PAN card is fake or not Fraud Alert : ದಿ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ಕಾರ್ಡ್ ಎನ್ನುವುದು ಭಾರತೀಯರ ಪಾಲಿಗೆ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ.ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ಅಥವಾ ಮತದಾರರ ಚೀಟಿಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದುಕೊಂಡಾಗ ಅಥವಾ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳ ಸಂದರ್ಭದಲ್ಲಿ ನಾವು ಗುರುತಿನ ಚೀಟಿ ರೂಪದಲ್ಲಿ ಈ ಪಾನ್ಕಾರ್ಡ್ಗಳನ್ನು ಬಳಕೆ ಮಾಡುತ್ತೇವೆ.
ಆದರೆ ಪಾನ್ ಕಾರ್ಡ್ ಬಳಸಿ ಅನೇಕ ವಂಚನೆ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದ ಬಳಿಕ ಅಂದರೆ 2018ರ ಜುಲೈನಿಂದ ಪಾನ್ ಕಾರ್ಡ್ ಪಡೆದ ಜನರಿಗೆ ಕ್ವಿಕ್ ರೆಸ್ಪಾನ್ಸ್ ಕೋಡ್ನ್ನು ನೀಡಲಾಗಿದೆ. ಈ ಕ್ಯೂಆರ್ ಕೋಡ್ಗಳು ನಕಲಿ ಹಾಗೂ ಅಸಲಿ ಪಾನ್ ಕಾರ್ಡ್ಗಳನ್ನು ಪತ್ತೆ ಮಾಡಲು ಅತ್ಯಂತ ಸಹಕಾರಿಯಾಗಿದೆ. ಇದಕ್ಕಾಗಿ ನಿಮ್ಮ ಬಳಿ ಒಂದು ಸ್ಮಾರ್ಟ್ ಫೋನ್ ಹಾಗೂ ಆದಾಯ ತೆರಿಗೆ ಇಲಾಖೆ ರಿಲೀಸ್ ಮಾಡಿರುವ ಒಂದು ಅಪ್ಲಿಕೇಶನ್ ಇದ್ದರೆ ಸಾಕು.
ಪಾನ್ ಕಾರ್ಡ್ ನಕಲಿ ಎಂದು ಕಂಡುಹಿಡಿಯುವುದು ಹೇಗೆ..?
- ನಿಮ್ಮ ಮೊಬೈಲ್ ಫೋನ್ನಿಂದ ಪ್ಲೇಸ್ಟೋರ್ಗೆ ಭೇಟಿ ಕೊಡಿ. ಹಾಗೂ ಇಲ್ಲಿ ಪಾನ್ ಕ್ಯೂಆರ್ ರೀಡರ್ ಎಂಬ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಿ.
- ಈ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮುನ್ನ ಒಂದು ವಿಚಾರವನ್ನು ನೀವು ಗಮನಿಸಲೇಬೇಕು. ಈಗೆಲ್ಲ ಸಾಕಷ್ಟು ನಕಲಿ ಅಪ್ಲಿಕೇಶನ್ ಕೂಡ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಹೀಗಾಗಿ ಯಾವ ಅಪ್ಲಿಕೇಶನ್ನ ಡೆವಲಪರ್ ಹೆಸರು NSDL e-Governance Infrastructure Limited’ ಎಂದಿದೆಯೋ ಅದೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
- ಒಮ್ಮೆ ಅಪ್ಲಿಕೇಶನ್ ಡೌನ್ಲೋಡ್ ಆಗುತ್ತಿದ್ದಂತೆಯೇ ಆ್ಯಪ್ನ್ನು ಓಪನ್ ಮಾಡಿ. ನಿಮಗೆ ಈಗ ಕ್ಯಾಮರಾ ವೀವ್ ಫೈಂಡರ್ ಬಳಿಯಲ್ಲಿ ಒಂದು ಹಸಿರು ಬಣ್ಣದ + ಆಕೃತಿ ಕಾಣಲಿದೆ.
- ಈಗ ವೀವ್ ಫೈಂಡರ್ ಸಹಾಯದಿಂದ ಪಾನ್ ಕಾರ್ಡ್ನ ಮೇಲಿರುವ ಕ್ಯೂ ಆರ್ ಕೋಡ್ನ್ನು ಕ್ಲಿಕ್ಕಿಸಿ. ಈ ಫೋಟೋ ಕ್ಲಿಕ್ಕಿಸುವ ವೇಳೆಯಲ್ಲಿ ಕ್ಯೂಆರ್ ಕೋಡ್ ಸ್ಪಷ್ಟವಾಗಿ ಕಾಣುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಒಮ್ಮೆ ನೀವು ಕ್ಯಾಮರಾದಲ್ಲಿ ಪಾನ್ ಕಾರ್ಡ್ ಫೋಟೋ ಕ್ಲಿಕ್ಕಿಸಿದ ಬಳಿಕ ನಿಮ್ಮ ಮೊಬೈಲ್ಗೆ ಪಾನ್ ಕಾರ್ಡ್ ಮಾಹಿತಿ ಬರಲಿದೆ.
- ಈಗ ನೀವು ಪಾನ್ ಕಾರ್ಡ್ಗೂ ಹಾಗೂ ನಿಮ್ಮ ಮೊಬೈಲ್ಗೆ ಬಂದ ದಾಖಲೆಗಳು ಹೊಂದಾಣಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ನೋಡಿ .
- ಮೊಬೈಲ್ನಲ್ಲಿ ಗೋಚರವಾಗುತ್ತಿರುವ ಮಾಹಿತಿಗೂ ಹಾಗೂ ಪಾನ್ ಕಾರ್ಡ್ನ ಮಾಹಿತಿಗೂ ಹೊಂದಾಣಿಕೆ ಆಗದೇ ಇದಲ್ಲಿ ಅದು ನಕಲಿ ಪಾನ್ ಕಾರ್ಡ್ ಎಂದರ್ಥವಾಗಿದೆ.
ಇದನ್ನು ಓದಿ : 100 Cantonment Zone: 15 ದಿನ 100 ಕಂಟೋನ್ಮೆಂಟ್ ಝೋನ್ : ಸದ್ದಿಲ್ಲದೇ ಹೆಚ್ಚುತ್ತಿದೆ ಕೊರೋನಾ
ಇದನ್ನೂ ಓದಿ : New Rules : ಮುಂದಿನ ತಿಂಗಳಿಂದ ಬದಲಾಗಲಿವೆ ಈ ನಿಯಮ : ಚೆಕ್‌ಬುಕ್, ಪಿಂಚಣಿ, ಡೆಬಿಟ್ ಕಾರ್ಡ್ ನಿಯಮ ಅರಿತುಕೊಳ್ಳಿ
Fraud Alert ! Find out if a PAN card is fake or not – Here’s how