾವಳಿಯಲ್ಲಿ RCB ನಾಯಕನಾಗಿದ್ದ ವಿರಾಟ್ ಕೊಹ್ಲಿ ನೇತೃತ್ವದ ತಂಡ ಫೈನಲ್‌ಗೆ ಏರಲು ವಿಫಲಾಗಿತ್ತು. ಅಲ್ಲದೇ ಐಪಿಎಲ್‌ ಆರಂಭಕ್ಕೂ ಮೊದಲೇ ಕೊಯ್ಲಿ ತಾನು ಆರ್‌ಸಿಬಿ ನಾಯಕನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆಯನ್ನು ಮಾಡಿದ್ದರು. ಆದರೆ ಮುಂದಿನ ದಿನಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿಯೇ ಉಳಿಯುತ್ತೇನೆ ಎಂದಿದ್ದಾರೆ. ಅಂತೆಯೇ ಇದೀಗ ಕೊಯ್ಲಿ ಮುಂದಿನ ಬಾರಿಯ ಐಪಿಎಲ್‌ಗೆ ಆರ್‌ಸಿಬಿ ತಂಡದಲ್ಲಿಯೇ ಉಳಿದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಆರಂಭದಿಂದಲೂ ಅದ್ಬುತ ಫಾರ್ಮ್‌ನಲ್ಲಿದ್ದಾ ವಿರಾಟ್‌ ಕೊಯ್ಲಿ. 2008 ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಆರ್‌ಸಿಬಿಗೆ ಸೇರಿದಾಗಿನಿಂದ ಇದುವರೆಗೆ 207 ಐಪಿಎಲ್ ಪಂದ್ಯಗಳಲ್ಲಿ 6283 ರನ್ ಗಳಿಸಿದ್ದಾರೆ. ಅಲ್ಲದೇ 2016 ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಏರಲು ಪ್ರಮುಖ ಪಾತ್ರವಹಿಸಿದ್ದರು. 2013 ರ ಋತುವಿನಲ್ಲಿ ಡೇನಿಯಲ್ ವೆಟ್ಟೋರಿಯಿಂದ RCB ನಾಯಕತ್ವ ವಹಿಸಿಕೊಂಡಿದ್ದರು. RCB ನಾಯಕನಾಗಿ ವಿರಾಟ್‌ ಕೊಯ್ಲಿ ಇದುವರಗೆ ಒಟ್ಟು140 ಪಂದ್ಯಗಳನ್ನು ಆಡಿದ್ದು, ಈ ಪೈಕಿ 66 ಗೆಲುವುಗಳು ಮತ್ತು 70 ಸೋಲುಗಳನ್ನು ಕಂಡಿದ್ದಾರೆ. ಇದೀಗ ವಿರಾಟ್‌ ಕೊಯ್ಲಿ ಮುಂದಿನ ಬಾರಿಯೂ ನಾಯಕನಾಗಿ ಮುಂದುವರಿಯಲಿದ್ದಾರೆ. ಈ ಕುರಿತು ಆರ್‌ಸಿಬಿ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ವಿರಾಟ್‌ ಕೊಯ್ಲಿ ನಾಯಕತ್ವದಲ್ಲಿ ಆರ್‌ಬಿಸಿ ಪ್ರದರ್ಶನ ಹೇಗಿತ್ತು ಅನ್ನೋ ವಿವರಣೆ ಇಲ್ಲಿದೆ.

2013 : ವಿರಾಟ್ ಕೊಹ್ಲಿ 2013 ರ ಋತುವಿನಲ್ಲಿ RCB ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲದೇ 16 ಪಂದ್ಯಗಳಿಂದ 634 ರನ್ ಗಳಿಸಿದ್ದರು. ಆದರೆ ಆರ್‌ಸಿಬಿ ತಂಡ 16 ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

2014 : ಪೂರ್ಣಪ್ರಮಾಣದ ನಾಯಕನಾಗಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ 14 ಪಂದ್ಯಗಳಲ್ಲಿ 359 ರನ್ ಗಳಿಸಿದ್ದರು. ಆದರೆ RCB ಲೀಗ್ ಹಂತದಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2014 ರಲ್ಲಿ ಆಡಿದ 14 ಪಂದ್ಯಗಳಲ್ಲಿ ಒಟ್ಟು 10 ಅಂಕಗಳನ್ನು ಪಡೆಯಲಷ್ಟೇ ಶಕ್ತವಾಗಿದೆ.

2015 : ವಿರಾಟ್ 2015 ರಲ್ಲಿ 16 ಪಂದ್ಯಗಳಿಂದ 505 ರನ್ ಸಿಡಿಸಿದ್ದಾರೆ. ಜೊತೆಗೆ RCB ಪ್ಲೇಆಫ್ ತಲುಪಿತು. ಆದರೆ RCB ಎಲಿಮಿನೇಟರ್‌ನಲ್ಲಿ 71 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿತು ಆದರೆ ಕ್ವಾಲಿಫೈಯರ್ 2 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ ಸೋಲನ್ನು ಕಂಡಿತ್ತು.

2016: ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಅದ್ಬುತ ಆಟದ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಿಂದ 81.08 ಸರಾಸರಿ ಮತ್ತು 152.03 ಸ್ಟ್ರೈಕ್ ರೇಟ್‌ನಲ್ಲಿ 973 ರನ್ ಸಿಡಿಸಿದ್ದಾರೆ. ಅದ್ರಲ್ಲೂ RCB ನಾಯಕ ಆ ಋತುವಿನಲ್ಲಿ ಬರೋಬ್ಬರಿ 4 ಶತಕಗಳನ್ನು ಬಾರಿಸಿದ್ದಾರೆ. RCB ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಲಯನ್ಸ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅದೃಷ್ಟ ಆರ್‌ಸಿಬಿ ತಂಡವನ್ನು ಕೈ ಹಿಡಿಯಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋಲು ಕಂಡು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಅತ್ಯಧಿಕ ರನ್‌ ಸಿಡಿಸಿದ್ದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದರು.

2017: ಪ್ರಮುಖಆಟಗಾರರಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 9.4 ಓವರ್‌ಗಳಲ್ಲಿ 49 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಐಪಿಎಲ್‌ ಇತಿಹಾಸದ ಅತ್ಯಂತ ಕಡಿಮೆ ಮೊಟ್ಟ ಅನ್ನೋ ಕೆಟ್ಟ ದಾಖಲೆಯನ್ನು ಬರೆದಿತ್ತು. ವಿರಾಟ್ ಕೊಯ್ಲಿ10 ಪಂದ್ಯಗಳಿಂದ 308 ರನ್ ಗಳಿಸಿದರು ಮತ್ತು RCB ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ಕೇವಲ 7 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿಯೇ ತನ್ನ ಅಭಿಯಾನವನ್ನು ಮುಗಿಸಿತ್ತು.

2018: ಕ್ರಿಸ್ ಗೇಲ್‌ ಸೇರಿದಂತೆ ತಂಡ ಬಹುತೇಕ ಆಟಗಾರರು ಫಾರ್ಮ ಕಳೆದುಕೊಂಡಿದ್ದರು. ಆದರೆ ವಿರಾಟ್ ಕೊಯ್ಲಿ 14 ಪಂದ್ಯಗಳಲ್ಲಿ 530 ರನ್ ಗಳಿಸಿದ್ದರು. 14 ಪಂದ್ಯಗಳಲ್ಲಿ 12 ಅಂಕಗಳನ್ನು ಗಳಿಸುವ ಮೂಲಕ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

2019 : ಆರ್‌ಸಿಬಿ ತಂಡದ ಅಭಿಮಾನಿಗಳು ಈ ಬಾರಿ ಕಪ್‌ ನಮ್ಡೆ ಅನ್ನುತ್ತಲೇ ಐಪಿಎಲ್‌ ಪಂದ್ಯಾವಳಿಯನ್ನು ಆರಂಭಿಸಿದ್ದರು. ಆದರೆ ಆರ್‌ಸಿಬಿ ತಂಡಕ್ಕೆ ಲಕ್‌ ಮಾತ್ರ ಕೈ ಹಿಡಿಯಲೇ ಇಲ್ಲ. ಋತುವಿನಲ್ಲಿ ಒಟ್ಟಾರೆ 464 ರನ್ ಗಳಿಸಿದರು. 14 ಪಂದ್ಯಗಳಲ್ಲಿ 11 ಅಂಕಗಳೊಂದಿಗೆ ಲೀಗ್ ಹಂತದಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

2020: ಹೊಸ ಕೋಚ್‌ ಹಾಗೂ ಸಿಬ್ಬಂದಿಗಳ ಜೊತೆಗೆ ಆರ್‌ಸಿಬಿ ಐಪಿಎಲ್‌ ಅಭಿಯಾನ ಆರಂಭಿಸಿತ್ತು. RCB ಸತತ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತು. ಆದರೂ 14 ಅಂಕಗಳೊಂದಿಗೆ ಪ್ಲೇಆಫ್ ತಲುಪಲು ಯಶಸ್ವಿಯಾಯಿತು, ಪ್ಲೇಆಫ್ ರೇಸ್ನಲ್ಲಿ ನೆಟ್ ರನ್ ರೇಟ್ನಲ್ಲಿ KKR ಅನ್ನು ಸೋಲಿಸಿತು. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಅಭಿಯಾನ ಕೊನೆಗೊಂಡಿತ್ತು. ವಿರಾಟ್ ಕೊಯ್ಲಿ ಕಳೆದ ಋತುವಿನಲ್ಲಿ 15 ಪಂದ್ಯಗಳಿಂದ 466 ರನ್ ಗಳಿಸಿದ್ದರು.

2021 : ಈ ಋತುವಿನಲ್ಲಿ, ಒಟ್ಟಾರೆ ಪ್ರದರ್ಶನದ ದೃಷ್ಟಿಯಿಂದ RCB ವಾಸ್ತವವಾಗಿ ಉತ್ತಮ ತಂಡಗಳಲ್ಲಿ ಒಂದಾಗಿದೆ. ಪ್ಲೇಆಫ್ ತಲುಪಿದರೂ ಅಗ್ರ ಎರಡು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದ್ದು, ಎಲಿಮಿನೇಟರ್ ಹಂತದಲ್ಲಿ ಕೊನೆಗೊಂಡಿತು, ಈ ಬಾರಿ KKR ವಿರುದ್ಧ 4 ವಿಕೆಟ್ ನಷ್ಟದಿಂದಾಗಿ. ಬ್ಯಾಟ್ಸ್‌ಮನ್ ವಿರಾಟ್ 15 ಪಂದ್ಯಗಳಲ್ಲಿ 405 ರನ್ ಗಳಿಸಿದರು, ಗರಿಷ್ಠ ಸ್ಕೋರ್ 72. ಅವರು ಈ ಋತುವಿನಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ವಿರಾಟ್‌ ಕೊಯ್ಲಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಸಿದ್ದರು.

ಆರ್‌ಸಿಬಿ ಈ ಬಾರಿ ಪ್ರಬಲ ತಂಡವನ್ನು ಕಟ್ಟುವ ವಿಶ್ವಾಸದಲ್ಲಿದೆ. ಈಗಾಗಲೇ ಮೂವರು ಬಲಿಷ್ಠ ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಂಡಿದೆ. ವಿರಾಟ್‌ ಕೊಯ್ಲಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರೂ ಕೂಡ ಅವರನ್ನೇ IPL 2022 ರಲ್ಲಿ ನಾಯಕರನ್ನಾಗಿ ಮುಂದುವರಿಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡ ಫ್ಲ್ಯಾನ್‌ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅಭಿಮಾನಿಗಳು ಈ ಬಾರಿ ಆರ್‌ಸಿಬಿ ನಾಯಕ ಯಾರಾಗ್ತಾರೆ ಅನ್ನೋದನ್ನು ನೋಡೋದಕ್ಕೆ ಮೆಗಾ ಹರಾಜಿನ ವರೆಗೂ ಕಾಯಲೇ ಬೇಕಾಗಿದೆ.

ಇದನ್ನೂ ಓದಿ : KL RAHUL Captain : ಭಾರತ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ

ಇದನ್ನೂ ಓದಿ : David Warner Join RCB : ಡೇವಿಡ್‌ ವಾರ್ನರ್‌ IPL 2022ನಲ್ಲಿ ಆರ್‌ಸಿಬಿ ಸೇರುವುದು ಖಚಿತ ಎಂದ ವಿರಾಟ್‌ ಕೊಯ್ಲಿ

ಇದನ್ನೂ ಓದಿ : Lucknow and Ahmedabad team : ಈ ನಾಲ್ವರು ಆಟಗಾರರನ್ನು ಖರೀದಿಸಲಿವೆ ಲಕ್ನೋ, ಅಹಮದಾಬಾದ್‌

(Virat Kohli Again Captain for RCB in IPL 2022)

Comments are closed.